ಮತಾಂತರ ನಿಷೇಧ ಕಾಯ್ದೆ ನಿರ್ಧಾರದಿಂದ ಹಿಂದೆ ಸರಿಯಿರಿ: ಕ್ರೈಸ್ತ ಸಮುದಾಯದ ನಿಯೋಗದಿಂದ ಸಿಎಂಗೆ ಮನವಿ

ಬೆಂಗಳೂರು: ರಾಜ್ಯಾದ್ಯಂತ ಮತಾಂತರ ನಿಷೇಧದ ಕುರಿತು ಪರ-ವಿರೋಧ ಚರ್ಚೆ ಆಗುತ್ತಿದ್ದು, ಈ ನಡುವೆ ಕಾಂಗ್ರೆಸ್‍ನ ಹಿರಿಯ ಮುಖಂಡರಾದ ಬಿ.ಎಲ್.ಶಂಕರ್, ಕೆ.ಇ.ರಾಧಾಕೃಷ್ಣ, ಮೇಲ್ಮನೆ ಮಾಜಿ ಸದಸ್ಯ ಐವಾನ್ ಡಿಸೋಜಾ, ಎನ್‍ಆರ್‍ಐ ಉಪಾಧ್ಯಕ್ಷ ಆರತಿ ಕೃಷ್ಣ, ಮಾಜಿ ಶಾಸಕ ಜೆ.ಆರ್.ಲೋಬೋ ಹಾಗೂ ಕ್ರೈಸ್ತ ಸಮುದಾಯದ ರೂನಾಲ್ಡ್ ಕೊಲಾಸೊ ನೇತೃತ್ವದ ನಿಯೋಗ ಸಿಎಂ ನಿವಾಸದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಖುದ್ದು ಭೇಟಿ ಮಾಡಿ ಸಮಾಲೋಚನೆ ನಡೆಸಿತು. ಈ ವೇಳೆ ನಿಯೋಗ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿ ಬೇಡ ಎಂದು ಸಿಎಂ […]

ಉಡುಪಿ: ಕುಸಿದುಬಿದ್ದು ಕೋರ್‌ ಕಟ್ಟಿಂಗ್‌ ಕೆಲಸಗಾರ ಮೃತ್ಯು

ಉಡುಪಿ: ಕೋರ್‌ ಕಟ್ಟಿಂಗ್‌ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಹಠಾತ್ ಆಗಿ ಕುಸಿದು ಬಿದ್ದು ಮೃತಪಟ್ಟ ಘಟನೆ ಉಡುಪಿ ಪುತ್ತೂರು ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಶನಿವಾರ ನಡೆದಿದೆ. ಮೃತರನ್ನು ಉಡುಪಿ ಗುಂಡಿಬೈಲು ಶಾಲೆಯ ಬಳಿಯ ನಿವಾಸಿ ಹುಸೇನ್‌ ಸಾಬ್‌ ನದಾಫ್‌ (22) ಎಂದು ಗುರುತಿಸಲಾಗಿದೆ. ಇವರು ಕಳೆದ ಆರು ವರ್ಷಗಳಿಂದ ಆದಿ ಉಡುಪಿಯ ಪ್ರವೀಣ್‌ ಡಿ. ಪೂಜಾರಿ ಎಂಬುವರೊಂದಿಗೆ ಕೋರ್‌ ಕಟ್ಟಿಂಗ್‌ ಕೆಲಸ ಮಾಡಿಕೊಂಡಿದ್ದರು. ನಿನ್ನೆ ಪುತ್ತೂರು ದುರ್ಗಾಪರಮೇಶ್ವರಿ ದೇವಸ್ಥಾನದ ಭಗವತಿ ಹಾಲ್‌ನ ಒಂದನೇ ಮಹಡಿಯ ಓವರ್‌ ಹೆಡ್‌ […]

ಉಡುಪಿ: ಖಾಸಗಿ ಬಸ್ ಚಾಲಕನ ಮೇಲೆ ಹಲ್ಲೆ; ದೂರು ದಾಖಲು

ಉಡುಪಿ: ಇಲ್ಲಿನ ಸಿಟಿ ಬಸ್ ನಿಲ್ದಾಣದಲ್ಲಿ ಎಂಟು ಮಂದಿಯ ತಂಡವೊಂದು ಖಾಸಗಿ ಬಸ್ ಚಾಲಕ ಮಲ್ಪೆಯ ಶಿಶಿರ್‌ ಎಸ್‌. ಪೂಜಾರಿ ಯಾನೆ ಶಿಶಿರ್‌ ಪಾಲನ್‌ ಅವರಿಗೆ ಹಲ್ಲೆ ನಡೆಸಿದೆ. ಈ ಬಗ್ಗೆ ಶಿಶಿರ್ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೊಂದು ಖಾಸಗಿ ಬಸ್ ನಲ್ಲಿದ್ದ ಸುದೀಪ್‌, ಸಾದಿಕ್‌, ಜಾಸಿಮ್‌, ತನ್ವೀರ್‌, ರಿಜ್ವಾನ್‌,  ಶಾಹಿದ್‌, ಜಾವಿದ್‌ ಹಾಗೂ ಅಪ್ರೋಜ್‌ ಹಲ್ಲೆ ನಡೆಸಿದ ಆರೋಪಿಗಳು. ಡಿ.9 ರಂದು ಶಿಶಿರ್‌ ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ಹೋಗುತ್ತಿರುವಾಗ […]

ಭರತನಾಟ್ಯ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ನಿಯತಿ

ಕುಂದಾಪುರ: ಪದವಿಪೂರ್ವ ಶಿಕ್ಷಣ ಇಲಾಖೆಯವರು ಆಯೋಜಿಸಿದ 2021-22ನೇ ಶೈಕ್ಷಣಿಕ ಸಾಲಿನ ಕಲೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದ  ಕುಮಾರಿ ನಿಯತಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾಳೆ. ಕುಂದಾಪುರದ ಹೂವಯ್ಯ ಖಾರ್ವಿ ಹಾಗೂ ಅಮ್ರತ ದಂಪತಿಗಳ ಪುತ್ರಿಯಾಗಿದ್ದು, ಭರತನಾಟ್ಯ ಗುರುಗಳಾದ ವಿದೂಷಿ ಶ್ರೀಮತಿ ಪ್ರವಿತಾ ಅಶೋಕ್ ಇವರಿಂದ ತರಬೇತಿ ಪಡೆದಿರುತ್ತಾಳೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿನಿ ಕುಮಾರಿ ಸಿಂಚನಾ ನೆಂಪು ರಾಜ್ಯ ಮಟ್ಟದ […]