ಕುಂದಾಪುರ: Bravo ಇ ಸ್ಕೂಟರ್ ಶೋರೂಮ್ “ಇ-ವೀಲ್ಸ್” ಉದ್ಘಾಟನೆ

ಕುಂದಾಪುರ: ಪೆಟ್ರೋಲ್ ಸ್ಕೂಟರ್ ಗೆ ಪರ್ಯಾಯವಾಗಿ ಪರಿಸರ ಸ್ನೇಹಿಯಾದ ಬ್ಯಾಟರಿ ಚಾಲಿತ “ELTHOR Bravo” ಎಲೆಕ್ಟ್ರಿಕ್ ಸ್ಕೂಟರ್ ನ ನೂತನ ಶೋರೂಮ್ ‘ಇ-ವೀಲ್ಸ್’ ಕುಂದಾಪುರ ಎಪಿಎಂಸಿ ಮಾರುಕಟ್ಟೆಯ ಸಮೀಪ ರಾ.ಹೆ. 66ರ PERMBE CENTER ಕಟ್ಟಡದಲ್ಲಿ ಇಂದು ಶುಭಾರಂಭಗೊಂಡಿತು. Elthor Energy Pvt LTD Indiaದ ಮ್ಯಾನೇಜಿಂಗ್ ಡೈರೆಕ್ಟರ್ ಸುಧಾಕರ್ ಬಾಬು ಶೋರೂಮ್ ಅನ್ನು ಉದ್ಘಾಟಿಸಿದರು. Elthor Energy Pvt LTD Karnatakaದ ಪದ್ಮರಾಜ್ ಮೊಯ್ಲಿ ಮತ್ತು ಸುರೇಶ್ ಶೆಟ್ಟಿ, ಉಡುಪಿ ಆರ್ ಟಿಒ ಅಧಿಕಾರಿ ಜೆ.ಪಿ. […]

ಉಡುಪಿ: ವಿದ್ಯಾರ್ಥಿಗಳಿಗೆ ಬಹುಮಾನ ಹಣ ಮಂಜೂರು; ಅರ್ಜಿ ಆಹ್ವಾನ

ಉಡುಪಿ: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ನಡೆದ ಪಿಯುಸಿ (state syllabus) ನಲ್ಲಿ ಪ್ರಥಮ ಪ್ರಯತ್ನದಲ್ಲಿ, ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪ.ಜಾತಿಯ ವಿದ್ಯಾರ್ಥಿಗಳಿಗೆ ಬಹುಮಾನ ಹಣವನ್ನು ಮಂಜೂರು ಮಾಡುವ ಸಲುವಾಗಿ ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್‌ಸೈಟ್ www.sw.kar.nic.in ಹಾಗೂ ಕಚೇರಿ ದೂರವಾಣಿ ಸಂಖ್ಯೆ: 0820-2574892 ನ್ನು ಸಂಪರ್ಕಿಸುವಂತೆ ಸಮಾಜ ಕಲ್ಯಾಣ ಇಲಾಖೆಯ […]

ಉಡುಪಿ: ನಾಳೆ (ಅ.8) ಇಂಧನ ಸಚಿವ ಸುನಿಲ್ ಕುಮಾರ್ ಅವರಿಂದ ಸಾರ್ವಜನಿಕರ ಭೇಟಿ

ಉಡುಪಿ: ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವರಾದ ವಿ. ಸುನೀಲ್ ಕುಮಾರ್ ಅವರು ಅ.8ರ ಶುಕ್ರವಾರ ಮಧ್ಯಾಹ್ನ 12.30 ರಿಂದ 1.30ರ ವರೆಗೆ ಉಡುಪಿ ಕಡಿಯಾಳಿ ಬಳಿ ಇರುವ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸಾರ್ವಜನಿಕರ ಭೇಟಿಗೆ ಲಭ್ಯವಿರುತ್ತಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ: ‘ಆತ್ಮಹತ್ಯೆ ನಿಯಂತ್ರಣ: ಸಾಮಾಜಿಕ ಜವಾಬ್ದಾರಿ’ ಕುರಿತು ವಿಚಾರ ಸಂಕಿರಣ

ಉಡುಪಿ: ಉಡುಪಿ ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ರೋಟರಿ ಮಣಿಪಾಲ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗ ದಲ್ಲಿ ಡಿವಿಜಿ ಪುಣ್ಯ ಸ್ಮರಣೆ ಪ್ರಯುಕ್ತ ಮಾಧ್ಯಮದವರಿಗೆ ‘ಆತ್ಮಹತ್ಯೆ ನಿಯಂತ್ರಣ: ಸಾಮಾಜಿಕ ಜವಾಬ್ದಾರಿ’ ವಿಷಯದ ಕುರಿತ ವಿಚಾರ ಸಂಕಿರಣವನ್ನು ಗುರುವಾರ ಉಡುಪಿ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಹಾಗೂ ಹಿರಿಯ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಹಾಗೂ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯೂ ನಿಕೇಶನ್ ಇದರ ಮಾಧ್ಯಮ ಅಧ್ಯಯನ ಕೇಂದ್ರದ ಮುಖ್ಯಸ್ಥೆ […]

ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಇಂದಿನಿಂದ ನವರಾತ್ರಿ ಮಹೋತ್ಸವ

ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಇಂದಿನಿಂದ ಅ. 15ರ ವರೆಗೆ ನವರಾತ್ರಿ ಮಹೋತ್ಸವ ನಡೆಯಲಿದೆ. ನವರಾತ್ರಿ ಉತ್ಸವದ ಪ್ರಯುಕ್ತ 9 ದಿನಗಳ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ದೇಗುಲದಲ್ಲಿ ನೆರವೇರಲಿದೆ. ಚಂಡಿಕಾಯಾಗ, ರಥೋತ್ಸವ, ನವರಾತ್ರಿ ಕಲ್ಪೋಕ್ತ ಪೂಜೆ, ವಿಶೇಷ ಹೂವಿನ ಪೂಜೆ ಜರುಗಲಿದೆ. ಅ.7 ರಂದು ನವರಾತ್ರಿ ಆರಂಭ ವಿಶೇಷ ಪೂಜೆ, ಅ. 8 ರಂದು ಕದಿರು ಕಟ್ಟುವುದು. ಅ.10ಕ್ಕೆ ಲಲಿತ ಪಂಚಮಿ, ಅ.12ಕ್ಕೆ ಶಾರದ ಪೂಜಾ ಕಾರ್ಯಕ್ರಮ, ಅ.13 ರಂದು ದುರ್ಗಾಷ್ಟಮಿ ಮಹಾ ಚಂಡಿಕಾಹೋಮ ಮತ್ತು […]