ಈ ವಸ್ತುಗಳನ್ನು ಆಹಾರವಾಗಿ ಬಳಸಿದರೆ ಕಾಯಿಲೆ ನಿಮ್ಮ ಹತ್ರ ಸುಳಿಯೋದಿಲ್ಲ!ರಾಷ್ಟ್ರೀಯ ಆಯುರ್ವೇದ ದಿನದ ವಿಶೇಷ ಟಿಪ್ಸ್

ಇಂದು  ಆಯುರ್ವೇದ ದಿನಾಚರಣೆ. ಆಯುರ್ವೇದದ ಮಹತ್ವವನ್ನು ಜಗತ್ತಿಗೆ ಸಾರಿ ಹೇಳುವ ದಿನವಿದು. ಭಾರತದ ಪಾಲಿಗೆ ಆಯುರ್ವೇದ ಎನ್ನುವುದು ನಿಜಕ್ಕೂ ಒಂದು ಹೆಮ್ಮೆಯ ಸಂಗತಿ. ಏಕೆಂದರೆ ಆಯುರ್ವೇದದ ಮೂಲವೇ ಭಾರತ. ಎಲ್ಲಕ್ಕಿಂತ ಮುಖ್ಯವಾಗಿ ಇದು ಭಾರತೀಯ ವೈದ್ಯ ಪದ್ದತಿ. ಇದರ ದೇವತೆ ಧನ್ವಂತರಿ. ದೇವಾನುದೇವತೆಗಳ ವೈದ್ಯ ಎಂದು ಧನ್ವಂತರಿಯನ್ನು ಗುರುತಿಸಲಾಗಿದೆ. ಇಂತಹ ಮಹತ್ವವನ್ನು ಪಡೆದ ಆಯುರ್ವೇದಕ್ಕೆ ಒಂದು ಕಾಲದಲ್ಲಿ ನಮ್ಮಲ್ಲಿ ಮಾತ್ರ ವಿಶಿಷ್ಠ ಸ್ಥಾನವಿತ್ತು. ಆದರೆ, ಅದು ಈಗ ಲೋಕಕ್ಕೆ ಬೆಳಕನ್ನು ನೀಡುವ ನೆಮ್ಮದಿಯನ್ನು ಕಂಡುಕೊಳ್ಳುವ ಹೊಸ ದಾರಿಯಾಗಿದೆ. […]

ಉಡುಪಿ: ಮಹಾಲಕ್ಷ್ಮೀ ಬ್ಯಾಂಕಿನ 43ನೇ ವಾರ್ಷಿಕ ಮಹಾಸಭೆ

ಉಡುಪಿ: ಮಹಾಲಕ್ಷ್ಮೀ ಕೋ ಓಪರೇಟಿವ್ ಬ್ಯಾಂಕ್ ಲಿ., ಉಡುಪಿ ಇದರ 2020-21ರ ಆರ್ಥಿಕ ವರ್ಷದ 43ನೇ ವಾರ್ಷಿಕ ಮಹಾಸಭೆಯು ಇಂದು ಬ್ಯಾಂಕಿನ ಅಧ್ಯಕ್ಷ ಯಶ್‌ಪಾಲ್ ಎ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ಉಡುಪಿ ಪುರಭವನದಲ್ಲಿ ನಡೆಯಿತು. ಬ್ಯಾಂಕಿನ ಅಧ್ಯಕ್ಷ ಯಶ್‌ಪಾಲ್ ಎ ಸುವರ್ಣ ಮಾತನಾಡಿ, ಮಹಾಲಕ್ಷ್ಮೀ ಕೋ ಓಪರೇಟಿವ್ ಬ್ಯಾಂಕ್ ನಿರಂತರ 12 ವರ್ಷಗಳಿಂದ ಶೇ. 18 ಡಿವಿಡೆಂಡ್ ಘೋಷಣೆಯ ಮೂಲಕ ಕರಾವಳಿ ಭಾಗದ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬ್ಯಾಂಕು ಎಲ್ಲಾ ಕ್ಷೇತ್ರಗಳಲ್ಲೂ ಗಣನೀಯ […]

ಪಡುಬಿದ್ರಿ: ಸ್ಕೂಟಿಗೆ ಲಾರಿ ಡಿಕ್ಕಿ; ಸವಾರ ಮೃತ್ಯು

ಪಡುಬಿದ್ರಿ: ಸ್ಕೂಟಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಲಾರಿಯ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಿನ್ನೆ ರಾತ್ರಿ ಕಾಪು ಉಚ್ಚಿಲ ಪೇಟೆಯ ಪಣಿಯೂರು ರಸ್ತೆಯ ಡಿವೈಡರ್ ಬಳಿ ರಾ.ಹೆ. 66ರಲ್ಲಿ ಸಂಭವಿಸಿದೆ. ಮೃತರನ್ನು ಶ್ರೀಧರ್ ಆಚಾರ್ಯ ಎಂದು ಗುರುತಿಸಲಾಗಿದೆ. ಇವರು ಪಡುಬಿದ್ರಿಯಿಂದ ಉಚ್ಚಿಲ ಕಡೆಗೆ ಎನ್.ಹೆಚ್-66 ಏಕಮುಖ ಸಂಚಾರ ರಸ್ತೆಯಲ್ಲಿ ಬಂದು ಉಚ್ಚಿಲ ಪೇಟೆಯಿಂದ ಪಣಿಯೂರು ರಸ್ತೆಗೆ ಹೋಗಲು ಡಿವೈಡರ್ ಹತ್ತಿರ ಬಂದು ನಿಲ್ಲಿಸಿ. ಅಲ್ಲಿಂದ ಉಡುಪಿಯಿಂದ- ಮಂಗಳೂರು ಕಡೆಗೆ ಹೋಗುವ ಏಕಮುಖ […]

ಮಣಿಪಾಲದ ಶಾರದಾ ಟೀಚರ್ಸ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ನಲ್ಲಿ ಶಿಕ್ಷಕಿಯರಿಗೆ “ಬ್ಯಾಕ್ ಟು ಸ್ಕೂಲ್” ಕಾರ್ಯಗಾರ

ಮಣಿಪಾಲ: ಕೋವಿಡ್ ನಂತರ ವಿದ್ಯಾರ್ಥಿಗಳು ತಮ್ಮ ತರಗತಿಯ ಪ್ರಾರಂಭೋತ್ಸವ ಕಾಣುತ್ತಿರುವ  ಈ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಎದುರಿಸುವ ಸಮಸ್ಯೆ ಹಾಗೂ ಪರಿಹಾರಕ್ಕೆ “ಬ್ಯಾಕ್ ಟು ಸ್ಕೂಲ್” ಎಂಬ ವಿಶೇಷ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಕಛೇರಿ ಬಳಿ, ಕ್ರಿಸ್ಟಲ್ ಬಿಜ್ಹ್ ಹಬ್‌ನ ಮೊದಲನೆಯ ಮಹಡಿಯಲ್ಲಿರುವ ಶ್ರೀ ಶಾರದಾ ಟೀಚರ್ಸ್  ಟ್ರೈನಿಂಗ್ ಇನ್‌ಸ್ಟಿಟ್ಯೂಟ್, ಮಣಿಪಾಲದಲ್ಲಿ ನಡೆಯಿತು. ಸುಮಾರು ಮೂವತ್ತಾರು ವರ್ಷಗಳ ವಿದ್ಯಾಭ್ಯಾಸ ಕ್ಷೇತ್ರದ ಅನುಭವ ಹೊಂದಿರುವ ದೀಪಾ ಭಂಡಾರಿ, ಸಂತಮೇರಿ ಶಾಲೆ ಕನ್ನರ್ಪಾಡಿಯ ನಿವೃತ್ತ ಉಪ ಮುಖ್ಯೋಪಾಧ್ಯಾಯಿನಿ ಇವರು ಈ […]