ಉಡುಪಿ: ಇ-ಸ್ಯಾಂಡ್ ಆಪ್ ನಲ್ಲಿ ಮರಳು ಲಭ್ಯ
ಉಡುಪಿ: ಉಡುಪಿ ಜಿಲ್ಲೆಯ ಬ್ರಹ್ಮಾವರ ಮತ್ತು ಉಡುಪಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿನ ಸ್ವರ್ಣಾ ಮತ್ತು ಸೀತಾ ನದಿ ಪಾತ್ರಗಳಲ್ಲಿ ಮರಳು ದಿಬ್ಬ ತೆರವುಗೊಳಿಸುವ ಕಾರ್ಯವು ಪ್ರಗತಿಯಲ್ಲಿದ್ದು, ಸದರಿ ಮರಳನ್ನು ಸಾರ್ವಜನಿಕರಿಗೆ, ಅಭಿವೃದ್ಧಿ ಕಾಮಗಾರಿಗಳಿಗೆ UDUPI E-SAND APP ನ ಮೂಲಕ ಪೂರೈಸಲು ತೀರ್ಮಾನಿಸಲಾಗಿರುತ್ತದೆ. ಅದರಂತೆ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿನ ಸಾರ್ವಜನಿಕರಿಗೆ/ ಅಭಿವೃದ್ಧಿ ಕಾಮಗಾರಿಗಳಿಗೆ ಮರಳನ್ನು ವಿತರಿಸುವ ಕಾರ್ಯ ಪ್ರಾರಂಭಗೊಂಡಿದ್ದು, ಮರಳು ಅವಶ್ಯಕತೆ ಇರುವವರು UDUPI E-SAND APP ಮುಖಾಂತರ ಪಡೆಯಬಹುದಾಗಿದ್ದು, ಯಾವುದೇ ಕಾರಣಕ್ಕೂ ಹೊರ ಜಿಲ್ಲೆಗೆ ಮರಳು ಪೂರೈಸಲು […]
ಉಡುಪಿ: ಐದು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಅಪರಾಧಿಗೆ 10 ವರ್ಷ ಶಿಕ್ಷೆ
ಉಡುಪಿ: ನೆರೆಮನೆಗೆ ಆಟವಾಡಲು ಹೋಗಿದ್ದ 5 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿ ಮೇಲಿನ ದೋಷಾರೋಪಣೆಗಳು ಸಾಭೀತಾದ ಹಿನ್ನೆಲೆ ಆತ ಅಪರಾಧಿ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎರ್ಮಾಳ್ ಕಲ್ಪನಾ ತೀರ್ಪು ನೀಡಿದ್ದಾರೆ. ವೆಂಕಟೇಶ (30) ಎಂಬಾತ ಶಿಕ್ಷೆಗೊಳಗಾದ ಅಪರಾಧಿ. ಉಡುಪಿಯ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಅವರು ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದರು. ಘಟನೆ ವಿವರ: ಕಾರ್ಕಳ ಗ್ರಾಮಾಂತರ […]
ಉಡುಪಿ: “ಮೋರ್ ಫ್ಯಾಶನ್” ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಮಾರಾಟ; ಪ್ರತಿ ಖರೀದಿಗೆ ಬಂಪರ್ ಗಿಫ್ಟ್..!!
ಉಡುಪಿ: ದೀಪಾವಳಿ ಹಬ್ಬಕ್ಕೆ ಬಟ್ಟೆ ಖರೀದಿಸುವ ಪ್ಲ್ಯಾನ್ ಹಾಕಿಕೊಂಡಿದ್ದೀರಾ. ಹಾಗಾದ್ರೆ ನಿಮ್ಮ ಆಯ್ಕೆ ಉಡುಪಿಯ “ಮೋರ್ ಫ್ಯಾಶನ್” ಆಗಿರಲಿ. ಇಲ್ಲಿ ನೀವು ಬಟ್ಟೆ ಖರೀದಿಯೊಂದಿಗೆ ಬಂಪರ್ ಕೊಡುಗೆಗಳನ್ನು ತಮ್ಮದಾಗಿಸಿಕೊಳ್ಳಿ. ಹೋಟೆಲ್ ಉಡುಪಿ ರೆಸಿಡೆನ್ಸಿ ಹತ್ತಿರ, ರೋಹಿಣಿ ಪಾಂಡುರಂಗ ಆರ್ಕೇಡ್, ಉಡುಪಿ ಇಲ್ಲಿರುವ ಮೋರ್ ಫ್ಯಾಶನ್ ಬಟ್ಟೆ ಮಳಿಗೆಯಲ್ಲಿ ನವೆಂಬರ್ 5 ರವರೆಗೆ ಉಚಿತ ಉಡುಗೊರೆಗಳೊಂದಿಗೆ ವಿಶೇಷ ಮಾರಾಟ ನಡೆಯುತ್ತಿದೆ. ಪ್ರತಿ ಖರೀದಿಗೆ ವಿಶೇಷ ಉಡುಗೊರೆಗಳನ್ನು ಗ್ರಾಹಕರು ಪಡೆಯಬಹುದಾಗಿದೆ. ಮಳಿಗೆ ವಿಶಾಲವಾದ ವಾಹನ ಪಾರ್ಕಿಂಗ್ ವ್ಯವಸ್ಥೆ ಹೊಂದಿದೆ. ನವ […]
ಬ್ಯಾಡ್ಮಿಂಟನ್: ಸಾಣೂರಿನ ಆಯುಷ್ ಶೆಟ್ಟಿಗೆ ಚಿನ್ನದ ಪದಕ
ಉಡುಪಿ: ಡೆನ್ಮಾರ್ಕ್ ನಲ್ಲಿ ಅ.24 ರಂದು ನಡೆದ ಅಂಡರ್ 19 ಜೂನಿಯರ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ವಿಭಾಗದಲ್ಲಿ ಕಾರ್ಕಳ ತಾಲೂಕಿನ ಸಾಣೂರಿನ ಆಯುಷ್ ಶೆಟ್ಟಿ ಅವರು ಚಿನ್ನದ ಪದಕ ಗಳಿಸಿದ್ದಾರೆ. ಇವರು ರಾಮ್ ಪ್ರಕಾಶ್ ಶೆಟ್ಟಿ ಮತ್ತು ಶಾಲ್ಮಿಲಿ ಶೆಟ್ಟಿ ದಂಪತಿಯ ಪುತ್ರ. ಆಯುಷ್ ಶೆಟ್ಟಿ ಬ್ಯಾಡ್ಮಿಂಟನ್ ನಲ್ಲಿ ಅಪ್ರತಿಮ ಸಾಧನೆ ಮಾಡುತ್ತಿರುವ ಪ್ರತಿಭಾನ್ವಿತ ಬ್ಯಾಡ್ಮಿಂಟನ್ ಪಟು. ಬ್ಯಾಡ್ಮಿಂಟನ್ ನಲ್ಲಿ ಸತತ 13 ಬಾರಿ ಚಾಂಪಿಯನ್ ಆಗಿರುವ ಆಯುಷ್, ರಾಜ್ಯದ ಅಗ್ರಮಾನ್ಯ ಆಟಗಾರರಾಗಿದ್ದಾರೆ. ಇವರು ಅಂಡರ್ 13 ವಿಭಾಗದಲ್ಲಿ […]
ವಸುಧೈವ ಕುಟುಂಬಕಂ’ ನುಡಿಯ ನಿಜವಾದ ಅರ್ಥ ಅರಿತಾಗ: ನಟ ಅನಿರುದ್ಧ್ ಬರೆದ ಬರಹ
ಜನಪ್ರಿಯ ಟಿವಿ ಧಾರಾವಾಹಿ ‘ದಿ ಟ್ವೈಲೈಟ್ ಝೋನ್’ನ ಒಂದು ಕಂತು ‘ಎ ಕೈಂಡ್ ಆಫ್ ಎ ಸ್ಟಾಪ್ ವಾಚ್’ದಲ್ಲಿ (೧೯೬೩). ಒಬ್ಬಾತನಿಗೆ ಸ್ಟಾಪ್ ವಾಚೊಂದನ್ನು ಉಡುಗೊರೆಯಾಗಿ ಕೊಟ್ಟಿರುತ್ತದೆ. ತನ್ನೊಡೆಯನ ಹೊರತಾಗಿ ಬೇರೆಲ್ಲದಕ್ಕೂ ಮತ್ತು ಬೇರೆಲ್ಲರಿಗೂ ಸಮಯವನ್ನೇ ನಿಲ್ಲಿಸಬಲ್ಲದು ಈ ಸ್ಟಾಪ್ ವಾಚ್. ಆ ಮನುಷ್ಯ ಈ ಸ್ಟಾಪ್ ವಾಚನ್ನು ಬ್ಯಾಂಕ್ ದರೋಡೆ ಮಾಡಲು ಉಪಯೋಗಿಸುತ್ತಾನೆ. ಕಂತೆ, ಕಂತೆ ನೋಟುಗಳನ್ನು ಒಯ್ಯುತ್ತಿರುವಾಗ ಆಕಸ್ಮಿಕವಾಗಿ ಸ್ಟಾಪ್ ವಾಚನ್ನು ಕೆಳಗೆ ಬೀಳಿಸಿ, ಒಡೆದು ಹಾಕುತ್ತಾನೆ. ಒಮ್ಮೆಲೇ, ಇಡೀ ಜಗತ್ತಿನ ಜನರು ಮತ್ತು […]