ಮಾತೃದಿನದಂದು ಇಡ್ಲಿ ಅಮ್ಮನಿಗೆ ಹೊಸ ಮನೆ ಉಡುಗೊರೆ ನೀಡಿದ ಆನಂದ್ ಮಹೀಂದ್ರಾ!

2019 ರ ಕೊರೋನಾ ಕಾಲದಲ್ಲಿ ‘ಇಡ್ಲಿ ಅಮ್ಮಾ’ ಎಂದೂ ಕರೆಯಲ್ಪಡುವ ಕೆ ಕಮಲಾತಾಲ್ ಎಂಬ ಮಹಿಳೆ ಲಾಕ್‌ಡೌನ್ ಸಮಯದಲ್ಲಿ ಕೇವಲ 1 ರೂಪಾಯಿಗೆ ಇಡ್ಲಿಗಳನ್ನು ಮಾರಾಟ ಮಾಡುವ ಮೂಲಕ ಮನೆ ಮಾತಾಗಿದ್ದರು. 85 ವರ್ಷ ವಯಸ್ಸಿನ ಈಕೆ ಕಳೆದ ಮೂವತ್ತು ವರ್ಷಗಳಿಂದ ಈ ಕಾಯಕದಲ್ಲಿ ನಿರತರಾಗಿದ್ದಾರೆ. ಅವರ ಬಗ್ಗೆ ವರದಿಗಳು ವೈರಲ್ ಆದ ಬಳಿಕ ದೇಶದ ಹೆಸರಾಂತ ಉದ್ಯಮಿ ಆನಂದ್ ಮಹೀಂದ್ರಾ ಆಕೆಯ ಸಮರ್ಪಣೆಯಿಂದ ಪ್ರಭಾವಿತರಾಗಿ ಆಕೆಗೊಂದು ಮನೆ ನಿರ್ಮಿಸಿಕೊಡುವ ವಾಗ್ದನ ಮಾಡಿದ್ದರು.

ತನ್ನ ವಾಗ್ದಾನಕ್ಕೆ ಬದ್ದರಾದ ಆನಂದ್ ಮಹೀಂದ್ರಾ, ತಾಯಂದಿರ ದಿನದಂದು ತಮಿಳುನಾಡಿನ ಇಡ್ಲಿ ಅಮ್ಮನಿಗೆ ಹೊಸ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇಡ್ಲಿ ಅಮ್ಮನನ್ನು ತನ್ನ ಹೊಚ್ಚ ಹೊಸ ಅಡುಗೆಮನೆಯನ್ನು ಹೊಂದಿರುವ ನೂತನ ಗೃಹವನ್ನು ಉದ್ಘಾಟಿಸುವ ವೀಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.