ಕಾರ್ಕಳ ಸಿವಿಲ್‌ ಇಂಜಿನಿಯರ್ಸ್ ಅಸೋಸಿಯೇಷನ್‌: ನೂತನ ಅಧ್ಯಕ್ಷರಾಗಿ ರಾಜೇಶ್‌ ಕುಂಟಾಡಿ ಆಯ್ಕೆ

ಕಾರ್ಕಳ: ಸಿವಿಲ್‌ ಇಂಜಿನಿಯರ್ಸ್ ಅಸೋಸಿಯೇಷನ್‌ ಕಾರ್ಕಳ ಇದರ ಅಧ್ಯಕ್ಷರಾಗಿ ರಾಜೇಶ್‌ ಕುಂಟಾಡಿ ಅವರು ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಪ್ರಕಾಶ್‌ ಹೊಟೇಲ್‌ ಸಭಾಂಗಣದಲ್ಲಿ ನಡೆದ ಅಸೋಸಿಯೇಷನ್‌ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಇತರ ಪದಾಧಿಕಾರಿಗಳು: ಕಾರ್ಯದರ್ಶಿಯಾಗಿ ಮಂಜುನಾಥ ಹೆಗ್ಡೆ, ಉಪಾಧ್ಯಕ್ಷರಾಗಿ ಪ್ರಮಲ್‌ ಕುಮಾರ್‌, ಕೋಶಾಧಿಕಾರಿಯಾಗಿ ಪ್ರಕಾಶ್‌ ಆಚಾರ್ಯ, ಜೊತೆ ಕಾರ್ಯದರ್ಶಿಯಾಗಿ ಅನೀಶ್‌ ತೆಂಡೂಲ್ಕರ್‌, ಸಾಂಸ್ಕೃತಿಕ, ಕ್ರೀಡಾ ಕಾರ್ಯದರ್ಶಿಯಾಗಿ ಶ್ರೇಯಸ್‌ ಶೆಟ್ಟಿ ಮತ್ತು ಸುಶಾಂತ್‌ ಶೆಟ್ಟಿ, ತಾಂತ್ರಿಕ ಕಾರ್ಯದರ್ಶಿಯಾಗಿ ಜಯರಾಜ್‌ ಶೆಟ್ಟಿ ಅವರು ನೇಮಕಗೊಂಡಿದ್ದಾರೆ. ಗೌರವ ಸಲಹೆಗಾರರಾಗಿ ಶ್ರೀನಿವಾಸ್‌ […]

ಸನ್‌ರೈಸರ್ಸ್ ಆಟಗಾರನಿಗೆ ಕೋವಿಡ್: ಇಂದಿನ ಪಂದ್ಯದ ಮೇಲೆ ಕರಿಛಾಯೆ!

ದುಬೈ: ಸನ್‌ರೈಸರ್ಸ್ ಹೈದರಾಬಾದ್ ತಂಡದ ಓರ್ವ ಆಟಗಾರನಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ದುಬೈಯಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯ ನಡೆಯಬಹುದೇ ಎಂಬ ಅನುಮಾನ ಉಂಟಾಗಿದೆ. ತಂಡೆದೆಲ್ಲ ಆಟಗಾರರನ್ನು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಫಲಿತಾಂಶ ನೆಗೆಟಿವ್ ಬಂದರೆ ಮಾತ್ರ ಪಂದ್ಯ ನಿಗದಿತ ವೇಳಾಪಟ್ಟಿಯಂತೆ ನಡೆಯಲಿವೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಐಪಿಎಲ್ ಅಧಿಕೃತ ಟ್ವೀಟ್ ಮಾಡಿದ್ದು, ಸನ್‌ರೈಸರ್ಸ್ ತಂಡದ ಎಡಗೈ ವೇಗಿ ಟಿ. ನಟರಾಜನ್ ಅವರಿಗೆ ಕೋವಿಡ್ ಸೋಂಕು ತಗುಲಿರುವುದನ್ನು ದೃಢಪಡಿಸಿದೆ. ಅಲ್ಲದೆ ಅವರ […]

ಬೈಂದೂರು: ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಬೈಂದೂರು: ಎಲ್.ಪಿ.ಜಿ, ಪೆಟ್ರೋಲ್, ಡಿಸೇಲ್ ಸೇರಿದಂತೆ ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆ ಮಾಡುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರಕಾರದ ಜನವಿರೋಧಿ ನೀತಿಯ ವಿರುದ್ಧ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಹಾಗೂ ಬೈಂದೂರು ಯುವ ಕಾಂಗ್ರೆಸ್ ವತಿಯಿಂದ ಬೈಂದೂರು ತಹಶೀಲ್ದಾರ್ ಕಚೇರಿ ಎದುರು ಇಂದು ವಿನೂತನ ಮಾದರಿಯಲ್ಲಿ ತಯಾರಿಸಿದ ಗ್ಯಾಸ್ ಸಿಲಿಂಡರ್ ನಲ್ಲಿ ಕಟ್ಟಿಗೆ ಹಾಕಿ ಬೆಂಕಿ ಮಾಡಿ ಚಹಾ ತಯಾರಿಸುವುದರ ಮೂಲಕ ಪ್ರತಿಭಟನೆ ನಡೆಸಲಾಯಿತು. ನಂತರ ಬೈಂದೂರು ತಹಶೀಲ್ದಾರ್ ಮೂಲಕ ಉಡುಪಿ ಜಿಲ್ಲಾಧಿಕಾರಿಗಳಿಗೆ […]

ಸೋನಿ ಇಂಡಿಯಾ ತೆಕ್ಕೆಗೆ ZEE ಎಂಟರ್‌ಟೇನ್‌ಮೆಂಟ್.!

ಮುಂಬೈ: ಭಾರತದ ಅತಿದೊಡ್ಡ ಮನರಂಜನಾ ಜಾಲ ಹೊಂದಿರುವ ಟಿವಿ ಮಾಧ್ಯಮ ‘ಝೀ ಎಂಟರ್‌ಟೇನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮೆಟೆಡ್ ಸಂಸ್ಥೆ’ಯನ್ನು ಸೋನಿ ಇಂಡಿಯಾ ಕಾರ್ಪ್ಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಮಂಡಳಿಯು ವಿಲೀನ ಪ್ರಕ್ರಿಯೆಗೆ ತಾತ್ವಿಕ ಒಪ್ಪಿಗೆ ನೀಡಿರುವುದಾಗಿ ಜೀ ಎಂಟರ್‌ಟೈನ್ಮೆಂಟ್‌ ತಿಳಿಸಿದೆ. ಜೀ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಬದಲಾವಣೆ ಮಾಡುವಂತೆ ಪ್ರಮುಖ ಹೂಡಿಕೆದಾರರು ಒತ್ತಡ ಹೇರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುನೀತ್‌ ಗೋಯೆಂಕಾ ಅವರನ್ನು ಮಂಡಳಿಯಿಂದ ಹೊರಗಿಡುವಂತೆ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ. ಹೊಸ ಒಪ್ಪಂದದಂತೆ ಸೋನಿ […]

ಪೇಜಾವರ ಶ್ರೀಗಳ 34ನೇ ಚಾತುರ್ಮಾಸ್ಯ ವ್ರತದ ಸಮಾರೋಪ ಸಮಾರಂಭ

ಬೆಂಗಳೂರು: ಅಧ್ಯಾತ್ಮಿಕ ಉನ್ನತಿಗೆ ಭಕ್ತಿಯೇ ಶ್ರೇಷ್ಠ ಸಾಧನ. ಯಾವುದೇ ನಿರ್ಬಂಧವಿಲ್ಲದ ಉತ್ಕಟವಾದ ಪ್ರೀತಿಯೇ ಭಕ್ತಿ. ಇಂಥಹ ಶ್ರೇಷ್ಠವಾದ ಭಕ್ತಿಮಾರ್ಗದಲ್ಲಿ ನಡೆದು ಜೀವನ ಸಾರ್ಥಗೊಳಿಸುವ ಬಗೆಯನ್ನು ಈ ನೆಲದಲ್ಲಿ ಅನೇಕ ಮಹಾತ್ಮರು ತೋರಿದ್ದಾರೆ. ಜಗದ್ಗುರು ಮಧ್ವಾಚಾರ್ಯರು ಮತ್ತು ಅವರಿಂದ ಸ್ಥಾಪಿಸಲ್ಪಟ್ಟ ಉಡುಪಿಯ ಮಠಗಳು ಶತಮಾನಗಳಿಂದ ಭಕ್ತಿಯ ಶಕ್ತಿಯನ್ನು ತಿಳಿಸುವ ಸಮರ್ಥ ಕೆಲಸವನ್ನು ಮಾಡುತ್ತಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಸಭಾಂಗಣದಲ್ಲಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ 34 ನೇ ಚಾತುರ್ಮಾಸ್ಯ ವ್ರತ […]