ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಗೆ ₹ 2.52 ಕೋಟಿ ನಿವ್ವಳ ಲಾಭ: ಯಶ್‌ಪಾಲ್ ಸುವರ್ಣ
ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ 2020-21ನೇ ಸಾಲಿನಲ್ಲಿ 158 ಕೋಟಿ ವ್ಯವಹಾರದ ಮೂಲಕ ₹2.52 ಕೋಟಿ ನಿವ್ವಳ ಲಾಭ ಗಳಿಸಿದೆ. ಕರ್ನಾಟಕ ರಾಜ್ಯ ಸರಕಾರದ ಮೀನುಗಾರಿಕ ಇಲಾಖೆ, ಸಂಸ್ಥೆಯ ಸದಸ್ಯ ಸಹಕಾರಿ ಸಂಸ್ಥೆಗಳು ವೈಯಕ್ತಿಕ ಸದಸ್ಯರು ಹಾಗೂ ಸಮಸ್ತ ಮೀನುಗಾರರ ಸಹಕಾರದಿಂದ ಮೀನು ಮಾರಾಟ, ಡೀಸಿಲ್ ಮಾರಾಟ, ಆರ್ಥಿಕ ಸೇವೆ, ಮೋಬಿಲ್ ಎಣ್ಣೆ ಮಾರಾಟ, ಸೀಮೆಎಣ್ಣೆ ಹಾಗೂ ಮೀನುಗಾರಿಕಾ ಸಲಕರಣೆಗಳ ಮಾರಾಟ ಮತ್ತು ಮಂಜುಗಡ್ಡೆ ವ್ಯವಹಾರಗಳಿಂದ 158 ಕೋಟಿ ವ್ಯವಹಾರ ಮಾಡಿ […]
ಕಾಪು: ಅಂಗಡಿಗೆ ನುಗ್ಗಿದ ಕಾರು; ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ.!
ಕಾಪು: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಅಂಗಡಿಗೆ ನುಗ್ಗಿದ ಘಟನೆ ಕಾಪು ಮಲ್ಲಾರು ಸ್ವಾಗತ ನಗರದ ಬಳಿ ಇಂದು ನಡೆದಿದೆ. ಕಾರು ನುಗ್ಗಿದ ರಭಸಕ್ಕೆ ಅಂಗಡಿಯ ಒಂದು ಪಾರ್ಶ್ವದ ಗೋಡೆ ನೆಲಕ್ಕುರುಳಿದ್ದು, ಅಂಗಡಿಯಲ್ಲಿದ್ದ ಮಾಲೀಕ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಕಾರು ಕುಂದಾಪುರ ವ್ಯಕ್ತಿಗೆ ಸೇರಿದ್ದು, ಅವರು ಶಿರ್ವ ಕಡೆಯಿಂದ ಕಾಪುವಿನತ್ತ ತೆರಳುತ್ತಿದ್ದರು. ಈ ವೇಳೆ ಮಲ್ಲಾರು ಸ್ವಾಗತ ನಗರದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಅಂಗಡಿಗೆ ನುಗ್ಗಿದೆ.
ಬ್ಯಾಂಕ್ ಆಫ್ ಬರೋಡಾ: ಪ್ರಾದೇಶಿಕ ಮತ್ತು ಶಾಖಾ ಕಚೇರಿಗಳಲ್ಲಿ ಖಾಲಿ ಇರುವ ವಿಶೇಷ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ದೇಶದಾದ್ಯಂತ ಬ್ಯಾಂಕ್ ಆಫ್ ಬರೋಡಾ ವಿವಿಧ ಪ್ರಾದೇಶಿಕ ಮತ್ತು ಶಾಖಾ ಕಚೇರಿಗಳಲ್ಲಿ ಖಾಲಿ ಇರುವ ವಿಶೇಷ ಅಧಿಕಾರಿ ( ರಿಲೇಷನ್‌ಶಿಪ್ ಮ್ಯಾನೇಜರ್ ಮತ್ತು ಇ–ಮೇಲ್ ರಿಲೇಷನ್‌ಶಿಪ್ ಮ್ಯಾನೇಜರ್) ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಸಂಖ್ಯೆ: 376 ವಿದ್ಯಾರ್ಹತೆ: ಹುದ್ದೆಗಳಿಗೆ ಸಂಬಂಧಿಸಿದಂತೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ/ಸ್ನಾತಕೋತ್ತರ ಪದವಿ ಪಡೆದಿರಬೇಕು. ವೇತನ ಶ್ರೇಣಿ: ಇತರೆ ಭತ್ಯೆಗಳು ಸೇರಿದಂತೆ ಮಾಸಿಕ ₹ 36,700 ಮೂಲ ವೇತನ ಪಡೆಯಬಹುದು. ವಯಸ್ಸು: ಕನಿಷ್ಠ 18 ವರ್ಷಗಳು, […]
ಶಾಲಾ ಮಕ್ಕಳಿಗೆ ಉಚಿತ ಅಪಘಾತ ವಿಮೆ ವಿತರಣೆ
ಉಡುಪಿ: ಕಡಿಯಾಳಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ ಸಂಯೋಜನೆಯಲ್ಲಿ ಜೆಸಿಐ ಉಡುಪಿ ಸಿಟಿ ಸಹಭಾಗಿತ್ವದಲ್ಲಿ ಶಾಲಾ ಮಕ್ಕಳಿಗೆ ಉಚಿತ ಅಪಘಾತ ವಿಮೆ ವಿತರಣಾ ಕಾರ್ಯಕ್ರಮ ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಶಾಲೆಯ ಮುಖ್ಯೋಪಾಧ್ಯಾಯ ವಿ.ಜಿ. ಬೈಕಾಡಿ (ವಿಠ್ಠಲ ಗಿರಿ ರಾವ್) ನನ್ನ ನಿವೃತ್ತಿ ಸಮಯದಲ್ಲಿ ವಿಮಾ ರಕ್ಷಣೆ ಒದಗಿಸುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯ ನಿವೃತ್ತ ಶಿಕ್ಷಕ ಲಕ್ಷ್ಮೀನಾರಾಯಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಶಾಲೆ 149 ವರ್ಷದ […]
ಕೊಡವೂರು: ಕನಕ ಜಯಂತಿ ಆಚರಣೆ; ದಿವ್ಯಾಂಗ ರಕ್ಷಣಾ ಸಮಿತಿ ಅಂಗವಿಕಲರಿಗೆ ದಿನಸಿ ಕಿಟ್ ವಿತರಣೆ
ಕೊಡವೂರು: ದಿವ್ಯಾಂಗ ರಕ್ಷಣಾ ಸಮಿತಿ ವತಿಯಿಂದ ಕೊಡವೂರು ವಾರ್ಡ್ ನಲ್ಲಿ ಕನಕ ಜಯಂತಿ ಆಚರಿಸಲಾಯಿತು. ಸೇವಾ ಭಾರತಿ ಕನ್ಯಾಡಿ (ಬೆನ್ನು ಮೂಳೆ ಮುರಿತಕ್ಕೆ ಒಳಗಾದವರ ಪುನಶ್ಚೇತನ ಕೇಂದ್ರ) ಇದರ ಅಧ್ಯಕ್ಷ ವಿನಾಯಕ ರಾವ್ ಮಾತನಾಡಿ, ಕೊಡವೂರು ವಾರ್ಡ್ ಸರಕಾರದ ಅನುದಾನ ಹಾಗೂ ಸಂಘಟನೆಗಳ ಸಹಕಾರದೊಂದಿಗೆ 28,92,515 ರೂ. ಸೇವಾ ಕಾರ್ಯಗಳನ್ನು ಮಾಡಿರುವುದು ಶ್ಲಾಘನೀಯ ಎಂದರು. ವಾರ್ಡ್ ನ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕೆಂಬ ಉದ್ದೇಶದೊಂದಿಗೆ ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ ರಚಿಸಿ ಕೃಷಿ, ಅಂಗವಿಕಲರಿಗೆ, ನಿರುದ್ಯೋಗಿಗಳಿಗೆ ಸಹಾಯ ಮಾಡುವುದರೊಂದಿಗೆ […]