ನಿಟ್ಟೆ ಮಹಾವಿದ್ಯಾಲಯದ ಡಾ. ಶ್ರೀಕಾಂತ್ ದೇಸಾಯಿಗೆ ‘ಬೆಸ್ಟ್ ರಿಸರ್ಚ್ ಪಬ್ಲಿಕೇಶನ್’ ಪ್ರಶಸ್ತಿ

ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್‌ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಡಾ. ಶ್ರೀಕಾಂತ್ ದೇಸಾಯಿ .ಕೆ ಇವರಿಗೆ ಕರ್ನಾಟಕ ಸರ್ಕಾರದ ವಿಶನ್ ಗ್ರೂಪ್ ಆನ್ ಸೈನ್ಸ್ & ಟೆಕ್ನಾಲಜಿ (ವಿ.ಜಿ.ಎಸ್.ಟಿ) ಸಂಸ್ಥೆಯ ವತಿಯಿಂದ ಅವರ ಸಂಶೋಧನಾ ಪ್ರಕಟಣೆಗೆ ‘ಬೆಸ್ಟ್ ರಿಸರ್ಚ್ ಪಬ್ಲಿಕೇಶನ್’ ಪ್ರಶಸ್ತಿ ಲಭಿಸಿದೆ.

ಉನ್ನತ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಶ್ವಥ್ ನಾರಾಯಣ್ ಪ್ರಶಸ್ತಿ ಪ್ರದಾನ ಮಾಡಿದರು.