ಉಡುಪಿ: ಯುವಕ ನಾಪತ್ತೆ

ಉಡುಪಿ: ಮೆಕಾನಿಕಲ್ ಎಂಜಿನಿಯರಿಂಗ್ ಮುಗಿಸಿ ಕೆಲಸದ ಹುಡುಕಾಟದಲ್ಲಿದ್ದ ಆಯುಷ್ (22) ಎಂಬ ಯುವಕ ಜೂನ್ 24 ರಂದು ತನ್ನ ತಂದೆಯೊಂದಿಗೆ ಜಿಲ್ಲಾಸ್ಪತ್ರೆಗೆ ತೆರಳಿದ್ದು, ಬೆಳಗ್ಗೆ 11.30 ರ ನಂತರ ಆಸ್ಪತ್ರೆಯಿಂದ ವಾಪಾಸು ಮನೆಗೂ ಬಾರದೆ, ಮೊಬೈಲ್ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿರುತ್ತಾರೆ. 175 ಸೆಂಮೀ ಎತ್ತರ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ, ತುಳು ಹಾಗೂ ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ನಗರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಫಸಲ್ ಬಿಮಾ ಯೋಜನೆಯಡಿ ಬೆಳೆ ಸಮೀಕ್ಷೆ: ತಿರಸ್ಕೃತ ಅರ್ಜಿಯ ಆಕ್ಷೇಪಣೆ ಆಹ್ವಾನ

ಉಡುಪಿ: ಕೃಷಿ ಇಲಾಖೆಯ ವತಿಯಿಂದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 2019 ರ ಮುಂಗಾರು ಹಂಗಾಮಿನಲ್ಲಿ ಬೆಳೆ ಸಮೀಕ್ಷೆ ದತ್ತಾಶದೊಂದಿಗೆ ತಾಳೆಯಾಗದ ಪ್ರಸ್ತಾವನೆಗಳನ್ನು ತಾಲೂಕು ಮಟ್ಟದ ಅಧಿಕಾರಿಗಳು ಪರಿಶೀಲಿಸಿದ ನಂತರ ಅಂತಿಮವಾಗಿ ವಿಮಾ ಸಂಸ್ಥೆಯವರು ವಿಮೆ ನೋಂದಾಯಿಸಿದ ಬೆಳೆಗೂ ಹಾಗೂ ಬೆಳೆ ಸಮೀಕ್ಷಾ ವರದಿಗೂ ತಾಳೆಯಾಗದಿರುವುದರಿಂದ ತಿರಸ್ಕರಿಸಿರುತ್ತಾರೆ. ತಿರಸ್ಕೃತ ಪ್ರಕರಣಗಳ ಪಟ್ಟಿಯನ್ನು ಉಡುಪಿಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಕೋಟ, ಬ್ರಹ್ಮಾವರ ಹಾಗೂ ಕಾಪು ರೈತ ಸಂಪರ್ಕ ಕೇಂದ್ರ ಮತ್ತು ಸಂಬಂಧಪಟ್ಟ ಗ್ರಾಮ ಪಂಚಾಯತ್ ಸೂಚನಾ […]

ಕಳೆ ಕೀಳುವ ಕೆಲಸಕ್ಕೆ ಶಾಶ್ವತ ಪರಿಹಾರ ನೀಡುವ ಈಸಿ ಲೈಫ್- ವೀಡ್ ಮ್ಯಾಟ್

ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ಸೇವಾ ಕೇಂದ್ರ ನಿಮ್ಮ ಜೀವನವನ್ನು ಸುಲಭವಾಗಿಸಲು ಈಸಿ ಲೈಫ್ ಎಂಟರ್ ಪ್ರೈಸಸ್ ವೀಡ್ ಮ್ಯಾಟ್ ಅನ್ನು ಪರಿಚಯಿಸುತ್ತಿದೆ. ಮನೆ, ಆಫೀಸು, ಶಾಲೆ-ಕಾಲೇಜು, ದೇವಸ್ಥಾನ ಅಥವಾ ಇನ್ನಾವುದೇ ಕಟ್ಟಡದ ಪರಿಸರದಲ್ಲಿ ಕಳೆ ಉತ್ಪತ್ತಿಯಾಗುತ್ತಿದ್ದು, ಪ್ರತಿ ಬಾರಿಯೂ ಕಳೆ ಕೀಳಿಸಿ ಹೈರಾಣಾಗುತ್ತಿದ್ದಲ್ಲಿ, ಈಸಿ ಲೈಫ್ ಎಂಟರ್ ಪ್ರೈಸಸ್ ನ ಕಳೆ ಚಾಪೆ(ವೀಡ್ ಮ್ಯಾಟ್) ಅನ್ನು ಒಮ್ಮೆ ಹಾಕಿಸಿ ಬಿಟ್ಟರೆ ಮುಗಿಯಿತು. ಬಾರಿ ಬಾರಿಗೆ ಕಳೆ ಕೀಳುವ ಕೆಲಸಕ್ಕೆ ಮುಕ್ತಿ ಹಾಡಿ ಶಾಶ್ವತ ಪರಿಹಾರ ಪಡೆಯಲು […]

ಮಂಗಳೂರು: ಜೂ.27 ರಂದು ಖಾಸಗಿ ಕಂಪೆನಿಗಳಿಂದ ನೇರ ಸಂದರ್ಶನ

ಮಂಗಳೂರು: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಖಾಸಗಿ ಕಂಪೆನಿಗಳ ನೇರ ಸಂದರ್ಶನವನ್ನು ಇದೇ ಜೂ.27ರ ಸೋಮವಾರ ಹಮ್ಮಿಕೊಳ್ಳಲಾಗಿದೆ. ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಹಾಗೂ ಯಾವುದೇ ಪದವಿ ತೇರ್ಗಡೆಯಾದ ಆಸಕ್ತ ಅಭ್ಯರ್ಥಿಗಳು ಸ್ವ ವಿವರದ ಬಯೋಡೇಟಾದೊಂದಿಗೆ ನಗರದ ಮಂಗಳೂರು ಮಹಾನಗರ ಪಾಲಿಕೆ ಕಟ್ಟಡದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಹಮ್ಮಿಕೊಂಡಿರುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.

ಶ್ರೀಕೃಷ್ಣ ಮಠ: ಶ್ರೀಮತಿ ಭಟ್ ರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

ಉಡುಪಿ: ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಮಧುರ ಧ್ವನಿ ಚಾರಿಟೇಬಲ್ ಟ್ರಸ್ಟ್(ರಿ) ನ ಶ್ರೀಮತಿ ಭಟ್ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಿತು. ವಯೊಲಿನ್ ನಲ್ಲಿ ಶರ್ಮಿಳಾ ರಾವ್ ಮತ್ತು ತಬಲಾದಲ್ಲಿ ಬಾಲಚಂದ್ರ ಭಾಗವತ್ ಸಹಕರಿಸಿದರು.