ಉಡುಪಿ: ಖಾಸಗಿ ಬಸ್ ಚಾಲಕನ ಮೇಲೆ ಹಲ್ಲೆ; ದೂರು ದಾಖಲು

ಉಡುಪಿ: ಇಲ್ಲಿನ ಸಿಟಿ ಬಸ್ ನಿಲ್ದಾಣದಲ್ಲಿ ಎಂಟು ಮಂದಿಯ ತಂಡವೊಂದು ಖಾಸಗಿ ಬಸ್ ಚಾಲಕ ಮಲ್ಪೆಯ ಶಿಶಿರ್‌ ಎಸ್‌. ಪೂಜಾರಿ ಯಾನೆ ಶಿಶಿರ್‌ ಪಾಲನ್‌ ಅವರಿಗೆ ಹಲ್ಲೆ ನಡೆಸಿದೆ. ಈ ಬಗ್ಗೆ ಶಿಶಿರ್ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದು ಖಾಸಗಿ ಬಸ್ ನಲ್ಲಿದ್ದ ಸುದೀಪ್‌, ಸಾದಿಕ್‌, ಜಾಸಿಮ್‌, ತನ್ವೀರ್‌, ರಿಜ್ವಾನ್‌,  ಶಾಹಿದ್‌, ಜಾವಿದ್‌ ಹಾಗೂ ಅಪ್ರೋಜ್‌ ಹಲ್ಲೆ ನಡೆಸಿದ ಆರೋಪಿಗಳು. ಡಿ.9 ರಂದು ಶಿಶಿರ್‌ ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ಹೋಗುತ್ತಿರುವಾಗ ಈ ಎಂಟು ಮಂದಿ ಆರೋಪಿಗಳು ಏಕಾಏಕಿಯಾಗಿ ಬಂದು ಹಲ್ಲೆ ನಡೆಸಿದ್ದಾರೆ. ಚಾಕು ಹಿಡಿದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.