ಕೊಡವೂರು: ಕನಕ ಜಯಂತಿ‌ ಆಚರಣೆ; ದಿವ್ಯಾಂಗ ರಕ್ಷಣಾ ಸಮಿತಿ ಅಂಗವಿಕಲರಿಗೆ ದಿನಸಿ ಕಿಟ್ ವಿತರಣೆ

ಕೊಡವೂರು: ದಿವ್ಯಾಂಗ ರಕ್ಷಣಾ ಸಮಿತಿ ವತಿಯಿಂದ ಕೊಡವೂರು ವಾರ್ಡ್ ನಲ್ಲಿ ಕನಕ ಜಯಂತಿ ಆಚರಿಸಲಾಯಿತು.

ಸೇವಾ ಭಾರತಿ ಕನ್ಯಾಡಿ (ಬೆನ್ನು ಮೂಳೆ ಮುರಿತಕ್ಕೆ ಒಳಗಾದವರ ಪುನಶ್ಚೇತನ ಕೇಂದ್ರ) ಇದರ ಅಧ್ಯಕ್ಷ ವಿನಾಯಕ ರಾವ್ ಮಾತನಾಡಿ, ಕೊಡವೂರು ವಾರ್ಡ್ ಸರಕಾರದ ಅನುದಾನ ಹಾಗೂ ಸಂಘಟನೆಗಳ ಸಹಕಾರದೊಂದಿಗೆ 28,92,515 ರೂ. ಸೇವಾ ಕಾರ್ಯಗಳನ್ನು ಮಾಡಿರುವುದು ಶ್ಲಾಘನೀಯ ಎಂದರು.

ವಾರ್ಡ್ ನ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕೆಂಬ ಉದ್ದೇಶದೊಂದಿಗೆ ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ ರಚಿಸಿ ಕೃಷಿ, ಅಂಗವಿಕಲರಿಗೆ, ನಿರುದ್ಯೋಗಿಗಳಿಗೆ ಸಹಾಯ ಮಾಡುವುದರೊಂದಿಗೆ ತ್ಯಾಜ್ಯಮುಕ್ತ , ವ್ಯಸನಮುಕ್ತ, ರಾಸಾಯನಿಕ ಮುಕ್ತ ಗ್ರಾಮ ಮಾಡಲು ಕಾರ್ಯಕರ್ತರು ಶ್ರಮಿಸುತ್ತಿರುವುದು ಮಾದರಿ ಕಾರ್ಯವಾಗಿದೆ ಎಂದು ಅಭಿನಂದಿಸಿದರು.

ವಾರ್ಡ್ ಸದಸ್ಯರ ಜತೆ ಪಕ್ಷಭೇದ ಮರೆತು ಊರಿನ ಎಲ್ಲರೂ ಕೈಜೋಡಿಸಿರುವುದು ಗ್ರಾಮದ ಅಭ್ಯುದಯ ಸಹಕಾರಿಯಾಗಿದೆ ಎಂದು ತಿಳಿಸಿದರು.
ಯಾವುದೇ ಮನೆಯಲ್ಲಿ ಜಗಳವಾದರೆ ಪೊಲೀಸ್ ಠಾಣೆಗೆ ಹೋಗುವ ಮುಂಚೆ ಊರಿನ ನ್ಯಾಯ ಸಮಿತಿಯ ಹಿರಿಯರ ಮುಖಾಂತರ ಸಂಧಾನ ಕಾರ್ಯ ನಡೆಯುತ್ತದೆ. ಇದು ಊರಿನ ಎಲ್ಲಾ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯ್ ಕೊಡವೂರುನಂತಹ ದೇಶ ಧರ್ಮದ ಚಿಂತಕ, ಲಂಚ ಮುಕ್ತವಾದ ನಿಸ್ವಾರ್ಥ ಹೋರಾಟಗಾರ, ಅತ್ಯುತ್ತಮ ಸಂಘಟಕ ಗುಣವನ್ನು ಎಲ್ಲಾ ಜನಪ್ರತಿನಿಧಿಗಳಿಗೆ ಇರಲಿ ಎಂದು ನಾನು ಆಶಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಜಯ್ ಕೊಡವೂರು ದಿವ್ಯಾಂಗ ರಕ್ಷಣಾ ಸಮಿತಿ ವತಿಯಿಂದ ದುರ್ಬಲರಿಗೆ, ಅನಾಥರಿಗೆ, ದಿವ್ಯಾಂಗರಿಗೆ, ಬೆನ್ನು ಮೂಳೆ ಮುರಿತಕ್ಕೆ ಒಳಗಾದವರಿಗೆ ಇದುವರೆಗೆ ಬೇಕಾಗುವ ಎಲ್ಲಾ ಅವಶ್ಯಕತೆಗಳನ್ನು ಪೂರೈಸಲಾಗಿದೆ. ಮನೆ ಕಟ್ಟಲು ಸಿಮೆಂಟ್,ಸ್ವಂತ ಉದ್ಯೋಗಕ್ಕಾಗಿ, ಟೈಲರಿಂಗ್ ಮಷೀನ್, ಬತ್ತಿ ಕಟ್ಟುವ ಮಷೀನ್, ದುಡಿಯಲು ಸಾದ್ಯವಿಲ್ಲದಿರುವ ದಿವ್ಯಾಂಗರಿಗೆ ಪ್ರತೀ ತಿಂಗಳು ಅಕ್ಕಿ ವಿತರಣೆ, ಇದಕ್ಕೆ ಊರಿನ ದಾನಿಗಳು ಸಹಕಾರ ನೀಡಿದ್ದಾರೆ.

ಇದೇ ರೀತಿ ಮುಂದಿನ ದಿನಗಳಲ್ಲಿ ನಮ್ಮ ವಾರ್ಡಿನ ಎಲ್ಲರಿಗೂ ಆರೋಗ್ಯದ ದೃಷ್ಟಿಯಿಂದ ಮನೆ ಮನೆಗೆ ತೆರಳಿ ಗುಜರಿ ಸಾಮಗ್ರಿಗಳನ್ನು ದಿವ್ಯಾಂಗ ರಕ್ಷಣಾ ಸಮಿತಿ ಅದನ್ನು ಸ್ವೀಕರಿಸಲಾಗುವುದು.
ನಿಮ್ಮ ಮನೆಯಲ್ಲಿರುವ ಹಳೆಯ ಪ್ಲಾಸ್ಟಿಕ್ ,ಕಬ್ಬಿಣ ,ಪೇಪರ್ ಗಳಿದ್ದರೆ ರಕ್ಷಣಾ ಸಮಿತಿಯ ಪ್ರಮುಖರಿಗೆ ತಿಳಿಸಿದ್ದಲ್ಲಿ ಗುಜರಿ ಸಾಮಗ್ರಿಗಳನ್ನು ಪಡೆದುಕೊಂಡು, ಅದನ್ನು ಮಾರಾಟ ಮಾಡಿ ಬಂದ ಹಣದಲ್ಲಿ ದಿವ್ಯಾಂಗರು ಊರಿನ ದುರ್ಬಲರ ಸೇವೆಯನ್ನು ಮಾಡಲು ಸಿದ್ಧವೆಂದು ತೊಡೆತಟ್ಟಿರುವುದು ಸಂತೋಷದ ವಿಷಯ ಈ ನಿಟ್ಟಿನಲ್ಲಿ ಗ್ರಾಮಸ್ಥರು, ಉಡುಪಿಯ ನಾಗರಿಕರು ಸಹಕರಿಸಬೇಕು ವಿಜಯ್ ಕೊಡವೂರು ನಗರಸಭಾ ಸದಸ್ಯರು ವಿನಂತಿಸಿದರು.

ಕನಕ ಜಯಂತಿಯ ಸಂದರ್ಭದಲ್ಲಿ ಧರ್ಮ ರಕ್ಷಣೆಯ ಕಾರ್ಯವನ್ನು ಕನಕರು ಶ್ರೀ ಕೃಷ್ಣನನ್ನು ಭಕ್ತಿಯಿಂದ ತಿರುಗಿಸುವ ಕೆಲಸವನ್ನು ಮಾಡಿದ್ದಾರೆ ಅದೇ ಆದರ್ಶವನ್ನು ನಾವು ಇಟ್ಟುಕೊಳ್ಳಬೇಕು ಭಕ್ತಿಯಿಂದ ನಾವು ದೇವರನ್ನು ಮೆಚ್ಚಿಸಬೇಕು ನಮ್ಮಲ್ಲಿರುವಂತಹ ಶ್ರೀಮಂತಿಕೆಯಿಂದ ಅಲ್ಲ ಅನ್ನೋದು ನಮಗೆ ಸ್ಪಷ್ಟತೆ ಇರಬೇಕು ಆದ್ದರಿಂದ ನಾವು ನಮ್ಮ ಶ್ರದ್ಧಾ ಕೇಂದ್ರಗಳಲ್ಲಿ ಭಕ್ತಿಯಿಂದಲೇ ದೇವರನ್ನು ಮೆಚ್ಚಿಸುವಂಥಾ ಕಾರ್ಯ ಆಗಬೇಕು. ಭಜನೆಯ ಮುಖಾಂತರ ನಾವು ದೈವ-ದೇವರುಗಳ ತಿಳುವಳಿಕೆಯನ್ನು ಮಕ್ಕಳಿಗೆ ತಿಳಿಸುವಂತಹ ಕಾರ್ಯ ಆಗಬೇಕಾದರೆ ನಾವು ಭಜನೆಯನ್ನು ಕೊಡವೂರು ಗ್ರಾಮದಲ್ಲಿ ಎಲ್ಲಾ ಮನೆಯಲ್ಲೂ ಭಜನೆ ಮಾಡಿಸುವಂತಹ ಸಂಘಟನೆಯನ್ನು ನಾವು ಮುಂದಿನ ದಿನಗಳಲ್ಲಿ ಮಾಡುತ್ತೇವೆ ಎಂದು ವಿಜಯ ಕೊಡವೂರು ನುಡಿದರು.

ಏಕನಾಥ ಮಲ್ಪೆ ಕೊಳ ಇವರ ಮಗಳ ಹುಟ್ಟುಹಬ್ಬದ ನಿಮಿತ್ತ ಅಕ್ಕಿ ವಿತರಣೆಯನ್ನು ಮಾಡಿ,ಕೊಡವೂರು ವಾರ್ಡ್ ನಲ್ಲಿ ಇಂತಹ ಒಂದು ಒಳ್ಳೆಯ ಕೆಲಸ ನಡೆಯುತ್ತಾ ಇದೆ,ತಾವು ಸಂತೋಷ ಪಡುವ ದಿನದ ಜೊತೆಯಲ್ಲಿ ಇಂತಹ ಕಷ್ಟದಲ್ಲಿ ಇರುವ ದುಡಿಯಲು ಸಾಧ್ಯವಿಲ್ಲದವರ ಕಣ್ಣಿರುವ ಒರೆಸುವ ಕೆಲಸಕ್ಕೆ ನನಗೆ ಅವಕಾಶವನ್ನು ನೀಡಿದ ಕೊಡವೂರು ದಿವ್ಯಾಂಗ ರಕ್ಷಣಾ ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ ಮತ್ತು ವಿಜಯ್ ಕೊಡವೂರು ಇವರಿಗೆ ಧನ್ಯವಾದ ಸಲ್ಲಿಸುತ್ತೇವೆ, ಮತ್ತು ಪ್ರತೀ 3 ತಿಂಗಳಿಗೊಮ್ಮೆ ತಾನು ಈ ಸೇವೆಯನ್ನು ಮಾಡಲು ಸಿದ್ದನಿದ್ದೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿನಾಯಕ್ ರಾವ್ ಸೇವಾಭಾರತಿ ಕನ್ಯಾಡಿ ಕಾರ್ಯದರ್ಶಿಯಾಗಿರುವ ಸ್ವರ್ಣಲತಾ,
ಸೇವಾ ಭಾರತೀಯ ಚರಣ್, ದಿವ್ಯಾಂಗ ರಕ್ಷಣಾ ಸಮಿತಿಯ ಅಧ್ಯಕ್ಷರು ಹರೀಶ್ ಕೊಪ್ಪಳ್ ತೋಟ, ವಿಷ್ಣು ಪ್ರಸಾದ್,ರವಿರಾಜ್,ಗಿರೀಶ್. ಇನ್ನಿತರರು ಉಪಸ್ಥಿತರಿದ್ದರು.