ಸಿಇಟಿ ಪರೀಕ್ಷೆಯಲ್ಲಿ ಕುಂದಾಪುರದ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಸಾಧನೆ

ಕುಂದಾಪುರ: ವೆಂಕಟರಮಣ ಪದವಿ ಪೂರ್ವ ಕಾಲೇಜು ಕುಂದಾಪುರ  2020-21 ನೇ ಶೈಕ್ಷಣಿಕ ಸಾಲಿನಲ್ಲಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಎಂಜಿನಿಯರಿಂಗ್ ವಿಭಾಗ)ದಲ್ಲಿ ವಿದ್ಯಾರ್ಥಿಗಳ ಸಾಧನೆ ಅದ್ಭುತವಾಗಿದೆ. ಕ್ರಮವಾಗಿ ಶ್ರೀನಿಧಿ ಉಡುಪ 835 ನೇ ರ‍್ಯಾಂಕ್, ತಿಲಕ್ ಚಂದ್ರ ಶಾಸ್ತ್ರಿ‌ 956ನೇ ರ‍್ಯಾಂಕ್,ಶ್ರೀವತ್ಸ ಕಾಮತ್ 1071ನೇ ರ‍್ಯಾಂಕ್, ಸಿಂಚನಾ 1391ನೇ ರ‍್ಯಾಂಕ್, ಅಚಿಂತ್ಯಾ ಉಪಾಧ್ಯಾಯ 1465ನೇ ರ‍್ಯಾಂಕ್, ಕಶಿಶ್ ಕೆ.ಸಿ.2029ನೇ  ರ‍್ಯಾಂಕ್,  ಗೌರವ್ 2095ನೇ  ರ‍್ಯಾಂಕ್ ಪಡೆಯುವುದರ ಮೂಲಕ ಸಿ.ಇ.ಟಿ ಪರೀಕ್ಷೆಯಲ್ಲಿ ಸಾಧನೆ ಮೆರೆದಿದ್ದಾರೆ ಎಂದು ಕಾಲೇಜಿನ  ಪ್ರಕಟಣೆ […]

ಸಂಕಷ್ಟದಲ್ಲಿರುವ ಸಾಹಿತಿ, ಕಲಾವಿದರುಗಳಿಗೆ ಮಾಸಾಶನ: ಅರ್ಜಿ ಆಹ್ವಾನ

ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಾಹಿತ್ಯ, ಸಂಗೀತ, ನೃತ್ಯ., ನಾಟಕ, ದೈವಾರಾದನೆ, ಜಾನಪದ, ಯಕ್ಷಗಾನ, ಲಲಿತಕಲೆ ಮತ್ತು ಶಿಲ್ಪಕಲೆ ಕ್ಷೇತ್ರದಲ್ಲಿ 25 ವರ್ಷಗಳ ಕಾಲ ಗಣನೀಯವಾಗಿ ಸೇವೆ ಸಲ್ಲಿಸಿದಂತಹ ಆಸಕ್ತ ಸಾಹಿತಿ-ಕಲಾವಿದರಿಗೆ ಆರ್ಥಿಕ ನೆರವು ನೀಡಲು ಅರ್ಜಿ ಅಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವವರು ಕನಿಷ್ಟ 58 ವರ್ಷ ವಯೋಮಾನದವರಾಗಿರಬೇಕು, ಅಂಗವಿಕಲರಾಗಿದ್ದಲ್ಲಿ 40 ವರ್ಷ ವಯೋಮಿತಿ ಹೊಂದಿರಬೇಕು ಹಾಗೂ ವಾರ್ಷಿಕ ಆದಾಯವು 1 ಲಕ್ಷ ರೂ ಮೀರಿರದೆ, 20 ವರ್ಷ ಕಲಾ ಸೇವೆ ಸಲ್ಲಿಸಿರಬೇಕು. ಅರ್ಜಿ ನಮೂನೆ ಹಾಗೂ […]

ಕುಂದಾಪುರ: ರಿವಾಲ್ವರ್ ತೋರಿಸಿ ಮೊಬೈಲ್ ಅಂಗಡಿ ಮಾಲೀಕನಿಂದ ಲಕ್ಷಾಂತರ ರೂಪಾಯಿ ಸುಲಿಗೆಗೈದ ದುಷ್ಕರ್ಮಿಗಳು

ಕುಂದಾಪುರ: ಮೊಬೈಲ್ ಅಂಗಡಿ ಮಾಲೀಕನಿಗೆ ದುಷ್ಕರ್ಮಿಗಳ ತಂಡವೊಂದು ರಿವಾಲ್ವರ್ ತೋರಿಸಿ ಲಕ್ಷಾಂತರ ರೂಪಾಯಿ ನಗದು ಹಾಗೂ ಸೊತ್ತುಗಳನ್ನು ಸುಲಿಗೆ ಮಾಡಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ. ಬೈಂದೂರಿನ ಮುಸ್ತಾಫ್ ಎಂಬವರು ನಗದು ಹಾಗೂ ಸೊತ್ತು ಕಳೆದುಕೊಂಡ ಮೊಬೈಲ್ ಅಂಗಡಿ ಮಾಲೀಕ. ಇವರು ಎಂದಿನಂತೆ ಸೆ.17ರಂದು ರಾತ್ರಿ ಶಾಪ್ ಬಂದ್ ಮಾಡಿ ಕುಂದಾಪುರದ ಫ್ಲ್ಯಾಟ್ ಗೆ ಹೋಗುತ್ತಿದ್ದರು. ಈ ವೇಳೆ ಕಾರಿನಲ್ಲಿ ಮೂವರೊಂದಿಗೆ ಬಂದ ಮುಕ್ತಾರ್ ಎಂಬಾತ ಮುಸ್ತಾಫ್ ನನ್ನು ಅಡ್ಡಗಟ್ಟಿ ಕಾರಿನೊಳಗೆ ಎಳೆದೊಯ್ದಿದ್ದು, ಬಂದೂಕು ತೋರಿಸಿ ಬೆಂಗಳೂರಿಗೆ ಕರೆದುಕೊಂಡು […]

ಇಂದಿನ ಐಪಿಎಲ್ ಪಂದ್ಯ ನಿಗದಿಯಂತೆ ನಡೆಯಲಿದೆ: ಬಿಸಿಸಿಐ

ದುಬೈ: ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ಟಿ. ನಟರಾಜನ್ ಗೆ ಕೋವಿಡ್ ಕಾಣಿಕೊಂಡಿದ್ದು, ಇದರಿಂದ ದುಬೈನಲ್ಲಿ ಇಂದು ನಡೆಯಬೇಕಿದ್ದ ಸನ್ ರೈಸರ್ಸ್ ಹಾಗೂ ಡೆಲ್ಲಿ ನಡುವಿನ ಪಂದ್ಯದ ಮೇಲೆ ಕೋವಿಡ್ ಕರಿನೆರಳು ಬೀರಿತ್ತು. ಇದೀಗ ಈ ಬಗ್ಗೆ ಬಿಸಿಸಿಐ ಸ್ಪಷ್ಟನೆ ನೀಡಿದ್ದು, ಐಪಿಎಲ್ ಟೂರ್ನಿಯಲ್ಲಿ ಬುಧವಾರ ದುಬೈಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವು ನಿಗದಿತ ವೇಳಾಪಟ್ಟಿಯಂತೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದೆ.

ಉಡುಪಿ: ಸೆ. 26ರಂದು ಗಿರಿಜಾ ಹೆಲ್ತ್ ಕೇರ್ ಸಂಸ್ಥೆಯ ನೂತನ ಮೆಡಿಕೇರ್ ಕ್ಲಿನಿಕಲ್ ಆ್ಯಂಡ್ ಡೈಗ್ನೋಸ್ಟಿಕ್ ಲ್ಯಾಬ್ ಆ್ಯಂಡ್ ಮೆಡಿಕೇರ್ ಮೆಡಿಕಲ್ಸ್ ಸೆಂಟರ್ ಉದ್ಘಾಟನೆ

ಉಡುಪಿ: ಉಡುಪಿ ಗಿರಿಜಾ ಹೆಲ್ತ್ ಕೇರ್ ಸಂಸ್ಥೆಯ ನೂತನ ಮೆಡಿಕೇರ್ ಕ್ಲಿನಿಕಲ್ ಆ್ಯಂಡ್ ಡೈಗ್ನೋಸ್ಟಿಕ್ ಲ್ಯಾಬ್ ಆ್ಯಂಡ್ ಮೆಡಿಕೇರ್ ಮೆಡಿಕಲ್ಸ್ ಸೆಂಟರ್ ಇದೇ ಸೆಪ್ಟೆಂಬರ್ 26ರಂದು ಉಡುಪಿ ಕೋರ್ಟ್ ಬದಿ ರಸ್ತೆಯ ಪೈ ಸೆಲ್ಸ್ ಶಾಪ್ ನ ಹಿಂಬದಿಯ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಳ್ಳಲಿದೆ.