ಕುಂದಾಪುರ:ವಿದ್ಯಾರ್ಥಿನಿಯರನ್ನು ತಡೆದ ಪ್ರಾಂಶುಪಾಲರ ನಡೆ ಖಂಡನಾರ್ಹ:ಎಸ್ ಐ ಓ

ಕುಂದಾಪುರ:ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದಿನಾಂಕ 3/02/2022 ರ ಗುರುವಾರದಂದು ಎಂದಿನಂತೆ ಶಿರವಸ್ತ್ರ ಧರಿಸಿ ಬಂದ ವಿದ್ಯಾರ್ಥಿನೀಯರನ್ನು ಕಾಲೇಜಿನ ಕ್ಯಾಂಪಸಿನ ಗೇಟಿನ ಬಳಿಯೇ ತಡೆದು ಅಮಾನವೀಯವಾಗಿ ವರ್ತಿಸಿದ ಪ್ರಾಂಶುಪಾಲರ ವರ್ತನೆ ನಿಜಕ್ಕೂ ಖೇದಕರ. ಈ ಘಟನೆ ಖಂಡನಾರ್ಹ  ಎಂದು ಎಸ್.ಐ.ಓ ಪ್ರಕಟನೆಯಲ್ಲಿ ತಿಳಿಸಿದೆ ಬಹಳಷ್ಟು ವರ್ಷದಿಂದ ವಿದ್ಯಾರ್ಥಿನೀಯರು ಶಿರವಸ್ತ್ರದೊಂದಿಗೆ ಸರ್ಕಾರಿ ಪದವಿಪೂರ್ವ ಕಾಲೇಜು ಕುಂದಾಪುರದಲ್ಲಿ ವಿದ್ಯಾಭ್ಯಾಸ ಮಾಡುತ್ತ ಬಂದಿದ್ದಾರೆ. ಈ ಮುಂಚೆ ಕೂಡ ವಿದ್ಯಾರ್ಥಿನೀಯರು ಸದ್ರಿ ಕಾಲೇಜಿನಲ್ಲಿ ಶಿರವಸ್ತ್ರದೊಂದಿಗೆ ಶಿಕ್ಷಣ ಪಡೆದು ಹೋಗಿದ್ದಾರೆ. […]

ಮೂರ್ಖ ರಾಜಕಾರಣ ಬಿಟ್ಟು ಬಿಡಿ ಸಿದ್ದರಾಮಯ್ಯನವರೇ, ಇಲ್ಲದಿದ್ದರೆ ಹಿಂದೂ ಸಮಾಜ ತಕ್ಕ ಉತ್ತರ ನೀಡಲಿದೆ: ವಾಸುದೇವ ಭಟ್ ಆಕ್ರೋಶ

ಹಿಜಾಬ್ ವಿಚಾರದಲ್ಲಿ ಮೂರ್ಖ ರಾಜಕಾರಣ ಮಾಡುವುದನ್ನು ಬಿಟ್ಟುಬಿಡಿ ಸಿದ್ದರಾಮಯ್ಯನವರೇ, ಇಲ್ಲದಿದ್ದರೆ ನಿಮ್ಮ ಧಿಮಾಕಿಗೆ ಸದ್ಯದಲ್ಲೇ ಕೇಸರಿ ಸಮಾಜ ತಕ್ಕ ಉತ್ತರ ನೀಡಲಿದೆ ಎಂದು ಬ್ರಾಹ್ಮಣ ಸಮಾಜದ ಮುಖಂಡ, ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಆಕ್ರೋಶ ವ್ಯಕ್ತಪಡಿಸಿದರು. ನೀವು ದಶಕಗಳ ಕಾಲ ನಡೆಸಿದ ಡೋಂಗಿ ಜಾತ್ಯಾತೀತ ರಾಜಕಾರಣದ ಫಲಶ್ರುತಿಯಾಗಿ ಇವತ್ತು ಜಿಹಾದಿಗಳು ಪ್ರಪಂಚದ ಏಕೈಕ ಹಿಂದೂ ರಾಷ್ಟ್ರವಾಗಿರುವ ಭಾರತದ ಸಂವಿಧಾನ , ಕಾನೂನಿನ ಮೇಲೆ ಸವಾರಿ ಮಾಡಲು ಹೊರಟಿದ್ದಾರೆ. ನಿಮ್ಮೆಲ್ಲರ ನೀಚ ರಾಜಕಾರಣವನ್ನು ದೇಶದ ವರ್ತಮಾನ ಮತ್ತು […]

ಸಿದ್ದರಾಮಯ್ಯರಿಗೆ ತಾಕತ್ತಿದ್ದರೆ ಉಡುಪಿಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಲಿ: ರಾಮ್ ಸೇನಾ ಸವಾಲ್

ಉಡುಪಿಯ ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಡುಪಿಯ ಶಾಸಕರನ್ನು ಅವನ್ಯಾರು ಏಂದು ಹೇಳಿರುವುದು ಶಾಸಕಾಂಗಕ್ಕೆ ಮಾಡಿದ ಅವಮಾನವೆಂದು ಉಡುಪಿ ಜಿಲ್ಲಾ ರಾಮ್ ಸೇನಾ ಅಧ್ಯಕ್ಷ ಜಯರಾಂ ಅಂಬೆಕಲ್ಲು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರಿಂದ ಆಯ್ಕೆಯಾದ ಶಾಸಕರನ್ನು ಈ ರೀತಿಯಾಗಿ ಅವಮಾನಿಸಿರುವುದು ಉಡುಪಿಯ ಮತದಾರರಿಗೆ ಮಾಡಿದ ಅವಮಾನ, ಹಾಗೂ ತಾವು ಕಳೆದ 5 ವರ್ಷದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಶಾಸಕರ ಪರಿಚಯ ಇಲ್ಲದಿರುವುದು ನಿಮ್ಮ ಮತೀಯ ಓಲೈಕೆಯ ಸುಳಿವು ಏಂಬುದು ನಗ್ನ ಸತ್ಯ. ಹಿಜಾಬ್ […]

ನಾಳೆ (ಫೆ.5) ಶೆಟ್ಟಿಬೆಟ್ಟು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಉಡುಪಿ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಶೆಟ್ಟಿಬೆಟ್ಟು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಳೆ (ಫೆ.5) ಬೆಳಿಗ್ಗೆ 10ರಿಂದ ಮಧ್ಯಾಹ್ನ 1ಗಂಟೆಯ ವರೆಗೆ ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಮಹಿಳೆಯರಿಗಾಗಿ ಗರ್ಭಕಂಠದ ಕ್ಯಾನ್ಸರ್‌ ತಪಾಸಣೆ ಶಿಬಿರ ಹಮ್ಮಿಕೊಂಡಿದ್ದು, 30 ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

ಹಿಜಾಬ್ ವಿವಾದದಲ್ಲಿ ಸಿದ್ಧರಾಮಯ್ಯ, ಮೆಹಬೂಬ್ ಮುಫ್ತಿ ಬಿಟ್ಟಿ ಉಪದೇಶದ ಅಗತ್ಯವಿಲ್ಲ: ಯಶ್ಪಾಲ್ ಸುವರ್ಣ ಟೀಕೆ

ಕರಾವಳಿ ಜಿಲ್ಲೆಯ ಕಾಲೇಜುಗಳಲ್ಲಿ ಮತೀಯವಾದಿ ಸಂಘಟನೆಗಳ ಪ್ರಾಯೋಜಕತ್ವದಲ್ಲಿ ಒಂದು ತಿಂಗಳಿಂದ ಸೃಷಿಯಾಗಿರುವ ಹಿಜಾಬ್ ವಿವಾದದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಮೆಹಬೂಬ್ ಮುಫ್ತಿ ಅವರ ಬಿಟ್ಟಿ ಉಪದೇಶದ ಅಗತ್ಯವಿಲ್ಲ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ. ಸದಾ ಅಲ್ಪಸಂಖ್ಯಾತರ ಓಲೈಕೆಗಾಗಿ ಹಿಂದುತ್ವ ಹಾಗೂ ಹಿಂದೂ ಕಾರ್ಯಕರ್ತರನ್ನು ಟೀಕಿಸುವುದನ್ನೇ ಚಟವಾಗಿರಿಸಿ ಕೊಂಡಿರುವ ಸಿದ್ದರಾಮಯ್ಯ, ಕಾಶ್ಮೀರದಲ್ಲಿ ಮುಖ್ಯಮಂತ್ರಿಯಾಗಿ ಶರಿಯಾ ಕಾನೂನಿನನಂತೆ ಮಹಿಳೆಯರ ಹಕ್ಕುಗಳನ್ನು ದಮನಗೊಳಿಸಿ ಆಡಳಿತ ನಡೆಸಿದ್ದ ಮೆಹಬೂಬ […]