ಕುಂದಾಪುರ: Bravo ಇ ಸ್ಕೂಟರ್ ಶೋರೂಮ್ “ಇ-ವೀಲ್ಸ್” ಉದ್ಘಾಟನೆ

ಕುಂದಾಪುರ: ಪೆಟ್ರೋಲ್ ಸ್ಕೂಟರ್ ಗೆ ಪರ್ಯಾಯವಾಗಿ ಪರಿಸರ ಸ್ನೇಹಿಯಾದ ಬ್ಯಾಟರಿ ಚಾಲಿತ “ELTHOR Bravo” ಎಲೆಕ್ಟ್ರಿಕ್ ಸ್ಕೂಟರ್ ನ ನೂತನ ಶೋರೂಮ್ ‘ಇ-ವೀಲ್ಸ್’ ಕುಂದಾಪುರ ಎಪಿಎಂಸಿ ಮಾರುಕಟ್ಟೆಯ ಸಮೀಪ ರಾ.ಹೆ. 66ರ PERMBE CENTER ಕಟ್ಟಡದಲ್ಲಿ ಇಂದು ಶುಭಾರಂಭಗೊಂಡಿತು.

Elthor Energy Pvt LTD Indiaದ ಮ್ಯಾನೇಜಿಂಗ್ ಡೈರೆಕ್ಟರ್ ಸುಧಾಕರ್ ಬಾಬು ಶೋರೂಮ್ ಅನ್ನು ಉದ್ಘಾಟಿಸಿದರು.
Elthor Energy Pvt LTD Karnatakaದ ಪದ್ಮರಾಜ್ ಮೊಯ್ಲಿ ಮತ್ತು ಸುರೇಶ್ ಶೆಟ್ಟಿ, ಉಡುಪಿ ಆರ್ ಟಿಒ ಅಧಿಕಾರಿ ಜೆ.ಪಿ. ಗಂಗಾಧರ್, Elthor Energy Pvt
Indiaದ ಸಿಇಒ ವಿಜಯ್ ಕುಮಾರ್, ಕುಂದಾಪುರ ಫೆಡರಲ್ ಬ್ಯಾಂಕ್ ಹಿರಿಯ ಮ್ಯಾನೇಜರ್ ಪದ್ಮನಾಭ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶೋರೂಮ್ ಮಾಲೀಕ ನವೀನ್ ಎನ್. ಕುಮಾರ್ ಉಪಸ್ಥಿತರಿದ್ದರು.

ಉಚಿತ ರೀಚಾರ್ಜ್ ಸೌಲಭ್ಯ:
ನಮ್ಮ ಶೋರೂಮ್ ಗಳಲ್ಲಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಉಚಿತವಾಗಿ ಸ್ಕೂಟರ್ ರೀಚಾರ್ಜ್ ಮಾಡಿಕೊಡಲಾಗುವುದು. ಕುಂದಾಪುರ, ಉಡುಪಿ, ಸುರತ್ಕಲ್, ಕಿನ್ನಿಗೋಲಿ, ಮಂಗಳೂರು, ಕೈಕಂಬ ಹಾಗೂ ಮೂಡುಬಿದಿರೆಯಲ್ಲಿ ಸಂಸ್ಥೆಯ ಶೋರೂಮ್ ಗಳಿದ್ದು, ಅಲ್ಲಿ ಗ್ರಾಹಕರು ಉಚಿತವಾಗಿ ಬ್ಯಾಟರಿ ರೀಚಾರ್ಜ್ ಮಾಡಿಕೊಳ್ಳಬಹುದು. ಹಾಗೆ, ಉದ್ಘಾಟನೆ ಆಫರ್ ಆಗಿ ಉತ್ತಮ ಗುಣಮಟ್ಟದ
ಹೆಲ್ಮೆಟ್ ಉಡುಗೊರೆಯಾಗಿ ನೀಡಲಾಗುವುದು. ಬುಕಿಂಗ್ ಮಾಡುವ ಎಲ್ಲ ಗ್ರಾಹಕರಿಗೂ ಉಡುಗೊರೆಯಾಗಿ ಒಂದು ಹೆಲ್ಮೆಟ್ ದೊರೆಯಲಿದೆ ಎಂದು ನವೀನ್ ಎನ್. ಕುಮಾರ್ ತಿಳಿಸಿದರು.

ಪ್ರತಿ ಕಿ.ಮೀಗೆ 10 ಪೈಸೆ ವೆಚ್ಚ:
ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನರು ಆರ್ಥಿಕ ಹೊರೆಯಿಂದ ತಪ್ಪಿಸಿಕೊಳ್ಳಲು ಎಲೆಕ್ಟ್ರಿಕ್ ವಾಹನಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಅಂಥವರಿಗೆ ‘ELTHOR Bravo” ನೂತನ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆರ್ಥಿಕ ಹೊರೆಯಿಂದ ಬಳಲುತ್ತಿರುವ ಜನರಿಗೆ ಈ ಸ್ಕೂಟರ್ ಉಪಯುಕ್ತವಾಗಿದ್ದು, ಪ್ರತಿ ಕಿಲೋ ಮೀಟರ್ ಗೆ ಹತ್ತು ಪೈಸೆ ಮಾತ್ರ ವೆಚ್ಚವಾಗಲಿದೆ.