ಉಡುಪಿ- ಟಾಟಾ ಗ್ರೂಪ್ ನ ಕ್ರೋಮಾ ಎಲೆಕ್ಟಾನಿಕ್ಸ್ ಮೆಗಾ ಸ್ಟೋರ್ ಶುಭಾರಂಭ

ಉಡುಪಿ: ಟಾಟಾ ಗ್ರೂಪ್ ನ ಭಾರತದ ಮೊಟ್ಟ ಮೊದಲ ಓಮ್ನಿ-ಚಾನೆಲ್ ಎಲೆಕ್ಟ್ರಾನಿಕ್ಸ್ ಚಿಲ್ಲರೆ ವ್ಯಾಪಾರಿ ಸಂಸ್ಥೆಯಾದ ಕ್ರೋಮಾ, ಉಡುಪಿ-ಮಣಿಪಾಲ ಹೆದ್ದಾರಿಯ ಕಾವೇರಿ ಕಾಂಪ್ಲೆಕ್ಸ್ ಎದುರುಗಡೆಯಲ್ಲಿ ತನ್ನ ಹೊಸ ಮಳಿಗೆಯನ್ನು ಪ್ರಾರಂಭಿಸಿದೆ. ತನ್ಮೂಲಕ ಕರ್ನಾಟಕದ ಕರಾವಳಿ ಜಿಲ್ಲೆಯನ್ನೂ ಸೇರಿಸಿ ರಾಜ್ಯಾದ್ಯಂತ ತನ್ನ ವಿಸ್ತರಣೆಯನ್ನು ಘೋಷಿಸಿದೆ.

ಉಡುಪಿಯಲ್ಲಿ ಪ್ರಾರಂಭವಾಗಿರುವ ರಾಜ್ಯದ 9 ನೇ ಮಳಿಗೆಯಲ್ಲಿ 550 ಬ್ರ್ಯಾಂಡ್ ಗಳ 16000 ಕ್ಕಿಂತಲೂ ಹೆಚ್ಚಿನ ಉತ್ಪನ್ನಗಳು ದೊರೆಯಲಿವೆ. 10,500 ಚದರ ಅಡಿಗಳಷ್ಟು ವಿಸ್ತಾರವಾಗಿರುವ ಜಾಗದಲ್ಲಿ, ಎರಡು ಹಂತಗಳಲ್ಲಿರುವ ಈ ಮಳಿಗೆಯಲ್ಲಿ ವಿವಿಧ ಬ್ರ್ಯಾಂಡ್ ಗಳ ಟಿವಿ, ಸ್ಮಾರ್ಟ್ ಫೋನ್, ಡಿಜಿಟಲ್ ಸಾಧನ, ಕೂಲಿಂಗ್ ಉಪಕರಣ, ಗೃಹೋಪಯೋಗಿ ಉಪಕರಣ, ಆಡಿಯೋ ಮತ್ತು ಸಂಬಂಧಿತ ಪರಿಕರಗಳು ಸೇರಿದಂತೆ ಹಲವು ಬಗೆಯ ಎಲೆಕ್ಟ್ರಾನಿಕ್ಸ್ ವಸ್ತುಗಳು ದೊರೆಯಲಿವೆ. ಉತ್ಪನ್ನಗಳನ್ನು ಅನ್ವೇಷಿಸಲು ಕಷ್ಟವಾದಲ್ಲಿ, ನುರಿತ ಕ್ರೋಮಾ ತಜ್ಞರಿಂದ ಸಹಾಯವನ್ನು ಪಡೆದು ಶಾಪಿಂಗ್ ಮಾಡುವ ಸೌಲಭ್ಯವೂ ಇದೆ ಎಂದು ಕ್ರೋಮಾ ಇನ್ಫಿನಿಟಿ ರೀಟೈಲ್ ಲಿಮಿಟೆಡ್ ನ ಎಂಡಿ ಮತ್ತು ಸಿಇಒ ಅವಿಜಿತ್ ಮಿತ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ರೋಮಾ ಉಡುಪಿ ಮಳಿಗೆಯು ವಾರದ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 10.30 ರಿಂದ 9.00 ರವರೆಗೆ ತೆರೆದಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.