ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ: ಡೆಂಗ್ಯೂ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ

ಉಡುಪಿ: ಚಿತ್ಪಾಡಿಯ ಸೈಂಟ್ ಮೇರಿಸ್ ಕೈಗಾರಿಕಾ ತರಬೇತಿ ಕೇಂದ್ರದ ಆವರಣದಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಅಂಗವಾಗಿ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸುವ ಜಾಥಾ ಕಾರ್ಯಕ್ರಮಕ್ಕೆ ಮೇ 16 ಸೋಮವಾರದಂದು ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯೆ ರಜನಿ ಹೆಬ್ಬಾರ್, ಸೈಂಟ್ ಮೇರಿಸ್ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಜೋಕಿಮ್ ವಿಜಯ್ ಡಿ ಸೋಜಾ, ಲಯನ್ಸ್ ಕ್ಲಬ್ ಅಧ್ಯಕ್ಷ ಎಂ. ವಿಠಲ್ ಪೈ, ಕಾರ್ಯದರ್ಶಿ ವಿಷ್ಣುದಾಸ ಪಾಟೀಲ್, ಜಿಲ್ಲಾ ಸರ್ವೇಕ್ಷಣಾಧಿಕಾರಿ […]

ಕಳತ್ತೂರು: ಮನೆ ತೊರೆದ ಹೆಂಡತಿ; ಖಿನ್ನನಾದ ಪತಿ‌ ನೇಣಿಗೆ ಶರಣು

ಕಳತ್ತೂರು: ಹೆಂಡತಿ ಮನೆ ಬಿಟ್ಟು ಹೋದ ಕೊರಗಿನಿಂದ ಖಿನ್ನನಾದ ಪತಿ‌ ನೇಣಿಗೆ ಶರಣಾದ ಘಟನೆ ಕಾಪು ತಾಲೂಕಿನ ಕಳತ್ತೂರಿನ‌ಲ್ಲಿ ಮೇ.16 ರಂದು ನಡೆದಿದೆ. ಕಳತ್ತೂರಿನ‌ ನಿವಾಸಿ 38 ವರ್ಷದ ಸುನೀಲ್ ದೇವಪ್ರಸಾದ ಸೋನ್ಸ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ವಿಪರೀತ ಶರಾಬು ಕುಡಿಯುವ ಚಟ ಹೊಂದಿದ್ದು, ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು. ಈ ಕಾರಣಕ್ಕಾಗಿ ಹೆಂಡತಿ ಪತಿಯನ್ನು ತೊರೆದು ಮನೆ ಬಿಟ್ಟು ಹೋಗಿದ್ದರು. ಈ ಕೊರಗಿನಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಸುನೀಲ್, ಮೇ.16 ರಂದು ಮಧ್ಯಾಹ್ನ ಮನೆಯ ಮಾಡಿನ ಜಂತಿಗೆ ಶಾಲು […]

ಸರ್ಕಾರಿ ಶಾಲಾ ಮಕ್ಕಳಿಗೆ ಸಾಂಕೇತಿಕ ಪಠ್ಯಪುಸ್ತಕ ವಿತರಣೆ ಮಾಡಿದ ಉಸ್ತುವಾರಿ ಸಚಿವ

ಕೊಲ್ಲೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಲ್ಲೂರಿನಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಅವರು ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಮಕ್ಕಳಿಗೆ ಸಾಂಕೇತಿಕವಾಗಿ ಪಠ್ಯಪುಸ್ತಕ ವಿತರಿಸಿದರು.

ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆಯೆ ವ್ಲಾದಿಮಿರ್ ಪುತಿನ್? ಆಡಿಯೊ ಟೇಪ್‌ನಲ್ಲಿ ಬಹಿರಂಗವಾಯಿತೆ ಪುತಿನ್ ಅನಾರೋಗ್ಯದ ವಿಷಯ?!

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ ಎಂದು ಬ್ರಿಟನ್ ನ ಮಾಜಿ ಗೂಢಚಾರಿ ಕ್ರಿಸ್ಟೋಫರ್ ಸ್ಟೀಲ್ ಹೇಳಿದ್ದಾರೆ. ಡೊನಾಲ್ಡ್ ಟ್ರಂಪ್ ಕುರಿತು ದಸ್ತಾವೇಜನ್ನು ಬರೆದಿದ್ದ ಮತ್ತು 2016 ರ ಅಮೇರಿಕಾ ಚುನಾವಣಾ ಪ್ರಚಾರದಲ್ಲಿ ರಷ್ಯಾದ ಹಸ್ತಕ್ಷೇಪವನ್ನು ಆರೋಪಿಸಿದ್ದ ಸ್ಟೀಲ್, ಸ್ಕೈ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, “ನಿಸ್ಸಂಶಯವಾಗಿ, ರಷ್ಯಾ ಮತ್ತು ಬೇರೆಡೆಯ ಮೂಲಗಳಿಂದ ನಾವು ಕೇಳುತ್ತಿರುವ ಪ್ರಕಾರ, ಪುಟಿನ್ ವಾಸ್ತವವಾಗಿ ತೀವ್ರವಾಗಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ” ಎಂದಿದ್ದಾರೆ. ಇವೆಲ್ಲದರ ನಡುವೆ, ರಷ್ಯಾದ ಮಿತ್ರ ಜನತಂತ್ರದ ಸದಸ್ಯರೊಬ್ಬರು ಪುತಿನ್ […]

ಕೊಲ್ಲೂರು: ಉಸ್ತುವಾರಿ ಸಚಿವರಿಂದ ನೂತನ ಪ್ರವಾಸಿ ಮಂದಿರ ಉದ್ಘಾಟನೆ

ಉಡುಪಿ: ಕೊಲ್ಲೂರಿಗೆ ಆಗಮಿಸುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಲೋಕೋಪಯೋಗಿ ಇಲಾಖೆ ವತಿಯಿಂದ 1.50 ಕೋಟಿ ರೂ ವೆಚ್ಚದಲ್ಲಿನಿರ್ಮಿಸಲಾದ ನೂತನ ಪ್ರವಾಸಿ ಮಂದಿರವನ್ನು ಸೋಮವಾರದಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಉದ್ಘಾಟಿಸಿದರು. ನಂತರ ಮಾತನಾಡಿದ ಸಚಿವರು, ಕೊಲ್ಲೂರು ಶ್ರೀಮೂಕಾಂಬಿಕಾ ದೇವರ ದರ್ಶನಕ್ಕಾಗಿ ದೇಶದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ ಅವರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು. ದೂರದೃಷ್ಟಿಯಯನ್ನಿಟ್ಟುಕೊಂಡು ಯಾವುದೇ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದಲ್ಲಿ ಸಾರ್ವಜನಿಕರಿಗೆ ಅದರಿಂದ ಹೆಚ್ಚಿನ ಅನುಕೂಲವಾಗಲಿದೆ. […]