ತಾಯಂದಿರ ದಿನದಂದು ಮಾಹೆಯ ವಿದ್ಯಾರ್ಥಿ ಮತ್ತು ಸಿಬ್ಬಂದಿಗಳಿಗಾಗಿ ಫಿಟ್-ಎ-ಥಾನ್ ಆಯೋಜನೆ
ಮಣಿಪಾಲ: ತಾಯಂದಿರ ದಿನದ ಅಂಗವಾಗಿ ಮಾಹೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗಾಗಿ ಮೇ.8 ರವಿವಾರದಂದು ಮಣಿಪಾಲ್ ಫಿಟ್-ಎ-ಥಾನ್ ಅನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವು ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದ್ದು, “ಬಿಟ್ಟುಕೊಡುವುದು ಒಂದು ಆಯ್ಕೆಯಲ್ಲ”ಎನ್ನುವ ಥೀಮ್ ಆಧಾರಿತವಾಗಿತ್ತು. FITVIB (ಕೆ.ಎಂ.ಸಿಯ ಫಿಟ್ನೆಸ್ ಕ್ಲಬ್) VSO (ಸ್ವಯಂಸೇವಕ ಸೇವೆಗಳ ಸಂಸ್ಥೆ), ಮತ್ತು MRC (ಮಣಿಪಾಲ್ ರನ್ನರ್ಸ್ ಕ್ಲಬ್) ಸಹಯೋಗದೊಂದಿಗೆ ಮಣಿಪಾಲ್ ಫಿಟ್-ಎ-ಥಾನ್ ಅನ್ನು ಆಯೋಜಿಸಲಾಗಿತ್ತು. ರಾಷ್ಟ್ರೀಯ ಚಿನ್ನದ ಪದಕ ವಿಜೇತೆ ಮತ್ತು ಕಾಮನ್ ವೆಲ್ತ್ ಗೇಮ್ಸ್ […]
ಆತ್ರಾಡಿ ಮದಗದಲ್ಲಿ ತಾಯಿ, ಮಗಳ ಮೃತ ದೇಹ ಪತ್ತೆ: ಅಸಹಜ ಸಾವಿನ ಶಂಕೆ
ಉಡುಪಿ: ಉಡುಪಿ ತಾಲೂಕಿನ ಆತ್ರಾಡಿ ಗ್ರಾ.ಪಂ ವ್ಯಾಪ್ತಿಯ ಮದಗದಲ್ಲಿ ತಾಯಿ ಮತ್ತು 10 ವರ್ಷದ ಮಗುವಿನ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊಲೆಯಾದವರನ್ನು ಮದಗ ನಿವಾಸಿ 28 ವರ್ಷದ ಚೆಲುವಿ ಹಾಗೂ ಆಕೆಯ ಮಗಳು 10 ವರ್ಷದ ಪ್ರಿಯಾ ಎಂದು ಗುರುತಿಸಲಾಗಿದೆ. ಇವರ ಮೃತದೇಹ ಮನೆಯ ಕೋಣೆಯಲ್ಲಿ ಪತ್ತೆಯಾಗಿದ್ದು, ಬಾಯಿಯಲ್ಲಿ ರಕ್ತದ ಕಲೆಗಳು ಕಂಡು ಬಂದಿದೆ ಎನ್ನಲಾಗಿದೆ. ಮಣಿಪಾಲದ ಖಾಸಗಿ ಸಂಸ್ಥೆಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದ ಚೆಲುವಿ, ಅವರ ಇಬ್ಬರು ಮಕ್ಕಳು ಮತ್ತು ತಾಯಿ ಮನೆಯಲ್ಲಿ […]
ಮಾತೃದಿನದಂದು ಇಡ್ಲಿ ಅಮ್ಮನಿಗೆ ಹೊಸ ಮನೆ ಉಡುಗೊರೆ ನೀಡಿದ ಆನಂದ್ ಮಹೀಂದ್ರಾ!
2019 ರ ಕೊರೋನಾ ಕಾಲದಲ್ಲಿ ‘ಇಡ್ಲಿ ಅಮ್ಮಾ’ ಎಂದೂ ಕರೆಯಲ್ಪಡುವ ಕೆ ಕಮಲಾತಾಲ್ ಎಂಬ ಮಹಿಳೆ ಲಾಕ್ಡೌನ್ ಸಮಯದಲ್ಲಿ ಕೇವಲ 1 ರೂಪಾಯಿಗೆ ಇಡ್ಲಿಗಳನ್ನು ಮಾರಾಟ ಮಾಡುವ ಮೂಲಕ ಮನೆ ಮಾತಾಗಿದ್ದರು. 85 ವರ್ಷ ವಯಸ್ಸಿನ ಈಕೆ ಕಳೆದ ಮೂವತ್ತು ವರ್ಷಗಳಿಂದ ಈ ಕಾಯಕದಲ್ಲಿ ನಿರತರಾಗಿದ್ದಾರೆ. ಅವರ ಬಗ್ಗೆ ವರದಿಗಳು ವೈರಲ್ ಆದ ಬಳಿಕ ದೇಶದ ಹೆಸರಾಂತ ಉದ್ಯಮಿ ಆನಂದ್ ಮಹೀಂದ್ರಾ ಆಕೆಯ ಸಮರ್ಪಣೆಯಿಂದ ಪ್ರಭಾವಿತರಾಗಿ ಆಕೆಗೊಂದು ಮನೆ ನಿರ್ಮಿಸಿಕೊಡುವ ವಾಗ್ದನ ಮಾಡಿದ್ದರು. ತನ್ನ ವಾಗ್ದಾನಕ್ಕೆ ಬದ್ದರಾದ […]
ಮಂಗಳೂರಿನಲ್ಲಿ ಪರ್ವ ಕಾದಂಬರಿಯ ರಂಗ ಪ್ರಸ್ತುತಿ
ಮಂಗಳೂರು: ರಂಗಾಯಣ, ಮೈಸೂರು ಅರ್ಪಿಸುವ ಡಾ. ಎಸ್. ಎಲ್. ಬೈರಪ್ಪನವರ ಪರ್ವ ಕಾದಂಬರಿಯ ರಂಗ ಪ್ರಸ್ತುತಿ. ಮೇ 10, ಮಂಗಳವಾರದಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬೆಳಿಗ್ಗೆ 10.30 ರಿಂದ ಸಂಜೆ 7 ಗಂಟೆಯವರೆಗೆ ಪ್ರದರ್ಶನ ನಡೆಯಲಿದೆ. ನಿರ್ದೇಶನ: ಪ್ರಕಾಶ್ ಬೆಳವಾಡಿ. ಟಿಕೇಟುಗಳಿಗಾಗಿ ಸಂಪರ್ಕಿಸಿ: www.rangayana.org ನವಕರ್ನಾಟಕ ಪುಸ್ತಕ ಮಳಿಗೆ, ಬಲ್ಮಠ, ಜ್ಯೋತಿ ಕೆ.ಎಸ್.ರಾವ್ ರಸ್ತೆ, ಹಂಪನಕಟ್ಟೆ ದೂರವಾಣಿ: 99024 50686
ಒಬ್ಬಂಟಿತನದಿಂದ ಮನನೊಂದು ವೃದ್ಧ ಆತ್ಮಹತ್ಯೆ
ಮಿಯಾರು: ಮಾನಸಿಕ ಕಾಯಿಲೆ ಹಾಗೂ ಒಬ್ಬಂಟಿತನದಿಂದ ಮನನೊಂದು ವೃದ್ಧರೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಮಿಯಾರು ಗ್ರಾಮದ ಅರ್ಪದೆ ಎಂಬಲ್ಲಿ ಮೇ.8 ರಂದು ಸಂಜೆ ನಡೆದಿದೆ. ಮಿಯಾರು ಗ್ರಾಮದ ಅರ್ಪದೆ ನಿವಾಸಿ 77 ವರ್ಷದ ಜೇಮ್ಸ್ ಗೋರಿಯಸ್ ಆತ್ಮಹತ್ಯೆ ಮಾಡಿಕೊಂಡ ವೃದ್ಧ. ಜೇಮ್ಸ್ ಅವರು ಒಬ್ಬರೇ ವಾಸವಾಗಿದ್ದು, ಹೆಂಡತಿ ಮತ್ತು ಮಗಳು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಒಬ್ಬಂಟಿತನದಿಂದ ಮನನೊಂದ ಜೇಮ್ಸ್ ಅವರು, ಮೇ.8 ರಂದು ಸಂಜೆ ಮನೆಯ ಹಿಂದುಗಡೆ ಇರುವ ಶೆಡ್ಡಿಗೆ ಅಳವಡಿಸಿದ ಕಬ್ಬಿಣದ ಜಂತಿಗೆ […]