ಮಲ್ಪೆ: 9ನೇ ತರಗತಿ ವಿದ್ಯಾರ್ಥಿನಿ ಅನಾರೋಗ್ಯದಿಂದ ನಿಧನ

ಮಲ್ಪೆ; ಇಲ್ಲಿನ ಮಹಾಲಕ್ಷ್ಮೀ ಮೀನಿನ ಹೋಟೆಲ್ ಮಾಲೀಕ ಶ್ರೀಕುಮಾರ್ ಅವರ ಮಗಳು ದೃತಿ ಅಲ್ಪಕಾಲಿಕ ಅಸೌಖ್ಯದಿಂದ ನಿಧನರಾಗಿದ್ದಾರೆ. ಅವರಿಗೆ 14 ವರ್ಷ ವಯಸ್ಸಾಗಿತ್ತು.

ದೃತಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಕೊನೆಯುಸಿರೆಳೆದಿದ್ದಾರೆ.

ದೃತಿ ಮಾಧವ ಕೃಪಾ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ವಿದ್ಯಾರ್ಥಿನಿಯ ಅಕಾಲಿಕ ನಿಧನಕ್ಕೆ ಶಾಲೆಯ ಪ್ರಾಂಶುಪಾಲರಾದ ಜೆಸ್ಸಿ ಆ್ಯಂಡ್ರೀವ್ಸ್ ಸಂತಾಪ ವ್ಯಕ್ತಪಡಿಸಿದ್ದಾರೆ.