ದ.ಕ. ಜಿಲ್ಲೆ: ಆ. 30ರಿಂದ ಪಿಯು ಕಾಲೇಜು ಆರಂಭ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಪಿಯು ಕಾಲೇಜುಗಳನ್ನು ಆ.30ರಿಂದ ಹಿಂದಿನ ನಿರ್ಣಯದಂತೆ ಆರಂಭಿಸಲು ದ.ಕ. ಜಿಲ್ಲಾಡಳಿತ ತೀರ್ಮಾನಿಸಿದೆ. ಪಿಯು ಕಾಲೇಜುಗಳು, ವಿದ್ಯಾರ್ಥಿಗಳು ಸಿಇಟಿಗೆ ಸನ್ನದ್ಧರಾಗಲು ಇನ್ನು ಹೆಚ್ಚು ಸಮಯ ಇಲ್ಲದ ಕಾರಣ ಅವರಿಗೆ ಹಂತ ಹಂತವಾಗಿ ತರಗತಿ ಆರಂಭಿಸಲು ಉದ್ದೇಶಿಸಲಾಗಿತ್ತು. ಅದಕ್ಕಾಗಿ ಕಾಲೇಜುಗಳಿಂದಲೇ ಸೂಕ್ತ ಕಾರ್ಯಯೋಜನೆ ನೀಡಲು ಈ ಮೊದಲು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆ.30ರಂದು ಪಿಯು ಭೌತಿಕ ತರಗತಿ ಆರಂಭಗೊಳ್ಳಲಿದೆ. ಅದಕ್ಕೆ ಬೇಕಾದ ಮಾರ್ಗಸೂಚಿಗಳನ್ನು ಆ.28ರಂದು ಹೊರಡಿಸಲಾಗುವುದು ಎಂದು ಜಿಲ್ಲಾಧಿಕಾರಿ […]

ಉಡುಪಿ: ಮಿತಿ ಮೀರಿದ ಟೇಸ್ಟಿ ಪೌಡರ್ ಬಳಸಿದ್ದಲ್ಲಿ ಕ್ರಿಮಿನಲ್ ಕೇಸ್; ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ

ಉಡುಪಿ: ಜಿಲ್ಲೆಯಲ್ಲಿ ಯಾವುದೇ ಬಗೆಯ ಆಹಾರ ತಯಾರಿಕೆಯಲ್ಲಿ ಮಿತಿ ಮೀರಿದ ಟೇಸ್ಟಿ ಪೌಡರ್ ಬಳಕೆ ಕಂಡುಬಂದಲ್ಲಿ ಅಂತಹ ಆಹಾರ ತಯಾರಕರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ. ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆಹಾರ ಸುರಕ್ಷತೆ ಕುರಿತ ಜಿಲ್ಲಾ ಮಟ್ಟದ ಸಲಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೋಬಿಮಂಚೂರಿ, ಚೈನೀಸ್ ತಿನಿಸುಗಳು ಮುಂತಾದ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ರುಚಿಯ ಹೆಚ್ಚಳಕ್ಕೆ ಟೇಸ್ಟಿ ಪೌಡರ್‌ನ ಬಳಕೆ ನಡೆಯುತ್ತಿದೆ. ಆದರೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ […]

ಉಡುಪಿ: ಜಿಲ್ಲೆಯಲ್ಲಿ ನಾಳೆ ಕೋವಿಡ್ ಲಸಿಕಾ ಮಹಾಮೇಳ; 40,000 ಡೋಸ್ ಲಸಿಕೆ ನೀಡುವ ಗುರಿ

ಉಡುಪಿ: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ಹಾಕಿಸುವ ‘ಕೋವಿಡ್-19 ಲಸಿಕಾ ಮಹಾಮೇಳ’ ನಾಳೆ (ಆ.27) ಜಿಲ್ಲೆಯಲ್ಲಿ ನಡೆಯಲಿದೆ. ಆರೋಗ್ಯ ಕಾರ್ಯಕರ್ತರು/ಮುಂಚೂಣಿ ಕಾರ್ಯಕರ್ತರು/ಎಲ್ಲಾ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಭೋದಕ ಮತ್ತು ಭೋದಕೇತರ ಸಿಬ್ಬಂದಿಗಳಿಗೆ/60 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಪ್ರಥಮ ಮತ್ತು 2ನೇ ಡೋಸ್ ಕೋವಿಡ್-19 ಲಸಿಕೆಯನ್ನು ಎಲ್ಲಾ ಸರಕಾರಿ ಆಸ್ಪತ್ರೆಗಳ ಲಸಿಕಾ ಕೇಂದ್ರಗಳಲ್ಲಿ ಪ್ರಥಮ ಆದ್ಯತೆಯ ಮೇರೆಗೆ ನೀಡಲಾಗುವುದು. ಹಾಗೆ 18 ವರ್ಷ ಮೇಲ್ಪಟ್ಟವರಿಗೆ […]

ಉಡುಪಿ: ಬಿ.ಆರ್.ಶೆಟ್ಟಿ ಆಸ್ಪತ್ರೆಯ ನೌಕರರ ವಜಾಕ್ಕೆ ದಸಂಸ ಖಂಡನೆ; ಮರುನೇಮಕಕ್ಕೆ ಒತ್ತಾಯ

ಉಡುಪಿ: ಬಿ.ಆರ್.ಶೆಟ್ಟಿ ಆಸ್ಪತ್ರೆಯಲ್ಲಿ 5 ತಿಂಗಳಿಂದ ವೇತನ ಕೊಡದೇ ದುಡಿಸಿಕೊಂಡು ನಂತರ ನೌಕರರನ್ನು ನೌಕರಿಯಿಂದ ವಜಾ ಗೊಳಿಸಿದ ಕ್ರಮವನ್ನು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತೀವ್ರವಾಗಿ ಖಂಡಿಸುತ್ತದೆ‌. ಆಸ್ಪತ್ರೆಯ ಆಡಳಿತ ಮಂಡಳಿ ತಕ್ಷಣವೇ ವಜಾಗೊಳಿಸಿದ ನೌಕರರನ್ನು ವಾಪಾಸ್ ನೌಕರಿಗೆ ಸೇರಿಸಿಕೊಂಡು ಬಾಕಿ ವೇತನವನ್ನು ಪಾವತಿಸಬೇಕು. ಜಿಲ್ಲಾಧಿಕಾರಿ ಅವರು ಈ ಕೂಡಲೇ ಮಧ್ಯೆ ಪ್ರವೇಶಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಒತ್ತಾಯಿಸಿದ್ದಾರೆ. ಇಂದು ಸಂತ್ರಸ್ತ ನೌಕರರನ್ನು ಸ್ಥಳದಲ್ಲಿ ಭೇಟಿಯಾಗಿ ಧೈರ್ಯ ತುಂಬಿ […]

ಭಾರತದಲ್ಲಿ ಯಾಹೂ ವೆಬ್ ಸೈಟ್ ನ ಜಾಲತಾಣಗಳು ಸ್ಥಗಿತ.!

ನವದೆಹಲಿ: ಯಾಹೂ ವೆಬ್ ಸೈಟ್ ನ ಕೆಲವು ಸುದ್ದಿ ಜಾಲತಾಣಗಳು ಭಾರತದಲ್ಲಿ ಸ್ಥಗಿತಗೊಳ್ಳಲಿದೆ. ಯಾಹೂ ನ್ಯೂಸ್‌, ಯಾಹೂ ಕ್ರಿಕೆಟ್‌, ಹಣಕಾಸು, ಮನರಂಜನೆ ಮತ್ತು ಮೇಕರ್ಸ್‌ ಇಂಡಿಯಾ ಸೇರಿದಂತೆ ಹಲವು ಜಾಲತಾಣಗಳು ಭಾರತದಲ್ಲಿ ಸ್ಥಗಿತವಾಗಲಿದೆ. ಆದರೆ ಕಂಪನಿಯ ಈ ಕ್ರಮದಿಂದ ಯಾಹೂ ಇ–ಮೇಲ್ ಹಾಗೂ ಸರ್ಚ್‌ ಎಂಜಿನ್‌ ಬಳಕೆದಾರರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕಂಪನಿ ತಿಳಿಸಿದೆ. ವಿದೇಶಿ ನೇರ ಬಂಡವಾಳ ಹೂಡಿಕೆಯ (ಎಫ್‌ಡಿಐ) ಹೊಸ ನಿಯಮಗಳ ಪ್ರಕಾರ ಭಾರತದಲ್ಲಿ ಡಿಜಿಟಲ್‌ ಮಾಹಿತಿ ಪ್ರಕಟಿಸುವ ಮತ್ತು ನಿರ್ವಹಿಸುವ ಮಾಧ್ಯಮ ಕಂಪನಿಗಳಲ್ಲಿ ವಿದೇಶಿ […]