ಫೆ.25, 26, 27: ಉಡುಪಿಯಲ್ಲಿ ಮುರಾರಿ- ಕೆದ್ಲಾಯ ರಂಗೋತ್ಸವ

ಉಡುಪಿ: ಉಡುಪಿ ಸಾಂಸ್ಕೃತಿಕ ವೇದಿಕೆ ರಥಬೀದಿ ಗೆಳೆಯರು (ರಿ.) ಸಂಸ್ಥೆಯ ಆಶ್ರಯದಲ್ಲಿ ಡಾ. ನಿ. ಮುರಾರಿ ಬಲ್ಲಾಳ್ ಪ್ರೊ. ಕೆ.ಎಸ್. ಕೆದ್ಲಾಯ ನೆನಪಿನ ಮುರಾರಿ-ಕೆದ್ಲಾಯ ರಂಗೋತ್ಸವವು ಫೆಬ್ರವರಿ 25, 26, 27 ಪ್ರತಿದಿನ ಸಂಜೆ ಗಂಟೆ 7ಕ್ಕೆ ಉಡುಪಿ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಜರಗಿಲಿದೆ.ಫೆ. 25 ಶುಕ್ರವಾರ ಸಂಜೆ ಗಂಟೆ 6.15ಕ್ಕೆ ರಂಗೋತ್ಸವದ ಉದ್ಘಾಟನೆಯನ್ನು ಖ್ಯಾತ ಯುವ ರಂಗ ನಿರ್ದೇಶಕರಾದ ಶ್ರೀ ಲಕ್ಷಣ ಕೆ.ಪಿ. ನೆಲಮಂಗಲ ಇವರು ಮಾಡಲಿರುವರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಉಡುಪಿ ಎಂ.ಜಿ.ಎಂ. […]

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಉಪಶಾಮಕ ಆರೈಕೆಗೆ ಅಂತರರಾಷ್ಟ್ರೀಯ ಮನ್ನಣೆ

ಮಣಿಪಾಲ: 22 ಸದಸ್ಯ ರಾಷ್ಟ್ರಗಳೊಂದಿಗೆ ಯುನೈಟೆಡ್ ಕಿಂಗ್‌ಡಂನ ಲಿವರ್‌ಪೂಲ್ ವಿಶ್ವವಿದ್ಯಾನಿಲಯದಲ್ಲಿರುವ  ಯುರೋಪ್ ಮೂಲದ ಸಂಸ್ಥೆಯಾದ ಇಂಟರ್‌ನ್ಯಾಶನಲ್ ಕೋಲಾಬರೇಟಿವ್ ಕೋಆರ್ಡಿನೇಟಿಂಗ್ ಸೆಂಟರ್ ನಿಂದ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಉಪಶಾಮಕ ಆರೈಕೆಗಾಗಿ ಅಂತರರಾಷ್ಟ್ರೀಯ ಕೇಂದ್ರವೆಂದು ಮನ್ನಣೆ ಪಡೆದಿದೆ. ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ಈ ಮನ್ನಣೆಯನ್ನು ಪಡೆದ ಭಾರತದ ಮೊದಲ ಮತ್ತು ಏಕೈಕ ಸಂಸ್ಥೆಯಾಗಿದೆ. ಮಾಹೆ ಮಣಿಪಾಲ ಸಹ ಕುಲಾಧಿಪತಿಗಳಾದ ಡಾ ಎಚ್ ಎಸ್ ಬಲ್ಲಾಳ್ ಮತ್ತುಮಾಹೆ ಮಣಿಪಾಲದ ಉಪಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ […]

ಶಿವಮೊಗ್ಗ ಹತ್ಯೆ ಪ್ರಕರಣ; ಕಾನೂನು ಕೈಗೆತ್ತಿಕೊಳ್ಳದೆ ಸರ್ಕಾರದ ಮೇಲೆ ಒತ್ತಡ ಹೇರಿ; ಪೇಜಾವರ ಶ್ರೀ ಮನವಿ

ಉಡುಪಿ: ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷನ ಹತ್ಯೆ ಅತ್ಯಂತ ಖಂಡನೀಯ. ಮೇಲಿಂದ ಮೇಲೆ ಸಮಾಜದಲ್ಲಿ ನಡೆಯುತ್ತಿರುವ ಇಂತಹ ಘಾತಕ ಕೃತ್ಯಗಳಿಂದ ನಮ್ಮ ಸರ್ಕಾರ ಹಾಗೂ ನ್ಯಾಯಾಂಗ ವ್ಯವಸ್ಥೆ ಮೇಲೆ ಜನರು ನಂಬಿಕೆ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಹಾಗಾಗಿ ಜನರು ಯಾವುದೇ ಕಾನೂನು ಕೈಗೆತ್ತಿಕೊಳ್ಳದೆ, ನ್ಯಾಯಾಂಗ ಹಾಗೂ ಕಾರ್ಯಾಂಗದ ಮೇಲೆ ಒತ್ತಡ ಹೇರುವ ಮೂಲಕ ನ್ಯಾಯ ದೊರಕಿಸುವ ಕೆಲಸ ಮಾಡಬೇಕು ಎಂದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮನವಿ ಮಾಡಿದರು. ಇಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ […]

ಮಲ್ಪೆ: 9ನೇ ತರಗತಿ ವಿದ್ಯಾರ್ಥಿನಿ ಅನಾರೋಗ್ಯದಿಂದ ನಿಧನ

ಮಲ್ಪೆ; ಇಲ್ಲಿನ ಮಹಾಲಕ್ಷ್ಮೀ ಮೀನಿನ ಹೋಟೆಲ್ ಮಾಲೀಕ ಶ್ರೀಕುಮಾರ್ ಅವರ ಮಗಳು ದೃತಿ ಅಲ್ಪಕಾಲಿಕ ಅಸೌಖ್ಯದಿಂದ ನಿಧನರಾಗಿದ್ದಾರೆ. ಅವರಿಗೆ 14 ವರ್ಷ ವಯಸ್ಸಾಗಿತ್ತು. ದೃತಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಕೊನೆಯುಸಿರೆಳೆದಿದ್ದಾರೆ. ದೃತಿ ಮಾಧವ ಕೃಪಾ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ವಿದ್ಯಾರ್ಥಿನಿಯ ಅಕಾಲಿಕ ನಿಧನಕ್ಕೆ ಶಾಲೆಯ ಪ್ರಾಂಶುಪಾಲರಾದ ಜೆಸ್ಸಿ ಆ್ಯಂಡ್ರೀವ್ಸ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಹಾಯಧನ: ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ, ಎನ್.ಪಿ.ಸಿ.ಐ ಮ್ಯಾಪಿಂಗ್ ಕಡ್ಡಾಯ

ಉಡುಪಿ, ಫೆ.23: ಕೃಷಿ ಇಲಾಖೆಯ ವತಿಯಿಂದ ನೀಡಲಾಗುವ ಪಿ.ಎಂ ಕಿಸಾನ್ ಕರ್ನಾಟಕ ಯೋಜನೆಯ ಆರ್ಥಿಕ ಸಹಾಯಧನವು ಜಿಲ್ಲೆಯ 2257 ಮಂದಿ ರೈತರಿಗೆ ಹಾಗೂ 1067 ಮಂದಿ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿಗಳ ರೈತ ವಿದ್ಯಾನಿಧಿ ಸ್ಕಾಲರ್ ಶಿಪ್ ಸಹಾಯಧನವು ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಹಾಗೂ ಎನ್.ಪಿ.ಸಿ.ಐ ಮ್ಯಾಪಿಂಗ್ ಬಾಕಿಯಿರುವುದರಿಂದ ವರ್ಗಾವಣೆಯಾಗಿರುವುದಿಲ್ಲ. ರೈತರು ಹಾಗೂ ವಿದ್ಯಾರ್ಥಿಗಳ ಪಟ್ಟಿಯನ್ನು ಕೃಷಿ ಇಲಾಖೆಯ ಹೋಬಳಿಯ ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ನಾಮಫಲಕದಲ್ಲಿ ಪ್ರಕಟಿಸಲಾಗಿದ್ದು, ಸಂಬಂಧಪಟ್ಟ ರೈತರು […]