ಜಿಲ್ಲಾ ಮಟ್ಟದ ಕೊರಗರ ಕ್ರೀಡೋತ್ಸವ, ಸಾಂಸ್ಕೃತಿಕ ಉತ್ಸವ

ಉಡುಪಿ, ಫೆ.23: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಉಡುಪಿ ಜಿಲ್ಲಾ ಕೊರಗ ಸಂಘಟನೆ, ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಕೊರಗರ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವು ಫೆಬ್ರವರಿ 26 ಮತ್ತು 27 ರಂದು ನಗರದ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಫೆ. 26 ರಂದು ಸಂಜೆ 5.30 ಕ್ಕೆ ರಾಜ್ಯದ ಮೀನುಗಾರಿಕೆ, ಬಂದರು ಮತ್ತು […]

ಹಿಜಾಬ್ ಪ್ರಕರಣ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರ ವಿರುದ್ದ ಅವಹೇಳನಕಾರಿ ಟ್ವೀಟ್ ನ ರೀಟ್ವೀಟ್: ನಟ ಚೇತನ್ ಬಂಧನ

ಬೆಂಗಳೂರು: ಹಿಜಾಬ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ತ್ರಿಸದಸ್ಯ ಪೀಠದ ಭಾಗವಾಗಿರುವ ನ್ಯಾಯಾಧೀಶರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಸಂದೇಶಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಕನ್ನಡ ನಟ ಮತ್ತು ಹೋರಾಟಗಾರ ಚೇತನ್ ಕುಮಾರ್ ಅಹಿಂಸನನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ. ನಟನನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಪೊಲೀಸರು ನಟನ ವಿರುದ್ಧ ಐಪಿಸಿ ಸೆಕ್ಷನ್ 505 (ಸಾರ್ವಜನಿಕ ಕಿಡಿಗೇಡಿತನದ ಹೇಳಿಕೆಗಳು) ಮತ್ತು 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಸ್ವಯಂಪ್ರೇರಿತ ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ. […]

ಅಂತಿಮ ಹಂತದಲ್ಲಿವೆ ಕೋವೊವಾಕ್ಸ್ ಲಸಿಕಾ ಪ್ರಯೋಗಗಳು: 18 ವರ್ಷ ಕೆಳಗಿನ ಮಕ್ಕಳಿಗೆ ಜೂನ್ ವರೆಗೆ ದೊರೆಯಬಹುದು ಲಸಿಕೆ

  ದೆಹಲಿ: 18 ವರ್ಷ ಮೇಲ್ಪಟ್ಟವರಿಗೆಲ್ಲ ಈಗಾಗಲೇ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ನೀಡಲಾಗಿದ್ದು, ಪುಟಾಣಿ ಮಕ್ಕಳಿಗೆ ಇನ್ನೂ ಲಸಿಕೆಗಳನ್ನು ನೀಡಲಾಗಿಲ್ಲ. ಚಿಕ್ಕ ಮಕ್ಕಳಲ್ಲಿ ಕೋವಿಡ್ ವಿರುದ್ದದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೋವೊವಾಕ್ಸ್ ಲಸಿಕೆಗಳನ್ನು ತಯಾರಿಸಲಾಗುತ್ತಿದೆ. ಲಸಿಕೆಗಳನ್ನು ಪ್ರಾಯೋಗಿಕ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತಿದ್ದು, ಮಕ್ಕಳ ಮೇಲೆ ವೈದ್ಯಕೀಯ ಪ್ರಯೋಗಗಳನ್ನು ಕೈಗೊಳ್ಳಲಾಗುತ್ತಿದೆ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯು ಕೋವೊವಾಕ್ಸ್ ಲಸಿಕೆಗಳನ್ನು ತಯಾರಿಸುವ ಹೊಣೆ ಹೊತ್ತಿದೆ. ಅಮೇರಿಕಾದ ಜೈವಿಕ ತಂತ್ರಜ್ಞಾನ ಸಂಸ್ಥೆಯು ಅಭಿವೃದ್ದಿ ಪಡಿಸಿರುವ ನೋವೋವಾಕ್ಸ್ (ಮರುಸಂಯೋಜಕ ನ್ಯಾನೊಪಾರ್ಟಿಕಲ್ […]

ಸಹಾಯಕ ಸರ್ಕಾರಿ ವಕೀಲರ ಹುದ್ದೆ: ಅರ್ಜಿ ಆಹ್ವಾನ

ಉಡುಪಿ: ರಾಜ್ಯ ಸರ್ಕಾರದ ಆದೇಶದಂತೆ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯಲ್ಲಿ ಖಾಲಿ ಇರುವ 104 ಸಹಾಯಕ ಸರ್ಕಾರಿ ಅಭಿಯೋಜಕರು-ವ-ಸಹಾಯಕ ಸರ್ಕಾರಿ ವಕೀಲರುಗಳ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮಾರ್ಚ್ 7 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ನ್ಯಾಯಾಲಯದ ವಕೀಲರ ಸಂಘ, ಸ್ಥಳೀಯ ನ್ಯಾಯಾಲಯಗಳ ವಕೀಲರ ಸಂಘ ಹಾಗೂ ಸದಸ್ಯ  ಕಾರ್ಯದರ್ಶಿ/ಸರ್ಕಾರಿ ಅಭಿಯೋಜಕರು, ಉಡುಪಿ ಇವರ ಕಛೇರಿಯನ್ನು ಸಂಪರ್ಕಿಸುವಂತೆ ಸಹಾಯಕ ಸರ್ಕಾರಿ […]

ಅಖಂಡ ರಷಿಯಾಕ್ಕೆ ಮುನ್ನುಡಿ ಬರೆದರೆ ವ್ಲಾದಿಮಿರ್ ಪುತಿನ್? ರಕ್ತಪಾತವಿಲ್ಲದೆ ಉಕ್ರೇನ್ ಆಯಿತು ಮೂರು ತುಂಡು!

ನವದೆಹಲಿ: ಪಾಶ್ಚಿಮಾತ್ಯ ದೇಶಗಳು ಮತ್ತು ವಿಶ್ವದ ಮಾಧ್ಯಮಗಳು ವ್ಲಾದಿಮಿರ್ ಪುತಿನ್ ಅನ್ನು ಒಬ್ಬ ಸರ್ವಾಧಿಕಾರಿ, ನಿರ್ದಯಿ ನಾಯಕನೆಂದು ಜರೆಯುತ್ತಿರಬಹುದು. ಆತನನ್ನು ಖಳನಾಯಕನಂತೆ ಬಿಂಬಿಸುತ್ತಿರಬಹುದು. ಆದರೆ ತನ್ನ ರಾಷ್ಟ್ರದ ಅಖಂಡತೆಯ ವಿಷಯ ಬಂದಾಗ ಎಂತಹ ಕಠೋರ ನಿರ್ಧಾವನ್ನು ತೆಗೆದುಕೊಳ್ಳಲೂ ಹಿಂಜರಿಯುವುದಿಲ್ಲ, ತಾನು ಯಾರಿಗೂ ಜಗ್ಗುವುದಿಲ್ಲ ಎನ್ನುವುದನ್ನವರು ಮತ್ತೊಮ್ಮೆ ಜಗಜ್ಜಾಹೀರು ಮಾಡಿದ್ದಾರೆ. ತನ್ನ ‘ಅಖಂಡ ರಷಿಯಾ’ ನೀತಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪುತಿನ್ ಮುಂದಡಿಯಿಟ್ಟು, ಮಗ್ಗುಲ ಮುಳ್ಳಾಗಿದ್ದ ಉಕ್ರೇನ್ ಅನ್ನು ಶಸ್ತ್ರಾಸ್ತ್ರಗಳ ಸಹಾಯವಿಲ್ಲದೆಯೆ ಮೂರು ತುಂಡುಗಳಾಗಿ ವಿಭಾಗಿಸಿದ್ದಾರೆ! ರಷಿಯಾಕ್ಕೆ ಅಂಟಿಕೊಂಡಿರುವ ಪೂರ್ವ […]