ಆಸಕ್ತರು ಗಮನಿಸಿ: ಸ್ವಸಹಾಯ ಕಿರು ಉದ್ದಿಮೆಗೆ ಸಿಗಲಿದೆ ನೆರವು

ಉಡುಪಿ: ಅಮೃತ ಸ್ವಸಹಾಯ ಕಿರು ಉದ್ದಿಮೆ ಯೋಜನೆಯಡಿ ಸ್ವ-ಸಹಾಯ ಗುಂಪುಗಳನ್ನು ಕಿರು ಉದ್ದಿಮೆ ಸಂಸ್ಥೆಗಳನ್ನಾಗಿ ರೂಪಿಸಲು ತಲಾ 1 ಲಕ್ಷ ರೂ. ನಂತೆ ಬೀಜಧನ ಒದಗಿಸಲಾಗುತ್ತಿದೆ. ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಲು ಸ್ವ-ಸಹಾಯ ಗುಂಪುಗಳು 10 ವರ್ಷಗಳಿಂದ ಆದಾಯೋತ್ಪನ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕು ಹಾಗೂ ಎನ್.ಆರ್.ಎಲ್.ಎಮ್ ಅಡಿಯಲ್ಲಿ ಬರುವಂತಹ ಗ್ರಾಮ ಪಂಚಾಯತ್ ಮಟ್ಟದ ಫೆಡರೇಶನ್‌ನಲ್ಲಿ ಕಡ್ದಾಯವಾಗಿ ಸದಸ್ಯರಾಗಿರಬೇಕು ಮತ್ತು ಸಮುದಾಯ ಬಂಡವಾಳ ನಿಧಿ ಪಡೆದುಕೊಳ್ಳವುದರ ಜೊತೆಗೆ ಕಳೆದ 5 ವರ್ಷಗಳಿಂದ ಬ್ಯಾಂಕ್‌ಗಳಿAದ ಸಾಲ ಪಡೆದಿರಬೇಕು ಹಾಗೂ ಸುಸ್ಥಿರದಾರರಾಗಿರದೇ […]

ತ್ರಿಶಾ ಕ್ಲಾಸಸ್: ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ

ಉಡುಪಿ: ಅಖಿಲ ಭಾರತ ಮಟ್ಟದಲ್ಲಿ ಇದೇ ಜುಲೈ ತಿಂಗಳಲ್ಲಿ ನಡೆದ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ಶುಕ್ರವಾರ ಅಭಿನಂದಿಸಲಾಯಿತು. ತ್ರಿಶಾ ಸಮೂಹ ಸಂಸ್ಥೆಗಳ ಸಂಸ್ಥಾಪಕ ಸಿ.ಎ ಗೋಪಾಲಕೃಷ್ಣ ಭಟ್ ಮಾತನಾಡಿ, ಎಡವಿದಾಗ ಮತ್ತೆ ಎದ್ದು ನಿಂತು ಗುರಿಯ ಕಡೆಗೆ ಸಾಗಿದರೆ ಮಾತ್ರ ನಮ್ಮಿಂದ ಸಾಧನೆ ಮಾಡಲು ಸಾಧ್ಯ. ಸಿ.ಎ ಇಂಟರ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಆರ್ಟಿಕಲ್ ಶಿಪ್ ನಲ್ಲಿ ನಮ್ಮ ಪ್ರಾಯೋಗಿಕ ಕೆಲಸಗಳು ಆರಂಭವಾಗುತ್ತವೆ. ಇಷ್ಟು ದಿನ ಕಲಿತ […]

ಅಕ್ರಮ ಗೋ ಸಾಗಾಟ, ಮತಾಂತರದ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ: ಸಚಿವ ಸುನಿಲ್ ಕುಮಾರ್

ಕಾರ್ಕಳ: ಇತ್ತೀಚಿನ ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗೋ ಸಾಗಾಟ ಮತ್ತು ಕಾನೂನು ಬಾಹಿರ ಮತಾಂತರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಈ ನಿಟ್ಟಿನಲ್ಲಿ ಇಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕುವಂತೆ ಹಾಗೂ ಕಠಿಣ ಕ್ರಮ ಕೈಗೊಳ್ಳುವಂತೆ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ವಿ. ಸುನಿಲ್ ಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದರು. ಕಾರ್ಕಳ ಪ್ರವಾಸಿ ಬಂಗಲೆಯಲ್ಲಿ […]

ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಸೀಟು ಭರ್ತಿಗೆ ಅವಕಾಶ: ನೈಟ್ ಕರ್ಫ್ಯೂನಲ್ಲಿ ಸಡಿಲಿಕೆ, ಪಬ್​​​-ಕ್ಲಬ್​​ ತೆರೆಯಲು ಅನುಮತಿ

ಬೆಂಗಳೂರು: ಕೋವಿಡ್ ಪಾಸಿಟಿವಿ ರೇಟ್​​ ಶೇ.1 ಕ್ಕಿಂತ ಕಡಿಮೆ ಇರುವ ಜಿಲ್ಲೆಯಗಳಲ್ಲಿ ಅಕ್ಟೋಬರ್ 1 ರಿಂದ ಶೇ. 100 ರಷ್ಟು ಥಿಯೇಟರ್ ಗೆ ಅವಕಾಶ ನೀಡಲಾಗುತ್ತದೆ. ಕನಿಷ್ಠ 1 ಡೋಸ್​ ಹಾಕಿಸಿಕೊಂಡವರಿಗೆ ಅವಕಾಶ ನೀಡಲಾಗುತ್ತದೆ ಎಂದು ಸಿಎಂ ಬಸವರಾಜ್​ ಬೊಮ್ಮಾಯಿ ಹೇಳಿದ್ದಾರೆ. ರಾಜ್ಯದಲ್ಲಿ ಕೊರೊನಾ ವೈರಸ್‌ನ ಇಳಿಮುಖ ಹಿನ್ನೆಲೆ ಕೋವಿಡ್ 19 ಮಾರ್ಗಸೂಚಿಗಳಿಗೆ ಸಂಬಂಧಿಸಿದಂತೆ ಇಂದು ಸಿಎಂ ಬೊಮ್ಮಾಯಿ ಅವರು ತಾಂತ್ರಿಕ ಸಲಹಾ ಸಮಿತಿಯ ಸದಸ್ಯರನ್ನೊಳಗೊಂಡಂತೆ ಸಭೆ ನಡೆಸಿದರು. ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ರಾಜ್ಯದಲ್ಲಿ […]

ಕರಾವಳಿ ಸಹಿತ ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಗೋ ಕಳ್ಳತನ, ಗೋ ಹತ್ಯೆ: ಹಲ್ಲಿಲ್ಲದ ಗೋಹತ್ಯಾ ನಿಷೇಧ ಕಾನೂನು ತೆಗೆದು ಬಿಸಾಕಿ; ವಾಸುದೇವ ಭಟ್

ಉಡುಪಿ: ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾನೂನೇನೋ ಜಾರಿಗೆ ಬಂತು, ಆದ್ರೆ ಕರಾವಳಿ ಸಹಿತ ರಾಜ್ಯದ ವಿವಿಧೆಡೆಗಳಲ್ಲಿ ನಿರಂತರವಾಗಿ ಗೋವುಗಳ ಮೇಲೆ ಆಕ್ರಮಣ, ಅಕ್ರಮ ಸಾಗಾಟ, ಗೋಹತ್ಯೆಗಳು ಎಗ್ಗಿಲ್ಲದೆ ನಡೆಯುತ್ತಿವೆ. ಇದನ್ನು ಕಾನೂನಿನ ಮೂಲಕ ನಿಯಂತ್ರಿಸಲು ಸಾಧ್ಯವಿಲ್ಲದಿದ್ದರೆ, ಹಲ್ಲಿಲ್ಲದ ಗೋಹತ್ಯಾ ಕಾನೂನಿನಿಂದ ಪ್ರಯೋಜನವಾದರೂ ಏನು?. ಆ ಕಾನೂನನ್ನು ತೆಗೆದು ಬಿಸಾಡುವುದೇ ಲೇಸು ಎಂದು ಹಿಂದೂ ಮುಖಂಡ, ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಡುಪಿ ಮಂಗಳೂರು ಜಿಲ್ಲೆಗಳಲ್ಲಂತೂ ಗೋವುಗಳ ಸ್ವಚ್ಛಂದ ಬದುಕಿಗೆ ಬೆಂಕಿ ಬೀಳುತ್ತಿದೆ. ದೇವಸ್ಥಾನಗಳ […]