ಸಾಫ್ಟ್ ವೇರ್ ಕೋಡಿಂಗ್ ನಲ್ಲೂ ತಲೈವ ಹವಾ: ಸೂಪರ್‌ಸ್ಟಾರ್‌ ರಜನಿಕಾಂತ್ ಅವರ ಸಂಭಾಷಣೆಯಿಂದ ಪ್ರೇರಿತವಾದ ಪ್ರೋಗ್ರಾಮಿಂಗ್ ಭಾಷೆ ರಜಿನಿ++ ಬಿಡುಗಡೆ

ಆದಿತ್ಯ ಶಂಕರ್ ಎಂಬ ಪ್ರೋಗ್ರಾಮರ್ ರಜನಿಕಾಂತ್ ಆಧಾರಿತ ಪ್ರೋಗ್ರಾಮಿಂಗ್ ಭಾಷೆಯಾದ ರಜಿನಿ++ ಅಥವಾ ರಜಿನಿಪ್ ಅನ್ನು ಪ್ರಪಂಚದಾದ್ಯಂತ ಇರುವ ಎಲ್ಲಾ ಪ್ರೋಗ್ರಾಮರ್‌ಗಳಿಗಾಗಿ ಬಿಡುಗಡೆ ಮಾಡಿದ್ದಾರೆ.

ರಜಿನಿ++ ಅಥವಾ ರಜಿನಿಪ್ ಎಂಬುದು ಪೈಥಾನ್-ಆಧಾರಿತ ಪ್ರೋಗ್ರಾಮಿಂಗ್ ಭಾಷೆಯಾಗಿದ್ದು, ಸೂಪರ್‌ಸ್ಟಾರ್ ರಜನಿಕಾಂತ್ ಅವರ ಜನಪ್ರಿಯ ಸಂಭಾಷಣೆಗಳಿಂದ ತೆಗೆದುಕೊಳ್ಳಲಾದ ಸರಳ ಸಿಂಟ್ಯಾಕ್ಸ್ ಮತ್ತು ಕೀವರ್ಡ್‌ಗಳನ್ನು ಹೊಂದಿದೆ. ಇದು ಅಪ್ರತಿಮ ಮತ್ತು ಗೌರವಾನ್ವಿತ ದಕ್ಷಿಣ ಭಾರತದ ಸೂಪರ್‌ಸ್ಟಾರ್‌, ತಲೈವ ರಜನಿಕಾಂತ್ ಗಾಗಿ ಆದಿತ್ಯ ಶಂಕರ್ ರಚಿಸಿದ ನಿಗೂಢ ಪ್ರೋಗ್ರಾಮಿಂಗ್ ಭಾಷೆಯಾಗಿದೆ.

ಈ ಪ್ರೋಗ್ರಾಮಿಂಗ್ ಭಾಷೆಯನ್ನು ಕೋಡಿಂಗ್ ಮಾಡುವಾಗ ಪ್ರೋಗ್ರಾಮರ್‌ಗಳಿಗೆ ಪೈಥಾನ್ 3.8 ಅಥವಾ ಅದರ ನಂತರದ ಆವೃತ್ತಿಯ ಅಗತ್ಯವಿದೆ. ಮ್ಯಾಥ್ ಆಪ್ಸ್, ಯುನರಿ ಆಪ್ಸ್, ಪ್ರಿಂಟಿಂಗ್, ವೇರಿಯೇಬಲ್ ಡಿಕ್ಲರೇಶನ್, ವೇರಿಯಬಲ್ ಆಕ್ಸೆಸ್, ವೇರಿಯಬಲ್ ಮ್ಯಾನಿಪ್ಯುಲೇಷನ್ ಮತ್ತು ಅಸೈನ್‌ಮೆಂಟ್, ಡೇಟಾಟೈಪ್ಸ್, ಲಾಜಿಕಲ್ ಆಪ್ಸ್, ಇಫ್ ಸ್ಟೇಟ್‌ಮೆಂಟ್, ಇಫ್-ಎಲ್ಸ್ ಸ್ಟೇಟ್‌ಮೆಂಟ್, ಫಂಕ್ಷನ್‌ ವಿತ್ ಆರ್ಗ್ಯುಮೆಂಟ್‌ಗಳು, ಫಾರ್ ಲೂಪ್, ಲೂಪ್, ಫಂಕ್ಷನ್‌ಗಳು ಮತ್ತು ಫಂಕ್ಷನ್‌ಗಳು ರಿಟರ್ನ್‌ ಮುಂತಾದ ಫೀಚರ್ ಗಳನ್ನು ಕೋಡಿಂಗ್ ಹೊಂದಿದೆ.

ರಜನಿಪ್ ಪ್ರೋಗ್ರಾಂಗಳನ್ನು .rpp ಫೈಲ್‌ಗಳಾಗಿ ಸೇವ್ ಮಾಡಬಹುದು ಮತ್ತು ಪ್ರೋಗ್ರಾಮರ್‌ಗಳು ರಜಿನಿ++ ಪ್ರೋಗ್ರಾಂ ಅನ್ನು ರನ್ ಮಾಡಲು rajinipp run path/to/my program.rpp ನಂತಹ ಕಮಾಂಡ್ ಗಳನ್ನು ಬಳಸಬಹುದು. ಪೈಥಾನ್ ಸ್ಕ್ರಿಪ್ಟ್‌ಗಳಲ್ಲಿ ಕೋಡ್‌ಗಳನ್ನು ಯಶಸ್ವಿಯಾಗಿ ರನ್ ಮಾಡಬಹುದು ಆದರೆ ರಜಿನಿ ++ ಅನ್ನು ಎಂಟರ್‌ಪ್ರೈಸ್-ಮಟ್ಟದ ಸಾಫ್ಟ್‌ವೇರ್ ಅಭಿವೃದ್ಧಿಗಾಗಿ ವಿನ್ಯಾಸಗೊಳಿಸಲಾಗಿಲ್ಲ ಎನ್ನುವುದನ್ನು ಎಲ್ಲಾ ಪ್ರೋಗ್ರಾಮರ್ ಗಳು ಗಮನದಲ್ಲಿಡಬೇಕು ಎನ್ನಲಾಗಿದೆ.

ಕೋಡಿಂಗ್ ಉದ್ದೇಶಗಳಿಗಾಗಿ ರಜನಿ ++ ಮತ್ತು ರಜನಿಕಾಂತ್ ಅವರ ಸಂಭಾಷಣೆಗಳನ್ನು ಬಳಸುವುದು ಎಲ್ಲಾ ಭಾರತೀಯ ಸಿನಿಮಾ ಪ್ರೇಮಿಗಳಿಗೆ ಮತ್ತು ಪ್ರೋಗ್ರಾಮರ್‌ಗಳಿಗೆ ಹೆಚ್ಚು ಮನರಂಜನಾತ್ಮಕ ಮತ್ತು ಹೆಮ್ಮೆಯ ವಿಷಯವಾಗಿದೆ. ಇದು ಇತ್ತೀಚಿನ ದಿನಗಳಲ್ಲಿ ಟ್ರೆಂಡಿಸ್ಟ್ ಮತ್ತು ಉಪಯುಕ್ತ ಪ್ರೋಗ್ರಾಮಿಂಗ್ ಭಾಷೆಯಾದ ಪೈಥಾನ್ ಅನ್ನು ಸಂಪೂರ್ಣವಾಗಿ ಆಧರಿಸಿರುವುದರಿಂದ, ರಜಿನಿ ++ ದೀರ್ಘಕಾಲದವರೆಗೆ ಪ್ರೋಗ್ರಾಮಿಂಗ್ ಭಾಷೆಯ ಪಟ್ಟಿಯಲ್ಲಿ ಮುಂದುವರಿಯುತ್ತದೆ ಎಂದು ನಿರೀಕ್ಷಿಸಲಾಗಿದೆ.