ಕೊರೊನಾ ಕಲಿಸಿದ ಸ್ವಾವಲಂಬಿ ಪಾಠ ಮರೆಯದಿರಿ; ನಗರದಲ್ಲಿ ಈಶಪ್ರಿಯತೀರ್ಥ ಸ್ವಾಮೀಜಿ

ಕೊರೊನಾ ಎರಡು ವರ್ಷ ಸಾಕಷ್ಟು ಪಾಠ ಕಲಿಸಿದೆ. ಕೊರೊನಾ ಹೇಳಿಕೊಟ್ಟ ಸ್ವಾವಲಂಬಿ ಪಾಠ ನಿರಂತರ ಜೀವನದಲ್ಲಿ ಪಾಲಿಸೋಣ. ಆ ಮೂಲಕ‌ ನಮ್ಮ ಊರು ನಮ್ಮ ಜನರ ಕಾಳಜಿ ವಹಿಸೋಣ ಎಂದು ಉಡುಪಿ ಪರ್ಯಾಯ ಮಠಾಧೀಶ ಈಶಪ್ರೀಯತೀರ್ಥ   ಹೇಳಿದ್ದಾರೆ.

ಎರಡು ವರ್ಷದ ಪರ್ಯಾಯ ಪೂಜಾಧಿಕಾರ ಬಿಟ್ಟುಕೊಡಲು ಒಂದು ವಾರ ಬಾಕಿ ಇರುವ ಹಿನ್ನೆಲೆಯಲ್ಲಿ ಇಂದು ಕೃಷ್ಣಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಸ್ವಾಮೀಜಿ ಮಾತನಾಡಿದರು.

ನಮ್ಮ ಊರಿನ ಸಂಸ್ಕೃತಿ ಉಳಿಲು ನಾವೇ ಉದ್ಯೋಗ ಸೃಷ್ಟಿ ಮಾಡಬೇಕು. ಯಾವುದೋ ಊರು ಯಾವುದೊ ನಾಡಿಗೆ ಹೋಗುವ ಬದಲು ಇಲ್ಲೇ ಇದ್ದು ಉದ್ಯೋಗ ಮಾಡಿಕೊಂಡು ಇರಬೇಕು. ಕುಟುಂಬ ಬಳಗದ ಜೊತೆ ಯುವ ಜನಾಂಗ ಇರಬೇಕಾದ ಅನಿವಾರ್ಯತೆ ಇದೆ ಎಂದರು.

ಕೃಷ್ಣ ಮಠದ ಆವರಣ ಬದಲಾವಣೆ ಮಾಡಿದ್ದೇವೆ. ಶುಚಿತ್ವ ಪ್ಲ್ಯಾಸ್ಟಿಕ್ ಬಳಕೆ ಕಡಿಮೆ ಮಾಡುವ ಬಗ್ಗೆ ಅರಿವು ಮೂಡಿಸಿದ್ದೇವೆ. ಆ ನಿಟ್ಟಿನಲ್ಲಿ ಎರಡು ವರ್ಷ ಪ್ರಯತ್ನ ಮಾಡಿದ್ದೇವೆ. ಜನ ಸಾಕಷ್ಟು ಬದಲಾವಣೆ ನೋಡಿದ್ದೇವೆ. ತಮ್ಮ ಜೀವನದಲ್ಲಿ ಅನುಷ್ಠಾನ ಮಾಡಿಕೊಂಡಿದ್ದಾರೆ. ಮನುಷ್ಯ ಜೀವನದಲ್ಲಿ ಯಾತ್ರೆ ಮಾಡುವ ಸಂಸ್ಕೃತಿ ಬೆಳೆಸಬೇಕು. ಹೊರಗಿನದ್ದು ನೋಡಿ ಉತ್ತಮವಾದದನ್ನು ತೆಗೆದುಕೊಂಡು ನಮ್ಮತನ ಉಳಿಸುವ ಅಗತ್ಯ ಇದೆ ಎಂದು ಹೇಳಿದರು.