ಸಾಫ್ಟ್ ವೇರ್ ಕೋಡಿಂಗ್ ನಲ್ಲೂ ತಲೈವ ಹವಾ: ಸೂಪರ್‌ಸ್ಟಾರ್‌ ರಜನಿಕಾಂತ್ ಅವರ ಸಂಭಾಷಣೆಯಿಂದ ಪ್ರೇರಿತವಾದ ಪ್ರೋಗ್ರಾಮಿಂಗ್ ಭಾಷೆ ರಜಿನಿ++ ಬಿಡುಗಡೆ

ಆದಿತ್ಯ ಶಂಕರ್ ಎಂಬ ಪ್ರೋಗ್ರಾಮರ್ ರಜನಿಕಾಂತ್ ಆಧಾರಿತ ಪ್ರೋಗ್ರಾಮಿಂಗ್ ಭಾಷೆಯಾದ ರಜಿನಿ++ ಅಥವಾ ರಜಿನಿಪ್ ಅನ್ನು ಪ್ರಪಂಚದಾದ್ಯಂತ ಇರುವ ಎಲ್ಲಾ ಪ್ರೋಗ್ರಾಮರ್‌ಗಳಿಗಾಗಿ ಬಿಡುಗಡೆ ಮಾಡಿದ್ದಾರೆ. ರಜಿನಿ++ ಅಥವಾ ರಜಿನಿಪ್ ಎಂಬುದು ಪೈಥಾನ್-ಆಧಾರಿತ ಪ್ರೋಗ್ರಾಮಿಂಗ್ ಭಾಷೆಯಾಗಿದ್ದು, ಸೂಪರ್‌ಸ್ಟಾರ್ ರಜನಿಕಾಂತ್ ಅವರ ಜನಪ್ರಿಯ ಸಂಭಾಷಣೆಗಳಿಂದ ತೆಗೆದುಕೊಳ್ಳಲಾದ ಸರಳ ಸಿಂಟ್ಯಾಕ್ಸ್ ಮತ್ತು ಕೀವರ್ಡ್‌ಗಳನ್ನು ಹೊಂದಿದೆ. ಇದು ಅಪ್ರತಿಮ ಮತ್ತು ಗೌರವಾನ್ವಿತ ದಕ್ಷಿಣ ಭಾರತದ ಸೂಪರ್‌ಸ್ಟಾರ್‌, ತಲೈವ ರಜನಿಕಾಂತ್ ಗಾಗಿ ಆದಿತ್ಯ ಶಂಕರ್ ರಚಿಸಿದ ನಿಗೂಢ ಪ್ರೋಗ್ರಾಮಿಂಗ್ ಭಾಷೆಯಾಗಿದೆ. ಈ ಪ್ರೋಗ್ರಾಮಿಂಗ್ ಭಾಷೆಯನ್ನು […]

ಮರಳಿ ಗೂಡು ಸೇರಲಿದೆ ಆರ್‌ಸಿಬಿ ಹಕ್ಕಿ: 2023 ರ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಮರಳುತ್ತೇನೆಂದ ಎಬಿ ಡಿವಿಲಿಯರ್ಸ್!

ಬೆಂಗಳೂರು: ಮಿಸ್ಟರ್ 360 ಡಿಗ್ರಿ ಎಂದು ಪರಿಗಣಿಸಲಾಗುವ, ಕ್ರಿಕೆಟ್ ಜಗತ್ತಿನ ಬಹು ಬೇಡಿಕೆಯ ಆಟಗಾರ, ಆರ್‌ಸಿಬಿಯ ಹಕ್ಕಿ ಎಬಿ ಡಿವಿಲಿಯರ್ಸ್ ಮರಳಿ ಗೂಡು ಸೇರಲಿದ್ದಾರೆ. ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಕೆಲವು ತಿಂಗಳ ನಂತರ, ಎಬಿ ಡಿವಿಲಿಯರ್ಸ್ ತಮ್ಮ ಐಪಿಎಲ್ ಫ್ರಾಂಚೈಸಿಯಾದ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಮರಳುವುದಾಗಿ ಹೇಳಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿ ಮುಂದಿನ ವರ್ಷ ಐಪಿಎಲ್‌ಗೆ “ಖಂಡಿತವಾಗಿ” ಮರಳಲಿದ್ದೇನೆ ಎಂದು ಅವರು ಹೇಳಿದ್ದಾರೆ. “ವಿರಾಟ್ ಅದನ್ನು ಖಚಿತಪಡಿಸಿದ್ದು ಕೇಳಿ ನನಗೆ ಖುಷಿಯಾಗಿದೆ. ನಿಜ ಹೇಳಬೇಕೆಂದರೆ, […]

ಗೀತಾಂಜಲಿ ಶ್ರೀ: ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಗೆದ್ದ ಪ್ರಪ್ರಥಮ ಭಾರತೀಯ ಮಹಿಳೆ

ನವದೆಹಲಿ: 64 ವರ್ಷ ವಯಸ್ಸಿನ ಹಿಂದಿ ಕಾದಂಬರಿಕಾರ್ತಿ, ಭಾರತೀಯ ಲೇಖಕಿ ಗೀತಾಂಜಲಿ ಶ್ರೀ ಮತ್ತು ಅಮೇರಿಕನ್ ಅನುವಾದಕಿ ಡೈಸಿ ರಾಕ್‌ವೆಲ್ ಅವರ ‘ಟಾಂಬ್ ಆಫ್ ಸ್ಯಾಂಡ್’ ಕಾದಂಬರಿಗೆ ಸಾಹಿತ್ಯ ಕ್ಷೇತ್ರದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿದೆ. ಮೂಲತಃ ಹಿಂದಿಯಲ್ಲಿ ಬರೆದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾದ ಮೊದಲ ಪುಸ್ತಕ ಇದಾಗಿದ್ದು, ಪ್ರಶಸ್ತಿಯನ್ನು ಗೊದ್ದ ಮೊದಲ ಭಾರತೀಯ ಮಹಿಳೆ ಎನ್ನುವ ಹೆಗ್ಗಳಿಕೆಗೆ ಗೀತಾಂಜಲಿ ಪಾತ್ರರಾಗಿದ್ದಾರೆ. 1947ರಲ್ಲಿ ಭಾರತ ಮತ್ತು ಪಾಕಿಸ್ತಾನದ ವಿಭಜನೆಯ […]

ಭಾರತದ ರಸ್ತೆಗಳಲ್ಲಿ ಇಳಿಯಲಿದೆಯೆ ಅಂಬಾಸಿಡರ್ 2.0? ಇವಿ ಅವತಾರದಲ್ಲಿ ಪುನರಾಗಮನಕ್ಕೆ ಸಜ್ಜಾಗುತ್ತಿದೆಯೆ ಹಳೆ ಮಾಡೆಲ್ ಕಾರು?

ನವದೆಹಲಿ: ಎಪ್ಪತ್ತರ ದಶಕದಲ್ಲಿ 75 ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದ, ಬಹು ಸುಪ್ರಸಿದ್ದ ಸಾಂಪ್ರದಾಯಿಕ ಅಂಬಾಸಿಡರ್ ಕಾರುಗಳು ತೆರೆಮರೆಗೆ ಸರಿದು ಹಲವು ವರ್ಷಗಳಾಗಿವೆ. ಆದರೀಗ ಹಳೆ ಮಾಡೆಲ್ ಕಾರುಗಳನ್ನು ಮತ್ತೆ ಹೊಸ ಅವತಾರದಲ್ಲಿ ಭಾರತದ ರಸ್ತೆಗಿಳಿಸಲು ಮಾತೃ ಕಂಪನಿ ಹಿಂದೂಸ್ತಾನ್ ಮೋಟಾರ್ಸ್ ಸಜ್ಜಾಗುತ್ತಿದೆ ಎಂದು ವರದಿಯಾಗಿದೆ. ತನ್ನ ಐಕಾನಿಕ್ ಅಂಬಾಸಿಡರ್ ಕಾರುಗಳಿಗೆ ಭಾರತದಲ್ಲಿ ಪ್ರಸಿದ್ಧವಾಗಿರುವ ಹಿಂದೂಸ್ತಾನ್ ಮೋಟಾರ್ಸ್, ಭಾರತೀಯ ಮಾರುಕಟ್ಟೆಯಲ್ಲಿ ತನ್ನನ್ನು ಪುನರ್ ಸ್ಥಾಪಿಸಲು ಯೋಜಿಸುತ್ತಿದ್ದು, ಈ ಬಾರಿ ಎಲೆಕ್ಟ್ರಿಕ್ ವಾಹನ ತಯಾರಕನಾಗಿ ಹೊರಹೊಮ್ಮಲಿದೆ ಎನ್ನಲಾಗಿದೆ. ತನ್ನ […]

ನಾಯಿಯಂತೆ ಕಾಣಲು ₹ 12 ಲಕ್ಷ ಖರ್ಚು? ಮಾನವನಿಂದ ನಾಯಿಯಾಗಿ ಬದಲಾದ ಜಪಾನ್ ವ್ಯಕ್ತಿ!!

ಟೋಕಿಯೋ: ಇದು ನಾಯಿಯಲ್ಲ, ಮಾನವ! ಅಥವಾ ಇದು ನಾಯಿಯೋ, ಮಾನವನೋ? ಗೊತ್ತೆ ಆಗುವುದಿಲ್ಲ!! ಇಂತಹ ವಿಲಕ್ಷಣ ಘಟನೆಯೊಂದರಲ್ಲಿ, ಜಪಾನ್‌ನ ವ್ಯಕ್ತಿಯೊಬ್ಬರು ₹ 12 ಲಕ್ಷ ರೂಪಾಯಿಗಳನ್ನು ಖರ್ಚು ಮಾಡುವ ಮೂಲಕ ನಾಯಿಯಂತೆ ಕಾಣುವ ತಮ್ಮ ಬಹುದಿನದ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಟೋಕೋ ಹೆಸರಿನ ಈ ವ್ಯಕ್ತಿ ನಾಯಿಯಂತೆ ಕಾಣಲು ಯಾವುದೇ ರೀತಿಯ ವೈದ್ಯಕೀಯ ಶಸ್ತ್ರ ಚಿಕಿತ್ಸೆಯ ವಿಧಾನದ ಮೊರೆ ಹೋಗಲಿಲ್ಲ. ಕೋಲಿ- ಎನ್ನುವ ಶ್ವಾನ ತಳಿಯಂತೆ ಕಾಣಲು ಆತ Zeppet ಎಂಬ ವೃತ್ತಿಪರ ಏಜೆನ್ಸಿಯಿಂದ ಮಾನವ ಗಾತ್ರದ ನಾಯಿಯ […]