ದೇಶದ ಗಡಿ ತಂಟೆಗೆ ಬರುವವರಿಗೆ ಅಮೇರಿಕಾ, ಇಸ್ರೇಲ್ ಮಾದರಿ ಉತ್ತರ: ಅಮಿತ್ ಶಾ

ಬೆಂಗಳೂರು: ದೇಶದ ಗಡಿಯಲ್ಲಿ ಅಕ್ರಮವಾಗಿ ಪ್ರವೇಶಿಸುವವರನ್ನು ಹಿಮ್ಮೆಟ್ಟಿಸುವಲ್ಲಿ ಭಾರತವು ಅಮೇರಿಕಾ ಮತ್ತು ಇಸ್ರೇಲ್‌ನಂತಹ ದೇಶಗಳ ಸಾಲಿನಲ್ಲಿ ಸೇರಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಪ್ರತಿಪಾದಿಸಿದ್ದಾರೆ. ಯಾರಾದರೂ ತಮ್ಮ ಗಡಿ ಮತ್ತು ಮಿಲಿಟರಿಯ ತಂಟೆಗೆ ಬಂದಾಗ ಕೇವಲ ಎರಡು ರಾಷ್ಟ್ರಗಳು ಸಂಯುಕ್ತ ಅಮೇರಿಕಾ ಮತ್ತು ಇಸ್ರೇಲ್ ಗಳು ಮಾತ್ರ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿಯವರಿಂದಾಗಿ, ನಮ್ಮ ಮಹಾನ್ ರಾಷ್ಟ್ರ ಭಾರತವು ಕೂಡಾ ಆ ಗುಂಪಿಗೆ ಸೇರಿದೆ ಎಂದು ನೃಪತುಂಗ ವಿಶ್ವವಿದ್ಯಾನಿಲಯ, ಅದರ […]

ಮಾಹೆ ಮತ್ತು ಬಿಂಗ್‌ಹ್ಯಾಮ್‌ಟನ್ ವಿಶ್ವವಿದ್ಯಾಲಯದ ನಡುವೆ ತಿಳುವಳಿಕೆ ಒಪ್ಪಂದ

ಮಣಿಪಾಲ: ಎರಡು ಸಂಸ್ಥೆಗಳ ನಡುವೆ ಶೈಕ್ಷಣಿಕ ಮತ್ತು ಸಂಶೋಧನಾ ಸಹಕಾರವನ್ನು ಸ್ಥಾಪಿಸಲು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ್ (ಮಾಹೆ) ಮತ್ತು ಬಿಂಗ್‌ಹ್ಯಾಂಟನ್ ವಿಶ್ವವಿದ್ಯಾಲಯ, ನ್ಯೂ ಯಾರ್ಕ್ ಏಪ್ರಿಲ್ 28 ರಂದು ಮಣಿಪಾಲ ವಿಶ್ವವಿದ್ಯಾಲಯ ಕಟ್ಟಡದಲ್ಲಿ ತಿಳುವಳಿಕೆ ಒಪ್ಪಂದ(ಎಂಒಯು)ಕ್ಕೆ ಸಹಿ ಹಾಕಿದವು. ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಹಯೋಗದ ಪದವಿ ಕಾರ್ಯಕ್ರಮವನ್ನು ಸ್ಥಾಪಿಸುವುದು ಎಂಒಯು ಉದ್ದೇಶವಾಗಿದೆ. ವಿದ್ಯಾರ್ಥಿಗಳು ತಲಾ ಮೂರೂವರೆ ವರ್ಷ ಮಣಿಪಾಲದ ಎಂಐಟಿ ಯಲ್ಲಿಯೂ ಒಂದೂವರೆ ವರ್ಷ ಬಿಂಗ್‌ಹ್ಯಾಂಟನ್ ವಿಶ್ವವಿದ್ಯಾಲಯದಲ್ಲಿಯೂ ವಿದ್ಯಾಭ್ಯಾಸ […]

ನೇಪಾಳದ ನೈಟ್‌ಕ್ಲಬ್‌ನಲ್ಲಿ ರಾಹುಲ್ ಗಾಂಧಿ! ಪಾರ್ಟಿ ವಿಡಿಯೋ ವೈರಲ್!!

ದೆಹಲಿ: ಮಂಗಳವಾರ ವಿದೇಶಿ ನೈಟ್‌ಕ್ಲಬ್‌ಗೆ ಭೇಟಿ ನೀಡಿದ ವೀಡಿಯೊ ಕಾಣಿಸಿಕೊಂಡ ನಂತರ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ರಾಹುಲ್ ನೈಟ್ ಕ್ಲಬ್ ನಲ್ಲಿರುವ ಈ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಕಾಂಗ್ರೆಸ್ ನಾಯಕತ್ವ ಬಿಕ್ಕಟ್ಟಿನ ಮಧ್ಯೆ ಮತ್ತು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರನ್ನು ಕರೆತರುವ ಪಕ್ಷದ ಪ್ರಯತ್ನ ವಿಫಲವಾಗಿರುವ ಈ ಸಮಯದಲ್ಲಿ ರಾಹುಲ್ ಪಾರ್ಟಿ ಮಾಡುತ್ತಿರುವ ವೀಡಿಯೊ ವೈರಲ್ ಆಗಿದೆ. ಆದರೆ, ಇದು ರಾಹುಲ್ ಅವರ ರಹಸ್ಯ ಭೇಟಿಯಲ್ಲ, ಅವರು ಒಂದು ಮದುವೆ […]

ಆಟೋ ರಿಕ್ಷಾ ಛಾವಣಿ ಮೇಲೆ ಚಲಿಸುವ ಉದ್ಯಾನ!! ದೆಹಲಿ ರಿಕ್ಷಾವಾಲನ ವಿನೂತನ ಪ್ರಯೋಗ!

ದೆಹಲಿ: ಭಾರತದ ರಾಜಧಾನಿಯಲ್ಲಿ ಆಟೋರಿಕ್ಷಾ ಚಾಲಕರಾಗಿರುವ ಮಹೇಂದ್ರ ಕುಮಾರ್ ಎಂಬುವರು ತಮ್ಮ ಪ್ರಯಾಣಿಕರನ್ನು ತಂಪಾಗಿರಿಸಲು ವಿಶಿಷ್ಟ ವಿಧಾನ ಒಂದನ್ನು ಅಳವಡಿಸಿಕೊಂಡಿದ್ದಾರೆ. ದೆಹಲಿಯ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ತಲುಪಿದರೂ ಇವರ ಆಟೋದೊಳಗಡೆ ಕುಳಿತು ಪ್ರಯಾಣ ಮಾಡುವ ಪ್ರಯಾಣಿಕರ ತಲೆ ತಂಪಾಗಿರುತ್ತದೆ. ತಮ್ಮ ಆಟೋದ ಛಾವಣಿಯ ಮೇಲೆ ಹಚ್ಚ ಹಸಿರಿನ ಉದ್ಯಾನವೊಂದನ್ನು ಬೆಳೆಸಿರುವ ಕುಮಾರ್, ಬೇಸಿಗೆಯ ಬಿರು ಬಿಸಿಲಿನಲ್ಲೂ ಪ್ರಯಾಣಿಕರಿಗೆ ತಂಪನ್ನುಣಿಸುತ್ತಿದ್ದಾರೆ. 48 ವರ್ಷ ವಯಸ್ಸಿನ ಕುಮಾರ್ ಅವರ ಈ ‘ಚಲಿಸುವ ಉದ್ಯಾನ’ವು ಗ್ರಾಹಕರ ಮನಸೂರೆಗೊಳ್ಳುತ್ತಿದೆ. ಇವರ ರಿಕ್ಷಾದಲ್ಲಿ […]

ವೈದ್ಯಕೀಯ ಸಾಧನ ಉತ್ಪಾದನಾ ಘಟಕ ಆರಂಭ

ಮಣಿಪಾಲ: ಏಪ್ರಿಲ್ 29 ರಂದು ಮಣಿಪಾಲದಲ್ಲಿ ಬ್ಲ್ಯಾಕ್‌ಫ್ರಾಗ್ ಟೆಕ್ನಾಲಜೀಸ್‌ನ ವೈದ್ಯಕೀಯ ಸಾಧನ ಉತ್ಪಾದನಾ ಘಟಕವನ್ನು ಡಾ. ರಂಜನ್ ಪೈ, ಅಧ್ಯಕ್ಷರು, ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಗುಂಪು ಬೆಂಗಳೂರು, ಇವರು ಉದ್ಘಾಟಿಸಿದರು. ಬ್ಲ್ಯಾಕ್‌ಫ್ರಾಗ್ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್ ಮಣಿಪಾಲ ಮೂಲದ ಟೆಕ್ನಾಲಜಿ ಸ್ಟಾರ್ಟಪ್ ಆಗಿದ್ದು, ರೋಗನಿರೋಧಕ ಪೂರೈಕೆ ಸರಪಳಿಗಳನ್ನು ಸುಧಾರಿಸಲು ಪೇಟೆಂಟ್ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಇದರ ಉದ್ದೇಶವಾಗಿದೆ. 1500 ಯೂನಿಟ್ ಪ್ರತಿ ತಿಂಗಳ ಸಾಮರ್ಥ್ಯದ ವೈದ್ಯಕೀಯ ಸಾಧನ ಉತ್ಪಾದನಾ ಘಟಕವನ್ನು, ಇಬ್ಬರು ಇಂಜಿನಿಯರ್ ಗಳು ಪದವಿ ಪಡೆದ […]