ಕಾರ್ಕಳ: ನೀರಿನ ಸುಳಿಗೆ ಸಿಲುಕಿ ಯುವಕ ಮೃತ್ಯು

ಕಾರ್ಕಳ: ನಡೆದುಕೊಂಡು ಹೋಗುವಾಗ ವೇಳೆ ಅಕಸ್ಮಾತ್ ಆಗಿ ಹಳ್ಳಕ್ಕೆ ಜಾರಿ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ನಂದಳಿಕೆ ಆರ್ಯಾಡ್ ಮಾನಬೆಟ್ಟು ಎಂಬಲ್ಲಿ ನಡೆದಿದೆ. ಪ್ರವೀಣ್ ( 19 ) ಮೃತ ಯುವಕ. ಈತ ಮೂಲತಃ ಬಾಳೆಹೊನ್ನೂರು ನಿವಾಸಿ. ಸಂಬಂಧಿಕರ ಮನೆಗೆ ಕಾರ್ಯಕ್ರಮಕ್ಕೆಂದು ಬಂದಿದ್ದು, ಮಂಗಳವಾರ ಮಧ್ಯಾಹ್ನ ಮನೆಯ ಸಮೀಪದ ತೋಡಿಗೆ ಮನೆಯವರೊಂದಿಗೆ ಬಟ್ಟೆ ತೊಳೆಯಲು ಹೋಗಿದ್ದನು. ಈ ವೇಳೆ ಆಕಸ್ಮಿಕವಾಗಿ ಆಳವಾದ ಹಳ್ಳದ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ […]

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನಿಂದ 5ನೇ ಆವೃತ್ತಿಯ ಮ್ಯಾರಥಾನ್ “ರೇಸ್ ಟು ಬೀಟ್ ದಿ ವೇವ್”

ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಶನ್ ಸಹಯೋಗದೊಂದಿಗೆ 5ನೇ ಆವೃತ್ತಿಯ ಮಣಿಪಾಲ್ ಮ್ಯಾರಥಾನ್ ಫೆಬ್ರವರಿ 13 ರಂದು ನಡೆಯಲಿದೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾಹೆಯ ಸಹ ಕುಲಪತಿ ಡಾ. ಹೆಚ್ ಎಸ್ ಬಲ್ಲಾಳ್ ಈ ಕುರಿತು ಮಾಹಿತಿ ನೀಡಿದರು. ಓಟವು ನಿಮ್ಮ ದೈಹಿಕ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಸುಧಾರಿಸಲು ಅತ್ಯುತ್ತಮ ವಿಧಾನವಾಗಿದೆ. ಇದು ನಿಮ್ಮ ಆರೋಗ್ಯದ ಪ್ರತಿಯೊಂದು ಭಾಗಕ್ಕೂ ಪ್ರಯೋಜನವನ್ನು ನೀಡುತ್ತದೆ, ಒತ್ತಡವನ್ನು ನಿವಾರಿಸುತ್ತದೆ ಮತ್ತು ನಿಮ್ಮ ಮನಸ್ಥಿತಿ ಮತ್ತು […]

ಅ.31ಕ್ಕೆ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ

ಪರ್ಕಳ: ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಪರ್ಕಳ ಇದರ 2020- 2021ನೇ ಸಾಲಿನ ವಾರ್ಷಿಕ ಮಹಾಸಭೆಯು ಇದೇ ಅ. 31ರ ಭಾನುವಾರದಂದು ಬೆಳ್ಳಿಗ್ಗೆ 10ಕ್ಕೆ ಮಣಿಪಾಲದ ನರಸಿಂಗೆ ಶ್ರೀ ನರಸಿಂಹ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ. ಅಂದು ಮಧ್ಯಾಹ್ನ 1.30ರಿಂದ ಸಂಸ್ಥೆಯ ವಿಂಶತಿ ವರ್ಷದ ಪ್ರಯುಕ್ತ ಸುಪ್ರಸಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಯಕ್ಷಲೋಕ ವಿಜಯ ಎಂಬ ಪ್ರಸಂಗ ಪ್ರದರ್ಶನಗೊಳ್ಳಲಿದೆ ಎಂದು ಸೊಸೈಟಿಯ ಅಧ್ಯಕ್ಷ ಅಶೋಕ್ ಕಾಮತ್ ಕೋಡಂಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಬೈಕ್, ಸ್ಕೂಟಿಯಲ್ಲಿ ಮಕ್ಕಳನ್ನು ಕರೆದೊಯ್ಯಲು ಹೊಸ ನಿಯಮ..!!

ನವದೆಹಲಿ: ಅಪ್ರಾಪ್ತ ಪ್ರಯಾಣಿಕರ ಪ್ರಯಾಣ ಸುರಕ್ಷತೆಗಾಗಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಬೈಕ್ ಗಳ ವೇಗಕ್ಕೆ ಮಿತಿಯ ಮೇಲೆ ಕಡಿವಾಣ ಹಾಕುವ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ನಾಲ್ಕು ವರ್ಷದವರೆಗಿನ ಮಕ್ಕಳನ್ನು ಮೋಟಾರ್ ಸೈಕಲ್ ನಲ್ಲಿ ಕರೆದುಕೊಂಡು ಹೋಗುವ ವೇಳೆ ಬೈಕ್ ಗಳ ವೇಗದ ಮಿತಿ ಪ್ರತಿ ಗಂಟೆಗೆ 40 ಕಿ.ಮೀ. ದಾಟುವಂತಿಲ್ಲ ಹಾಗೂ 9 ತಿಂಗಳಿನಿಂದ 4 ವರ್ಷ ಪ್ರಾಯದ ಮಕ್ಕಳು ಕ್ರ್ಯಾಶ್ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಂಬುದರ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ಸಚಿವಾಲಯವು […]

ಬೆಳ್ಳೆ ಸುಂದರ ಶೆಟ್ಟಿ ನಿಧನ

ಉಡುಪಿ: ಪಡುಬೆಳ್ಳೆ ಬೈಲುಮನೆ ಮತ್ತು ಮಜೂರು ದೊಡ್ಡ ಮನೆ ಸುಂದರ ಶೆಟ್ಟಿ (85) ಅವರು ಅಲೆವೂರಿನ ಸ್ವಗೃಹದಲ್ಲಿ ಅ. 25 ರಂದು ನಿಧನ ಹೊಂದಿದರು. ಇವರು ಮುಂಬೈಯ ಸಿಂಥೆಟಿಕ್ಸ್ ಮತ್ತು ಕೆಮಿಕಲ್ಸ್ ಕಂಪೆನಿಯಲ್ಲಿ ಉದ್ಯೋಗಿಯಾಗಿ, ಮುಂಬೈ ಕನ್ನಡ ಸಂಘದಲ್ಲಿ, ಬಂಟ ಸಂಘದಲ್ಲಿ, ಬಂಟ್ಸ್ ಅಸೋಸಿಯೇಷನ್ಸ್ ಪದಾಧಿಕಾರಿಯಾಗಿ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು. ಉಡುಪಿ ಗ್ರಾಮೀಣ ಬಂಟ ಸಂಘದ,ಸಲಹೆಗಾರರಾಗಿ ಅಲೆವೂರಿನ ಸುಭೋಧಿನಿ ಶಾಲಾ ಆಡಳಿತ ಮಂಡಳಿ ಸದಸ್ಯರಾಗಿ ಸೇವೆಗೈದಿದ್ದರು. ಇವರು ಪತ್ನಿ ನಿವೃತ್ತ ಶಿಕ್ಷಕಿ ಸುಭೋಧಿನಿ […]