ಉಡುಪಿ: ಲಂಚ ಸ್ವೀಕಾರ; ನಗರಾಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ಎಸಿಬಿ‌ ಬಲೆಗೆ

ಉಡುಪಿ: ಉಡುಪಿ ನಗರಾಭಿವೃದ್ಧಿ ಪ್ರಾಾಧಿಕಾರದ ಸಿಬಂದಿಗಳು ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ದಾಳಿ ನಡೆಸಿದ ಘಟನೆ ಗುರುವಾರ ನಡೆದಿದೆ.

ವಾಣಿಜ್ಯ ಭೂಮಿ ಪರಿವರ್ತನೆಗಾಗಿ ರೇಷ್ಮಾಾ ನಾಯಕ್ ಎಂಬವರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರಾಾಧಿಕಾರದ ನಗರ ಯೋಜನ ಸದಸ್ಯ ಸಹಾಯಕ ನಿರ್ದೇಶಕರಾದ ಗುರುಪ್ರಸಾದ್, ಸಹಾಯಕ ಯೋಜನ ಸದಸ್ಯೆೆ ನೈಮಾ ಸಹೀದ್, ಹೊರಗುತ್ತಿಿಗೆ ನೌಕರ ಶಿವಪ್ರಸಾದ್ ಅವರೆಲ್ಲ ಸೇರಿ 4 ಲ.ರೂ.ಲಂಚಕ್ಕೆ ಬೇಡಿಕೆ ಇರಿಸಿದ್ದರು. ಬಳಿಕ 2.5 ಲ.ರೂ.ಗೆ ಒಪ್ಪಿಿದ್ದರು. ಈ ಬಗ್ಗೆೆ ರೇಷ್ಪಾಾ ಅವರು ಎಸಿಬಿಗೆ ಮಾಹಿತಿ ನೀಡಿದ್ದು, ಅದರಂತೆ ದಾಳಿ ನಡೆದಿದೆ.

ಡಿವೈಎಸ್‌ಪಿ ಮಂಜುನಾಥ್ ಕವರಿ, ಇನ್‌ಸ್ಪೆೆಕ್ಟರ್‌ಗಳಾದ ಸತೀಶ್ ಜಿ., ರಫೀಕ್ ಎಂ., ಸಿಬಂದಿಗಳಾದ ಯತಿನ್, ಪ್ರಸನ್ನ ದೇವಾಡಿಗ, ಅಬ್ದುಲ್ ಜಲಾಲ್, ರವೀಂದ್ರ ಗಾಣಿಗ, ಅದ್ಬುಲ್ ಲತೀಫ್, ರಾಘವೇಂದ್ರ ಹೊಸಕೋಟೆ, ಸೂರಜ್ ಕಾಪು, ರಮೇಶ್ ಭಂಡಾರಿ, ಪ್ರತಿಮಾ, ಶೀತಲ್ ದಾಳಿಯಲ್ಲಿ ಭಾಗವಹಿಸಿದ್ದರು.