ಉಡುಪಿ ಜಿಲ್ಲೆಯಲ್ಲಿ 1293 ಮಕ್ಕಳು, ವಿದ್ಯಾರ್ಥಿಗಳಲ್ಲಿ ಕೋವಿಡ್ ಪತ್ತೆ: ನಗರದಲ್ಲಿ‌ ಜಿಲ್ಲಾ ಸರ್ವೇಕ್ಷಣಾಧಿಕಾರಿ

ಉಡುಪಿ ಜಿಲ್ಲೆಯಲ್ಲಿ ಜ.1ರಿಂದ ಇಂದಿನವರೆಗೆ ಒಟ್ಟು 1293 ಮಂದಿ ಮಕ್ಕಳು ಹಾಗೂ ವಿದ್ಯಾರ್ಥಿಗಳಲ್ಲಿ ಕೊರೊನ ಸೋಂಕು ಕಾಣಿಸಿಕೊಂಡಿದೆ. ಕಳೆದ 13 ದಿನಗಳಲ್ಲಿ 5 ವರ್ಷದೊಳಗಿನ ಒಟ್ಟು 20 ಮಕ್ಕಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ ಮಾಹಿತಿ ನೀಡಿದ್ದಾರೆ. ಉಳಿದಂತೆ 5 ರಿಂದ 10 ವರ್ಷದೊಳಗಿನ 72, 10 ರಿಂದ 15ವರ್ಷದೊಳಗಿನ 256, 15ರಿಂದ 20 ವರ್ಷದೊಳಗಿನ 473 ಹಾಗೂ 21 ರಿಂದ 25 ವರ್ಷದೊಳಗಿನ 472 ಮಂದಿ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ […]

ಉಡುಪಿ: ಲಂಚ ಸ್ವೀಕಾರ; ನಗರಾಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ಎಸಿಬಿ‌ ಬಲೆಗೆ

ಉಡುಪಿ: ಉಡುಪಿ ನಗರಾಭಿವೃದ್ಧಿ ಪ್ರಾಾಧಿಕಾರದ ಸಿಬಂದಿಗಳು ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ದಾಳಿ ನಡೆಸಿದ ಘಟನೆ ಗುರುವಾರ ನಡೆದಿದೆ. ವಾಣಿಜ್ಯ ಭೂಮಿ ಪರಿವರ್ತನೆಗಾಗಿ ರೇಷ್ಮಾಾ ನಾಯಕ್ ಎಂಬವರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರಾಾಧಿಕಾರದ ನಗರ ಯೋಜನ ಸದಸ್ಯ ಸಹಾಯಕ ನಿರ್ದೇಶಕರಾದ ಗುರುಪ್ರಸಾದ್, ಸಹಾಯಕ ಯೋಜನ ಸದಸ್ಯೆೆ ನೈಮಾ ಸಹೀದ್, ಹೊರಗುತ್ತಿಿಗೆ ನೌಕರ ಶಿವಪ್ರಸಾದ್ ಅವರೆಲ್ಲ ಸೇರಿ 4 ಲ.ರೂ.ಲಂಚಕ್ಕೆ ಬೇಡಿಕೆ ಇರಿಸಿದ್ದರು. ಬಳಿಕ 2.5 ಲ.ರೂ.ಗೆ ಒಪ್ಪಿಿದ್ದರು. ಈ ಬಗ್ಗೆೆ ರೇಷ್ಪಾಾ ಅವರು ಎಸಿಬಿಗೆ […]

ಬಂಟಕಲ್ಲು: ಜ.18ಕ್ಕೆ ಕನಕಾಂಗಿ ಗಂಧರ್ವ ಕನ್ಯೆ ಯಕ್ಷಗಾನ ಪ್ರದರ್ಶನ

ಉಡುಪಿ: ನಗರಬೆಟ್ಟು ಗೋಪಾಲನಾಯಕ್ ಮತ್ತು ಮಕ್ಕಳ ವತಿಯಿಂದ ನೆರವೇರಿಸಲ್ಪಡುವ ಚಂಡಿಕಾಹವನ ಪ್ರಯುಕ್ತ ಸಾಲಿಗ್ರಾಮ ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಳಿಕೆಯಲ್ಲಿ ಬಂಟಕಲ್ಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇದೇ ಜ.18ರಂದು ಮಧ್ಯಾಹ್ನ 1.30ರಿಂದ “ಕನಕಾಂಗಿ ಗಂಧರ್ವ ಕನ್ಯೆ” ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಹಿಮ್ಮೇಳ ಭಾಗವತರಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು ಹಾಗೂ ರಾಘವೇಂದ್ರ ಆಚಾರ್ ಜನ್ಸಾಲೆ. ಮದ್ದಲೆಯಲ್ಲಿ ಪರಮೇಶ್ವರ ಭಂಡಾರಿ ಕರ್ಕಿ, ಚಂಡೆ – ರಾಕೇಶ್ ಮಲ್ಯ ಮತ್ತು ಕೋಟ ಶಿವಾನಂದ. ಮುಮ್ಮೇಳ: ಸ್ತ್ರೀ ವೇಷ – ಶಶಿಕಾಂತ್ ಶೆಟ್ಟಿ, ವಂಡಾರು […]

ಕೊರೊನಾ ಕಲಿಸಿದ ಸ್ವಾವಲಂಬಿ ಪಾಠ ಮರೆಯದಿರಿ; ನಗರದಲ್ಲಿ ಈಶಪ್ರಿಯತೀರ್ಥ ಸ್ವಾಮೀಜಿ

ಕೊರೊನಾ ಎರಡು ವರ್ಷ ಸಾಕಷ್ಟು ಪಾಠ ಕಲಿಸಿದೆ. ಕೊರೊನಾ ಹೇಳಿಕೊಟ್ಟ ಸ್ವಾವಲಂಬಿ ಪಾಠ ನಿರಂತರ ಜೀವನದಲ್ಲಿ ಪಾಲಿಸೋಣ. ಆ ಮೂಲಕ‌ ನಮ್ಮ ಊರು ನಮ್ಮ ಜನರ ಕಾಳಜಿ ವಹಿಸೋಣ ಎಂದು ಉಡುಪಿ ಪರ್ಯಾಯ ಮಠಾಧೀಶ ಈಶಪ್ರೀಯತೀರ್ಥ   ಹೇಳಿದ್ದಾರೆ. ಎರಡು ವರ್ಷದ ಪರ್ಯಾಯ ಪೂಜಾಧಿಕಾರ ಬಿಟ್ಟುಕೊಡಲು ಒಂದು ವಾರ ಬಾಕಿ ಇರುವ ಹಿನ್ನೆಲೆಯಲ್ಲಿ ಇಂದು ಕೃಷ್ಣಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಸ್ವಾಮೀಜಿ ಮಾತನಾಡಿದರು. ನಮ್ಮ ಊರಿನ ಸಂಸ್ಕೃತಿ ಉಳಿಲು ನಾವೇ ಉದ್ಯೋಗ ಸೃಷ್ಟಿ ಮಾಡಬೇಕು. ಯಾವುದೋ ಊರು ಯಾವುದೊ ನಾಡಿಗೆ ಹೋಗುವ […]