ಮಂಚಿ: ಹೆಬ್ಬಾವು ಸೆರೆಹಿಡಿದ ಸುಧೀರ್ ಶೇರಿಗಾರ್; ಸ್ಥಳೀಯರ ಆತಂಕ ದೂರ

ಮಂಚಿ: ಇಲ್ಲಿನ ರಾಜೀವನಗರದ ಸುಂದರ್ ಅಮೀನ್ ಎಂಬವರ ಮನೆಯಲ್ಲಿ ಹೆಬ್ಬಾವೊಂದು ಕಾಣಿಸಿಕೊಂಡಿದ್ದು, ಸ್ಥಳೀಯರಾದ ಸುಧೀರ್ ಶೇರಿಗಾರ್ ರಾಜೀವನಗರ ಅವರು ಹೆಬ್ಬಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಮಂಚಿ- ರಾಜೀವನಗರ ಪರಿಸರದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹೆಬ್ಬಾವುಗಳು ಪತ್ತೆಯಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಈ ಹಿಂದೆ ರಾಜೀವನಗರ ಆರನೇ ಅಡ್ಡರಸ್ತೆಯಲ್ಲಿ ಎರಡು ಬಾರಿ ಬೃಹತ್ ಹೆಬ್ಬಾವು ಪತ್ತೆಯಾಗಿದ್ದು, ಅವುಗಳನ್ನು ಸುಧೀರ್ ಅವರು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದರು. ಆ ಮೂಲಕ ಸ್ಥಳೀಯರ ಆತಂಕವನ್ನು ದೂರ ಮಾಡಿದ್ದರು.
ಮೂಡುಬಿದಿರೆ: “ಕೋಟಿ – ಚೆನ್ನಯ” ಜೋಡುಕರೆ ಕಂಬಳ ಕೂಟದ ಫಲಿತಾಂಶ

ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : ಕನೆಹಲಗೆ: 6 ಜೊತೆ ಅಡ್ಡಹಲಗೆ: 6 ಜೊತೆ ಹಗ್ಗ ಹಿರಿಯ: 21 ಜೊತೆ ನೇಗಿಲು ಹಿರಿಯ: 41 ಜೊತೆ ಹಗ್ಗ ಕಿರಿಯ: 32 ಜೊತೆ ನೇಗಿಲು ಕಿರಿಯ: 115 ಜೊತೆ ಒಟ್ಟು ಕೋಣಗಳ ಸಂಖ್ಯೆ: 221 ಜೊತೆ ಕನೆಹಲಗೆ: ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವ ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ ( 6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ ) ಅಡ್ಡ ಹಲಗೆ: ಪ್ರಥಮ: ಕೋಟ ಗಿಳಿಯಾರ್ ಹಂಡಿಕೆರೆ […]
ಉದ್ದಿಮೆದಾರರ ಜತೆ ಸಂವಾದ ಕಾರ್ಯಕ್ರಮ

ಉಡುಪಿ: ಕೇಂದ್ರೀಯ excise ಮತ್ತು ತೆರಿಗೆಗಳ ಪ್ರಧಾನ ಮುಖ್ಯ ಆಯುಕ್ತರ ಕಚೇರಿ ಹಾಗೂ ಉಡುಪಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಉದ್ದಿಮೆದಾರರ ಜತೆ ಸಂವಾದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಅಂಡಾರು ದೇವಿಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಭಾರತ ಹಿಂದುಗಳ ದೇಶ: ರಾಹುಲ್ ಗಾಂಧಿ

ಜೈಪುರ: ಭಾರತ ಹಿಂದುಗಳ ದೇಶವೇ ಹೊರತು, ಅಧಿಕಾರದ ಹಪಾಹಪಿ ಹೊಂದಿರುವ ಹಿಂದುತ್ವವಾದಿಗಳದ್ದಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿರುವ ಅವರು, ಭಾರತದ ರಾಜಕಾರಣದಲ್ಲಿ ಸದ್ಯ ಹಿಂದು ಮತ್ತು ಹಿಂದುತ್ವವಾದ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಇವುಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ನಾನು ಹಿಂದು. ಆದರೆ, ಹಿಂದುತ್ವವಾದಿಯಲ್ಲ ಎಂದರು. ಹಿಂದುತ್ವವಾದಿಗಳು ಕೇವಲ ಅಧಿಕಾರಕ್ಕಾಗಿ ಜೀವಿಸುವವರು. ಅವರು ಅಧಿಕಾರಕ್ಕಾಗಿ ಏನುಬೇಕಾದರೂ ಮಾಡಲಾರರು. ಅಧಿಕಾರದ ಲಾಲಸೆ ಹೊಂದಿರುವ ಹಿಂದುತ್ವವಾದಿಗಳು 2014ರಿಂದಲೂ ದೇಶದಲ್ಲಿ ಅಧಿಕಾರದಲ್ಲಿದ್ದಾರೆ. […]
ಮತಾಂತರ ಸಮಾಜಕ್ಕೆ ಮಾರಕ: ಅದನ್ನು ನಿಷೇಧಿಸಲು ಸರ್ಕಾರದಿಂದ ಪ್ರಯತ್ನ; ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಮತಾಂತರ ನಿಷೇಧ ಕಾಯ್ದೆಯನ್ನು ಅಧಿವೇಶನದಲ್ಲಿ ಮಂಡಿಸುತ್ತೇವೆ. ಮತಾಂತರ ಸಮಾಜಕ್ಕೆ ಒಳ್ಳೆಯದಲ್ಲ, ಮಾರಕ. ಕ್ರೈಸ್ತ, ಮುಸ್ಲಿಂ, ಬೌದ್ಧ, ಸಿಖ್ ಧರ್ಮದವರಿಗೆ ಈ ಬಗ್ಗೆ ಆತಂಕ ಬೇಡ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರೈಸ್ತ, ಮುಸಲ್ಮಾನ, ಸಿಖ್, ಬೌಧ್ಧ, ಹಿಂದೂ ಹೀಗೆ ಈ ಎಲ್ಲಾ ಧರ್ಮಗಳು ಸಂವಿಧಾನಾತ್ಮಕವಾಗಿ ಗುರುತು ಪಡೆದಿರುವ ಧರ್ಮಗಳು. ಅವುಗಳಿಗೆ, ಆ ಜನಾಂಗದವರಿಗೆ ಯಾವುದೇ ಆತಂಕ ಬೇಡ, ಅವರ ಪ್ರಾರ್ಥನೆ, ಅವರ ಧರ್ಮ, ನಂಬಿಕೆಗಳಿಗೆ ಯಾವುದೇ ಅಡ್ಡಿಯಾಗುವುದಿಲ್ಲ. […]