ಟೆಂಪೋ ಟ್ರಾವೆಲರ್ ಪಲ್ಟಿ; ಶಾಲಾ ಬಾಲಕ‌ ಮೃತ್ಯು

ಕಾರ್ಕಳ: ಶಾಲಾ ಪ್ರವಾಸಕ್ಕಾಗಿ ಉಡುಪಿಗೆ ಬರುತ್ತಿದ್ದ ಟೆಂಪೋ ಟ್ರಾವೆಲರ್ ಒಂದು ಉರುಳಿ ಬಿದ್ದು ಶಾಲಾ ಬಾಲಕನೋರ್ವ ಸ್ಥಳದಲ್ಲೇ ಅಸುನೀಗಿದ ಘಟನೆ ಕುದುರೆಮುಖ-ಮಾಳ ರಾಷ್ಟ್ರೀಯ ಹೆದ್ದಾರಿ ಎಸ್ ಕೆ ಬಾರ್ಡರ್ ಬಳಿ ಮೇ.8 ರಂದು ಸಂಜೆ ನಡೆದಿದೆ. ಮೃತ ಬಾಲಕನನ್ನು ಧಾರವಾಡ ಮೂಲದ ಹೇಮಂತ್ ಎಂದು ಗುರುತಿಸಲಾಗಿದೆ. ಶಾಲಾ ಪ್ರವಾಸದ ಟೆಂಪೋ ಟ್ರಾವೆಲರ್ ಉಡುಪಿ ಕಡೆ ಬರುತ್ತಿದ್ದು, ಕುದುರೆಮುಖ‌ ಘಾಟಿ ತಲುಪುತ್ತಿದ್ದಂತೆ ಚಾಲಕ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿಯಾಗಿದೆ. ಇದರ ಪರಿಣಾಮ ಹಲವಾರು ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಕಾರ್ಕಳದ ಸರಕಾರಿ […]

ಮಲ್ಪೆ ತೇಲುವ ಸೇತುವೆ: ಭಾರೀ ಗಾಳಿಯಿಂದ ರಕ್ಷಿಸಲು ಉದ್ದೇಶ ಪೂರ್ವಕ ಸಂಪರ್ಕ ಕಡಿತ?

ಉಡುಪಿ: ಮಲ್ಪೆ ಕಡಲತೀರದಲ್ಲಿ ರಾಜ್ಯದ ಪ್ರಪ್ರಥಮ ತೇಲುವ ಸೇತುವೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಬಗ್ಗೆ ಬಂದ ವರದಿಗಳನ್ನು ತಳ್ಳಿಹಾಕಿದ ಗುತ್ತಿಗೆದಾರ ಮತ್ತು ಡಯಲ್ ಮಂತ್ರದ ಮಾಲೀಕ ಸುದೇಶ್ ಶೆಟ್ಟಿ, ಸೇತುವೆಗಾಗುವ ಹಾನಿಯನ್ನು ತಪ್ಪಿಸಲು ಸೇತುವೆಯ ಸಂಪರ್ಕ ಕೊಂಡಿಗಳನ್ನು ತೆಗೆಯಲಾಗಿದೆ ಎಂದು ಹೇಳಿದರು. ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, “ಸೈಕ್ಲೋನ್ ಎಫೆಕ್ಟ್ ಮತ್ತು ಭಾರೀ ಗಾಳಿಯಿಂದಾಗಿ, ತೇಲುವ ಸೇತುವೆಗೆ ಯಾವುದೇ ಹಾನಿಯಾಗದಂತೆ ನಾವು ಸೇತುವೆಯ ಬೀಗಗಳ ಸಂಪರ್ಕವನ್ನು ತೆಗೆದಿದ್ದೇವೆ. ಇದರಿಂದಾಗಿ ಇಂದು ಬೆಳಗ್ಗೆ ಸೇತುವೆಯ ಕೆಲವು ಬ್ಲಾಕ್‌ಗಳು ಸಮುದ್ರದಲ್ಲಿ ತೇಲುತ್ತಿದ್ದವು. […]

ಸುರಕ್ಷಿತವಾಗಿದೆ ತೇಲುವ ಸೇತುವೆ: ವಂದತಿಗಳಿಗೆ ಕಿವಿಗೊಡಬೇಡಿ; ಮಲ್ಪೆ ಬೀಚ್ ಗುತ್ತಿಗೆದಾರ ಹೇಳಿಕೆ

ಮಲ್ಪೆ: ಚಂಡಮಾರುತದ ಪರಿಣಾಮ ಸಮುದ್ರದಲ್ಲಿ ಉಂಟಾಗಿರುವ ಅಲೆಗಳ ಅಬ್ಬರದಿಂದಾಗಿ ಮುಂಜಾಗೃತಾ ಕ್ರಮವಾಗಿ ಮಲ್ಪೆ ಬೀಚ್‍ನಲ್ಲಿ ನೂತನವಾಗಿ ಆರಂಭಗೊಂಡಿರುವ ತೇಲುವ ಸೇತುವೆ ಸೇರಿದಂತೆ ಜಲ ಕ್ರೀಡೆಗಳನ್ನು ಮೂರು ದಿನಗಳ ಮಟ್ಟಿಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಮಲ್ಪೆ ಬೀಚ್ ಗುತ್ತಿಗೆದಾರ ಸುದೇಶ್ ಶೆಟ್ಟಿ ತಿಳಿಸಿದ್ದಾರೆ. ಮಲ್ಪೆ ಬೀಚ್ ನಲ್ಲಿ ಇತ್ತೀಚೆಗೆ ಅರಂಭಗೊಂಡಿರುವ ತೇಲುವ ಸೇತುವ (ಫ್ಲೋಟಿಂಗ್ ಬ್ರಿಡ್ಜ್) ನ ಕುರಿತಾಗಿ ಹಬ್ಬಿರು ವದಂತಿಗಳಿಗೆ ಸ್ಪಷ್ಟನೆ ನೀಡಿ ಪ್ರತಿಕ್ರಿಯೆ ನೀಡಿದ ಅವರು, ಈ ಸೇತುವೆಯಲ್ಲಿ ಸುರಕ್ಷತೆಯ ದೃಷ್ಠಿಯಿಂದ ಸೆಂಟರ್ ಲಾಕ್ ವ್ಯವಸ್ಥೆಯನ್ನು […]

ಮಿಷನ್ ಕರ್ನಾಟಕ ಟು ಕಾಶಿ; ಕರ್ನಾಟಕದಿಂದ ವಾರಣಾಸಿಗೆ ಶೀಘ್ರವೆ ವಿಶೇಷ ರೈಲು: ಶಶಿಕಲಾ ಜೊಲ್ಲೆ

ಬೆಂಗಳೂರು: ರಾಜ್ಯ ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆಯು ವಾರಣಾಸಿಗೆ (ಕಾಶಿ) ವಿಶೇಷ ರೈಲನ್ನು ಆಯೋಜಿಸುತ್ತಿದ್ದು, ಪ್ರತಿ ವರ್ಷ 30,000 ಕಾಶಿ ಯಾತ್ರಾರ್ಥಿಗಳಿಗೆ ತಲಾ 5,000 ರೂ.ಗಳನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈಗಾಗಲೇ ರೈಲ್ವೆ ಸಚಿವರೊಂದಿಗೆ ಮಾತನಾಡಿದ್ದು, ಅವರ ಸಲಹೆಯಂತೆ ಭಾರತ್ ಗೌರವ್ ಪ್ರವಾಸೋದ್ಯಮ ಯೋಜನೆಯಡಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿದ ಹಳೆಯ ರೈಲುಗಳನ್ನು ಪ್ರವಾಸೋದ್ಯಮಕ್ಕಾಗಿ ಗುತ್ತಿಗೆಗೆ ತೆಗೆದುಕೊಳ್ಳಲಾಗುವುದು. ಈ ರೈಲುಗಳ ನೋಂದಣಿಗಾಗಿ 1 ಲಕ್ಷ ರೂಪಾಯಿಯನ್ನು ಈಗಾಗಲೇ ಪಾವತಿಸಲಾಗಿದೆ. ಈ ರೈಲುಗಳು […]

ಗಾಳಿಯ ರಭಸಕ್ಕೆ ಕೊಚ್ಚಿ ಹೋಯಿತು ರಾಜ್ಯದ ಪ್ರಪ್ರಥಮ ತೇಲುವ ಸೇತುವೆ!

ಉಡುಪಿ: ಎರಡು ದಿನಗಳ ಹಿಂದಷ್ಟೇ ಉದ್ಘಾಟನೆಗೊಂಡು ರಾಜ್ಯದ ಜನತೆಯ ಗಮನ ಸೆಳೆದಿದ್ದ ರಾಜ್ಯದ ಪ್ರಪ್ರಥಮ ತೇಲುವ ಸೇತುವೆ ಗಾಳಿಯ ರಭಸಕ್ಕೆ ಸಿಕ್ಕು, ಚೂರುಗಳಾಗಿ ಬೇರ್ಪಟ್ಟು, ಸಮುದ್ರದೆಲ್ಲೆಡೆ ತೇಲುತ್ತಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಅದ್ದೂರಿಯಾಗಿ ಉದ್ಗಾಟನೆಗೊಂಡ ತೇಲುವ ಸೇತುವೆ ಕೇವಲ ಎರಡೇ ದಿನಗಳಲ್ಲಿ ತುಂಡಾಗಿ ದಿಕ್ಕಾಪಾಲಾಗಿ ತೇಲುತ್ತಿರುವುದು ನಿಜಕ್ಕೂ ಬೇಸರದ ವಿಷಯ. ಮಲ್ಪೆ ಕಡಲ ತೀರಕ್ಕೆ ಸಾವಿರಾರು ಪ್ರವಾಸಿಗರು ನಿತ್ಯವೂ ಬರುತ್ತಿದ್ದು, ತೇಲುವ ಸೇತುವೆಯು ಆಕರ್ಷಣೆಯ ಕೇಂದ್ರವಾಗಲಿದೆ. ಆದರೆ ಈಗ ಇದು ಮುರಿದ್ದು, ಇದನ್ನು ಸರಿ ಪಡಿಸಲು […]