ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು: ಪ್ರತಿಭಾ ಪ್ರದರ್ಶನ ಸಂಪನ್ನ

ಕುಂದಾಪುರ : ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ 2021-22ನೇ ಸಾಲಿನ ಪ್ರತಿಭಾ ಪ್ರದರ್ಶನ ಜೂನ್ 03 ರಂದು ಸಂಪನ್ನಗೊಂಡಿತು. ಕಾಲೇಜಿನ ಅಂತರ್-ತರಗತಿ ಪ್ರತಿಭಾ ಪ್ರದರ್ಶನ ಸ್ಪರ್ಧೆಯಲ್ಲಿ 14 ತಂಡಗಳು ಭಾಗವಹಿಸಿದ್ದವು. ಬಹಳ ವೈಶಿಷ್ಟ್ಯಮಯ ವಿಭಿನ್ನ ಶೈಲಿಯಲ್ಲಿ ಕಾರ್ಯಕ್ರಮವು ಮೂಡಿಬಂದಿತು. ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ. ಉಮೇಶ್ ಶೆಟ್ಟಿ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಹಾಗೂ ತೀರ್ಪುಗಾರರಾಗಿ ಆಗಮಿಸಿದ್ದ ಕಾರ್ಕಳದ ಶಿಕ್ಷಕಿ, ನೃತ್ಯ ನಿರೂಪಕಿ ವಂದನಾ ರೈ ಮಾತನಾಡಿ ಭಾಗವಹಿಸಿದ […]

ರಾಜ್ಯದಲ್ಲಿ ರೆಸಾರ್ಟ್ ರಾಜಕೀಯ: ‘ಅಡ್ಡ ಮತದಾನ’ದ ಭಯದಿಂದ ಶಾಸಕರನ್ನು ಹೋಟೆಲ್‌ಗೆ ಸ್ಥಳಾಂತರಿಸಿದ ಜನತಾ ದಳ

ಬೆಂಗಳೂರು: ರಾಜ್ಯಸಭಾ ಚುನಾವಣೆಗೂ ಮುನ್ನಿನ ರೆಸಾರ್ಟ್ ರಾಜಕಾರಣ ರಾಜ್ಯದ ಅಂಗಳಕ್ಕೂ ಕಾಲಿಟ್ಟಿದೆ. ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲಿ ‘ಹೋಟೆಲ್ ರಾಜಕೀಯ’ದ ಸೂಚನೆಯ ನಂತರ, ಜನತಾ ದಳ (ಜಾತ್ಯತೀತ) ತನ್ನ ಎಲ್ಲಾ 32 ಶಾಸಕರನ್ನು ಬೆಂಗಳೂರಿನ 5-ಸ್ಟಾರ್ ಹೋಟೆಲ್‌ಗೆ ಸ್ಥಳಾಂತರಿಸಿದೆ. ರಾಜ್ಯದಿಂದ ನಾಲ್ಕನೇ ಮತ್ತು ಕೊನೆಯ ಸ್ಥಾನಕ್ಕಾಗಿ ಪೈಪೋಟಿಯು ಬಿಗಿಯಾಗಿರುವ ಹೊತ್ತಿನಲ್ಲಿ ಈ ಬೆಳವಣಿಗೆ ಕಂಡುಬಂದಿದೆ. ಜೆಡಿಎಸ್ ತನ್ನ ಅಭ್ಯರ್ಥಿಯ ಗೆಲುವನ್ನು ಖಚಿತಪಡಿಸಿಕೊಳ್ಳಲು ಕಾಂಗ್ರೆಸ್‌ನ ಬೆಂಬಲವನ್ನು ಕೋರುವುದನ್ನು ಮುಂದುವರೆಸಿದರೆ, ಮತ್ತೊಂದೆಡೆ ಕಾಂಗ್ರೆಸ್ ಸಹ ಜೆಡಿಎಸ್ ನ ಎಲ್ಲಾ 32 ಶಾಸಕರ […]

18 ತಿಂಗಳ ಮಗುವನ್ನು ಕೊಳವೆ ಬಾವಿಯಿಂದ ಸುರಕ್ಷಿತವಾಗಿ ರಕ್ಷಿಸಿದ ಭಾರತೀಯ ಸೇನೆ

ಗುಜರಾತ್: ಗೋಲ್ಡನ್ ಕಟಾರ್ ಆರ್ಟಿಲರಿ ಬ್ರಿಗೇಡ್‌ನ ಕ್ಯಾಪ್ಟನ್ ಸೌರಭ್ ಮತ್ತು ಅವರ ತಂಡವು ಗುಜರಾತಿನ ಸುರೇಂದ್ರ ನಗರದಲ್ಲಿ 300 ಅಡಿ ಆಳದ ಕೊಳವೆ ಬಾವಿಯಿಂದ 18 ತಿಂಗಳ ಮಗು ಶಿವಂನನ್ನು ಸುರಕ್ಷಿತವಾಗಿ ರಕ್ಷಿಸಿ, ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ನಾಗರಿಕರ ಸುರಕ್ಷತೆ ಮತ್ತು ಭದ್ರತೆಯ ವಿಷಯದಲ್ಲಿ ತನ್ನ ಅಚಲವಾದ ಬದ್ಧತೆಗೆ ಮತ್ತೊಂದು ಪುರಾವೆಯನ್ನು ನೀಡುತ್ತಾ, ಭಾರತೀಯ ಸೇನೆಯು ಸುರೇಂದ್ರನಗರದ ಧರಂಗಧರ ತಾಲೂಕಿನ ದುದಾಪುರ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ 18 ತಿಂಗಳ ಮಗುವನ್ನು ರಕ್ಷಿಸಿದೆ. ಮಂಗಳವಾರ ತಡರಾತ್ರಿ ಮಗು […]

ಕಾಶ್ಮೀರದ ಭಯೋತ್ಪಾದಕ ಬೆಂಗಳೂರಿನಲ್ಲಿ ಬಂಧನ: ತನಿಖೆಯನ್ನು ತೀವ್ರಗೊಳಿಸಿದ ಪೊಲೀಸರು

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಕಾಶ್ಮೀರದ ಭಯೋತ್ಪಾದಕ ತಾಲಿಬ್ ಹುಸೇನ್ ಬೆಂಗಳೂರಿನಲ್ಲಿ ಬಂಧನಕ್ಕೊಳಗಾದ ಬಳಿಕ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. “ಬೆಂಗಳೂರಿನಲ್ಲಿ ಆತನಿಗೆ ಯಾರು ಆಶ್ರಯ ನೀಡಿದ್ದಾರೆ, ಆತ ಎಲ್ಲಿ ಉಳಿದುಕೊಂಡಿದ್ದಾನೆ ಮತ್ತು ಯಾವ ಸಂಘಟನೆಗಳು ಅಥವಾ ಜನರು ಆತನನ್ನು ಬೆಂಬಲಿಸುತ್ತಿದ್ದಾರೆ ಎಂಬ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ” ಎಂದು ಅವರು ಮಾಧ್ಯಮಗಳಿಗೆ ಹೇಳಿದ್ದಾರೆ. ಭದ್ರತಾ ಕಾರಣಗಳಿಗಾಗಿ ನಡೆಯುತ್ತಿರುವ ತನಿಖೆಯ ವಿವರಗಳನ್ನು […]

ಜಲಾಯನ ಅಭಿವೃದ್ಧಿ ಇಲಾಖೆ ವತಿಯಿಂದ ರೈತ ಉತ್ಪಾದಕ ಸಂಸ್ಥೆಗಳಿಗೆ ಏಕ ರೂಪ ಬ್ರಾಂಡ್ ರೂಪಿಸುವ ಸ್ಪರ್ಧೆ

ಉಡುಪಿ: ಜಲಾಯನ ಅಭಿವೃದ್ಧಿ ಇಲಾಖೆ, ಬೆಂಗಳೂರು ವತಿಯಿಂದ ರಾಜ್ಯದ ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಸಣ್ಣ ಮತ್ತು ಅತೀ ಸಣ್ಣ ರೈತರನ್ನು ಒಗ್ಗೂಡಿಸಿ ಅವರ ಉತ್ಪನ್ನಗಳಿಗೆ ವಿಶಿಷ್ಟ ಹಾಗೂ ವಿನೂತನವಾದ ಏಕರೂಪ ಬ್ರ್ಯಾಂಡಿಂಗ್ ಅನ್ನು ವಿನ್ಯಾಸಗೊಳಿಸಿ, ನೇರವಾಗಿ ಗ್ರಾಹಕರಿಗೆ ತಲುಪಿಸುವ ಸಲುವಾಗಿ ರೈತ ಉತ್ಪಾದಕ ಸಂಸ್ಥೆಗಳಿಗೆ ಏಕರೂಪ ಬ್ರಾಂಡ್ ರೂಪಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ರೈತರು, ಗ್ರಾಹಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಅತ್ಯುತ್ತಮ ಬ್ರಾಂಡ್, ವಿಶಿಷ್ಟ ಅಡಿ ಬರಹ ಹಾಗೂ ಆಕರ್ಷಕವಾದ ಲೋಗೋಗಳಿಗೆ ಪ್ರಥಮ 75,000 […]