ಕಳತ್ತೂರು: ಸಮಾಜ ಸೇವಕರಿಂದ ಆರೋಗ್ಯ ಕೇಂದ್ರಕ್ಕೆ ಕುಡಿಯುವ ನೀರಿನ ಟ್ಯಾಂಕ್ ಕೊಡುಗೆ

ಕಾಪು : ಸಮಾಜ ಸೇವಾ ಕ್ಷೇತ್ರದಲ್ಲಿ ರಾಷ್ಟೀಯ ಪ್ರಶಸ್ತಿ ಪುರಸ್ಕೃತರಾದ ಕಾಪು ಸಮಾಜ ಸೇವಾ ವೇದಿಕೆಯ ಅಧ್ಯಕ್ಷ ಮೊಹಮ್ಮದ್ ಫಾರೂಕ್, ಚಂದ್ರನಗರದ ಜನಸಂಪರ್ಕ ಜನಸೇವಾ ವೇದಿಕೆಯ ಅಧ್ಯಕ್ಷ ದಿವಾಕರ ಬಿ ಶೆಟ್ಟಿ ಕಳತ್ತೂರು, ಉಭಯ ವೇದಿಕೆ ಸಂಚಾಲರಾದ ದಿವಾಕರ ಡಿ. ಶೆಟ್ಟಿ ಕಳತ್ತೂರು ಇವರು ತಮ್ಮ ವೈಯಕ್ತಿಕ ನೆಲೆಯಲ್ಲಿ ಕಳತ್ತೂರಿನಲ್ಲಿರುವ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಆರೋಗ್ಯ ಉಪ ಕೇಂದ್ರಕ್ಕೆ 1000 ಲೀಟರ್ ನ ಕುಡಿಯುವ ನೀರಿನ ಟ್ಯಾಂಕ್ ಅನ್ನು ಕೊಡುಗೆಯಾಗಿ ಹಸ್ತಾಂತರಿಸಿದರು. ಆರೋಗ್ಯ ಸುರಕ್ಷಾಧಿಕಾರಿ ಸುಧಾವತಿ […]

ನಿಟ್ಟೆ ಮಹಾವಿದ್ಯಾಲಯದ ಡಾ. ಶ್ರೀಕಾಂತ್ ದೇಸಾಯಿಗೆ ‘ಬೆಸ್ಟ್ ರಿಸರ್ಚ್ ಪಬ್ಲಿಕೇಶನ್’ ಪ್ರಶಸ್ತಿ

ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್‌ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಡಾ. ಶ್ರೀಕಾಂತ್ ದೇಸಾಯಿ .ಕೆ ಇವರಿಗೆ ಕರ್ನಾಟಕ ಸರ್ಕಾರದ ವಿಶನ್ ಗ್ರೂಪ್ ಆನ್ ಸೈನ್ಸ್ & ಟೆಕ್ನಾಲಜಿ (ವಿ.ಜಿ.ಎಸ್.ಟಿ) ಸಂಸ್ಥೆಯ ವತಿಯಿಂದ ಅವರ ಸಂಶೋಧನಾ ಪ್ರಕಟಣೆಗೆ ‘ಬೆಸ್ಟ್ ರಿಸರ್ಚ್ ಪಬ್ಲಿಕೇಶನ್’ ಪ್ರಶಸ್ತಿ ಲಭಿಸಿದೆ. ಉನ್ನತ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಶ್ವಥ್ ನಾರಾಯಣ್ ಪ್ರಶಸ್ತಿ ಪ್ರದಾನ ಮಾಡಿದರು.  

ಪೋಷಕರೆ ಖಾಸಗಿ ಪದವಿಪೂರ್ವ ಕಾಲೇಜುಗಳ ಮಾನ್ಯತೆ ಖಚಿತಪಡಿಕೊಳ್ಳಿ: ಪದವಿ ಪೂರ್ವ ಶಿಕ್ಷಣ ಇಲಾಖೆ

ಉಡುಪಿ: ರಾಜ್ಯದ ಉಚ್ಛ ನ್ಯಾಯಾಲಯದ ಆದೇಶದಂತೆ, ಜಿಲ್ಲೆಯಲ್ಲಿರುವ ಖಾಸಗಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಗೆ ಸಂಬಂಧಿಸಿದಂತೆ, ಆಯಾ ಕಾಲೇಜುಗಳು ಅಸ್ತಿತ್ವದಲ್ಲಿರುತ್ತದೆಯೇ ಅಥವಾ ಮಾನ್ಯತೆ ಪಡೆದಿದೆಯೇ ಎಂಬುದನ್ನು ವಿದ್ಯಾರ್ಥಿಗಳು ಹಾಗೂ ಪೋಷಕರು ಖಚಿತಪಡಿಸಿಕೊಂಡ ನಂತರವೇ ಪದವಿಪೂರ್ವ ತರಗತಿಗಳಿಗೆ ದಾಖಲಾಗುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ಪೂರೈಕೆಗೆ ಆಕ್ಯುಪೆನ್ಸಿ ಪ್ರಮಾಣಪತ್ರ ಕಡ್ಡಾಯವಲ್ಲ: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಕರಡು ನಿಯಮಗಳಲ್ಲಿ ಪ್ರಸ್ತಾಪ

ಬೆಂಗಳೂರು: ಉದ್ಯಮಗಳು, ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ಆಕ್ಯುಪೆನ್ಸಿ ಪ್ರಮಾಣಪತ್ರವನ್ನು(ಒಸಿ) ನೀಡದೆಯೇ ವಿದ್ಯುತ್ ಸರಬರಾಜು ಪಡೆಯಬಹುದು ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಸಾರ್ವಜನಿಕ ಪರಿಶೀಲನೆಗೆ ಹೊರಡಿಸಿರುವ ಕರಡು ನಿಯಮಗಳಲ್ಲಿ ಪ್ರಸ್ತಾಪಿಸಿದೆ. ಕೇವಲ ವ್ಯವಹಾರಗಳಷ್ಟೇ ಅಲ್ಲ, ವಸತಿ ಮತ್ತು ವಾಣಿಜ್ಯ ಕಟ್ಟಡಗಳಿಗೆ ವಿದ್ಯುತ್ ಸರಬರಾಜು ಮಾಡುವ ನಿಟ್ಟಿನಲ್ಲಿಯೂ ಒಸಿ ಅನ್ನು ತೆಗೆದುಹಾಕಲು ಆಯೋಗವು ಪ್ರಸ್ತಾಪಿಸಿದೆ. ಕರ್ನಾಟಕ ರಾಜ್ಯದಲ್ಲಿನ ವಿತರಣಾ ಪರವಾನಗಿದಾರರ ವಿದ್ಯುತ್ ಪೂರೈಕೆಯ ಕರಡು ಷರತ್ತುಗಳ ಮೇಲೆ (ಹತ್ತನೇ ತಿದ್ದುಪಡಿ), 2022, ಬಗ್ಗೆ ಸಲಹೆಗಳು ಅಥವಾ ಆಕ್ಷೇಪಣೆಗಳಿದ್ದಲ್ಲಿ […]

ರಿಲೀಸ್ ಆಗುತ್ತಲೇ ವೈರಲ್ ಆಯ್ತು ‘ಎಲ್ಲಿಂದ ಬರ್ತಿರೋ ನೀವೆಲ್ಲ?’- ಎಪಿಸೋಡ್ 2 

ಎಪಿಸೋಡ್-1 ಕ್ಕೆ ಮನಸೋತ ವೀಕ್ಷಕರೆಲ್ಲಾ ಎಪಿಸೋಡ್ 2 ಗೂ ಫುಲ್ ಫಿದಾ!! ಬರೋಬ್ಬರಿ 1.6 ಮಿಲಿಯನ್ ವೀಕ್ಷಣೆಗಳನ್ನು ಪಡೆದಿರುವ ಯೂಟ್ಯೂಬ್ ಕಿರುಚಿತ್ರ ‘ಎಲ್ಲಿಂದ ಬರ್ತಿರೋ ನೀವೆಲ್ಲ?’- ಎಪಿಸೋಡ್-1 ಈಗಾಗಲೇ ಸಿನಿರಸಿಕರ ಮನ ಸೂರೆಗೊಂಡಿದೆ. ಎಪಿಸೋಡ್ 1ರಲ್ಲಿ ತಾರ್ಕಿಕ ಅಂತ್ಯ ಕಾಣದ ಸಿನಿಮಾ ಎಪಿಸೋಡ್ 2ರಲ್ಲಿ ಮುಂದುವರಿದ ಭಾಗವಾಗಿ ಹೊರ ಬಂದಿದೆ. ಎಲ್ಲಿಂದ ಬರ್ತಿರೋ ನೀವೆಲ್ಲಾ ಮೊದಲನೆ ಎಪಿಸೋಡ್ ನೋಡಿದವರಿಗೆ ಆ ನಾಲ್ಕು ಜನರಲ್ಲಿ ಯಾರನ್ನ ನಂಬೋದು?  ಕಾರ್ತಿ ಜೀವನದಲ್ಲಿ ಪ್ರತೀಕ್ ಬೆನ್ನ ಹಿಂದೆ ಚುಚ್ಚೊ ಕಟ್ಟಪ್ಪ ಆಗಿದ್ದು […]