ನಾಳೆ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ನ ಕ್ರೀಡಾ ಸಂಕೀರ್ಣ ಕಟ್ಟಡಕ್ಕೆ ಶಿಲಾನ್ಯಾಸ

ಬ್ರಹ್ಮಾವರ: ಬ್ರಹ್ಮಾವರ ಹೆರಂಜೆ ಕ್ಲಬ್ ನಿವೇಶನದಲ್ಲಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ನ ಕ್ರೀಡಾ ಸಂಕಿರಣ ಕಟ್ಟಡವು ಮೇ 23ರಂದು ಬೆಳಿಗ್ಗೆ 10 ಗಂಟೆಗೆ ಶಿಲಾನ್ಯಾಸ ನೆರವೇರಲಿದೆ. ಉಡುಪಿ ಶಾಸಕರಾದ ಕೆ. ರಘುಪತಿ ಭಟ್ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಅತಿಥಿಗಳಾಗಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಗುರ್ಮೆ ಫೌಂಡೇಶನ್ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಹುಬ್ಬಳ್ಳಿ ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ, […]

ಬಾರಕೂರಿನಲ್ಲಿ ಹೊಸದಾಗಿ ಪ್ರಾರಂಭಗೊಂಡ ಶ್ರೀ ಕಾಸನಾಡಿ ಸಿಟಿ ಟವರ್ ಉದ್ಘಾಟನಾ ಸಮಾರಂಭ

ಬಾರಕೂರು: ಮೇ 20 ಶುಕ್ರವಾರದಂದು ಬೆಳಿಗ್ಗೆ 11.30 ಕ್ಕೆ ಬಾರಕೂರಿನ ಮುಖ್ಯ ರಸ್ತೆಯಲ್ಲಿ ಹೊಸದಾಗಿ ಪ್ರಾರಂಭಗೊಂಡ ಶ್ರೀ ಕಾಸನಾಡಿ ಸಿಟಿ ಟವರ್ ಕಟ್ಟಡದ ಉದ್ಘಾಟನಾ ಸಮಾರಂಭವು ನೆರವೇರಿತು. ಬಾರಕೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಿ. ಶಾಂತರಾಮ್ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಎನ್. ಬಸವ ಶೆಟ್ಟಿ, ಮುಕ್ತೇಸರರು, ಕಾಸನಾಡಿ ಚಿಕ್ಕು ದೇವಸ್ಥಾನ, ನಾಗರಮಠ, ಬಾರಕೂರು, ರಾಘವಾ ಶೆಟ್ಟಿ ಚಾಂಪಾಡಿ, ಅಧ್ಯಕ್ಷರು, ಹೊಸಾಳ ಗರಡಿ ಜೀರ್ಣೋದ್ಧಾರ ಸಮಿತಿ, ಬಾರಕೂರು, ಬಿ. ಭುಜಂಗ ಶೆಟ್ಟಿ, ಬಾರಕೂರು, ಉದ್ಯಮಿಗಳು, […]

ಸರ್ಕಾರಿ ಪ.ಪೂ ಕಾಲೇಜುಗಳಲ್ಲಿ ಬಂಪರ್ ದಾಖಲಾತಿ: ಪಾಳಿಯಲ್ಲಿ ತರಗತಿಗಳನ್ನು ನಡೆಸಲು ನಿರ್ಧರಿಸಿದ ಸರಕಾರ

ಬೆಂಗಳೂರು: 2022-23ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಪಾಳಿಯ ಆಧಾರದ ಮೇಲೆ ಕಾರ್ಯನಿರ್ವಹಿಸಲಿವೆ ಎಂದು ಪ.ಪೂ ಶಿಕ್ಷಣ ಇಲಾಖೆಯು ತಿಳಿಸಿದೆ. ತನ್ನ ಪ.ಪೂ ಕಾಲೇಜುಗಳಲ್ಲಿ ಪ್ರವೇಶಾತಿಗಿರುವ ಬೇಡಿಕೆಯನ್ನು ಪರಿಗಣಿಸಿ, ಸರ್ಕಾರವು ಎರಡು ಪಾಳಿಯಲ್ಲಿ ತರಗತಿಗಳನ್ನು ನಡೆಸಲು ನಿರ್ಧರಿಸಿದೆ. ಆದಾಗ್ಯೂ, ಈ ವ್ಯವಸ್ಥೆಯು ಹೆಚ್ಚಿನ ಸಂಖ್ಯೆಯ ಪ್ರವೇಶಾತಿಗಳಿರುವ ಕಾಲೇಜುಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಸಂಖ್ಯೆ ಎಷ್ಟಿದ್ದರೂ ಸರ್ಕಾರಿ ಪ.ಪೂ ಕಾಲೇಜುಗಳು ಯಾವುದೇ ವಿದ್ಯಾರ್ಥಿಯ ಪ್ರವೇಶವನ್ನು ನಿರಾಕರಿಸುವಂತಿಲ್ಲ. ತರಗತಿಗಳು ಪಾಳಿಯಲ್ಲಿ ನಡೆಯುವುದನ್ನು ದೃಢಪಡಿಸಿದ ಪ್ರಾಥಮಿಕ ಮತ್ತು ಪ್ರೌಢ […]

ಉಡುಪಿ- ಟಾಟಾ ಗ್ರೂಪ್ ನ ಕ್ರೋಮಾ ಎಲೆಕ್ಟಾನಿಕ್ಸ್ ಮೆಗಾ ಸ್ಟೋರ್ ಶುಭಾರಂಭ

ಉಡುಪಿ: ಟಾಟಾ ಗ್ರೂಪ್ ನ ಭಾರತದ ಮೊಟ್ಟ ಮೊದಲ ಓಮ್ನಿ-ಚಾನೆಲ್ ಎಲೆಕ್ಟ್ರಾನಿಕ್ಸ್ ಚಿಲ್ಲರೆ ವ್ಯಾಪಾರಿ ಸಂಸ್ಥೆಯಾದ ಕ್ರೋಮಾ, ಉಡುಪಿ-ಮಣಿಪಾಲ ಹೆದ್ದಾರಿಯ ಕಾವೇರಿ ಕಾಂಪ್ಲೆಕ್ಸ್ ಎದುರುಗಡೆಯಲ್ಲಿ ತನ್ನ ಹೊಸ ಮಳಿಗೆಯನ್ನು ಪ್ರಾರಂಭಿಸಿದೆ. ತನ್ಮೂಲಕ ಕರ್ನಾಟಕದ ಕರಾವಳಿ ಜಿಲ್ಲೆಯನ್ನೂ ಸೇರಿಸಿ ರಾಜ್ಯಾದ್ಯಂತ ತನ್ನ ವಿಸ್ತರಣೆಯನ್ನು ಘೋಷಿಸಿದೆ. ಉಡುಪಿಯಲ್ಲಿ ಪ್ರಾರಂಭವಾಗಿರುವ ರಾಜ್ಯದ 9 ನೇ ಮಳಿಗೆಯಲ್ಲಿ 550 ಬ್ರ್ಯಾಂಡ್ ಗಳ 16000 ಕ್ಕಿಂತಲೂ ಹೆಚ್ಚಿನ ಉತ್ಪನ್ನಗಳು ದೊರೆಯಲಿವೆ. 10,500 ಚದರ ಅಡಿಗಳಷ್ಟು ವಿಸ್ತಾರವಾಗಿರುವ ಜಾಗದಲ್ಲಿ, ಎರಡು ಹಂತಗಳಲ್ಲಿರುವ ಈ ಮಳಿಗೆಯಲ್ಲಿ ವಿವಿಧ […]

ಪ್ಲಾಸ್ಟಿಕ್ ಮಯವಾಯಿತು ದೇವಭೂಮಿ! ಕೇದಾರನಾಥದ ರಸ್ತೆಯುದ್ದಕ್ಕೂ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಕಸದ ರಾಶಿಯ ಸ್ವಾಗತ!!

ಉತ್ತರಾಖಂಡ: ಹಿಂದೂಗಳ ಪವಿತ್ರ ಕ್ಷೇತ್ರ, ದೇವ ಭೂಮಿಯೆಂದೇ ಪ್ರಸಿದ್ದವಾದ ಉತ್ತರಾಖಂಡದಲ್ಲಿಂದು ಎಲ್ಲಿ ನೋಡಿದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಕಸದ ರಾಶಿ! ಕೇದಾರನಾಥನ ದರ್ಶನಕ್ಕಾಗಿ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಸ್ವಚ್ಛತೆಯನ್ನು ನಿರ್ವಹಣೆ ಮಾಡುವಲ್ಲಿ ನಾಗರಿಕರ ಮತ್ತು ಸ್ಥಳೀಯ ಆಡಳಿತದ ಅಸಡ್ಡೆ ಢಾಳಾಗಿ ಎದ್ದು ಕಾಣುತ್ತಿದೆ. ಚಾರ್ ಧಾಮ್ ಯಾತ್ರೆಗೆಂದು ಬರುವ ಭಕ್ತಾದಿಗಳಿಗೆ ಪ್ಲಾಸ್ಟಿಕ್ ಮತ್ತು ಕಸದ ರಾಶಿಯ ದರ್ಶನ ಭಾಗ್ಯವೂ ಲಭ್ಯವಾಗುತ್ತಿರುವುದು ಕೇದಾರನಾಥನ ದೌರ್ಭಾಗ್ಯವೇ ಸರಿ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗರ್ವಾಲ್ ಕೇಂದ್ರೀಯ ವಿಶ್ವವಿದ್ಯಾಲಯ ಭೂಗೋಳಶಾಸ್ತ್ರ […]