ನಾಳೆ (ಆ.7) ಉಡುಪಿ-ಮಂಗಳೂರು ಮಧ್ಯೆ ಖಾಸಗಿ ಬಸ್ ಸಂಚಾರ ಎಂದಿನಂತೆ ಇರಲಿದೆ:ರಾಜವರ್ಮ ಬಲ್ಲಾಳ್

ಉಡುಪಿ: ಗಡಿ ಜಿಲ್ಲೆಯಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ (ಆ.7) ವೀಕೆಂಡ್ ಕರ್ಫ್ಯೂ ಜಾರಿಯಾದರೂ ಉಡುಪಿ-ಮಂಗಳೂರು ಸರ್ಕಾರಿ ಹಾಗೂ ಖಾಸಗಿ ಬಸ್ ಸಂಚಾರ ಎಂದಿನಂತೆ ಇರಲಿದೆ. ಉಡುಪಿ-ಮಂಗಳೂರು ಮಧ್ಯೆ ಖಾಸಗಿ ಬಸ್ ಸಂಚಾರ ಎಂದಿನಂತೆ ಇರಲಿದೆ. ಎಂದಿನಂತೆ ಬಸ್ ಸಂಚರಿಸಲು ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದಾರೆ ಎಂದು ಕೆನರಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಕೆ ರಾಜವರ್ಮ ಬಲ್ಲಾಳ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ನೂತನ ಸಚಿವರಿಗೆ ಅಭಿನಂದನೆ

ಉಡುಪಿ: ಉಡುಪಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿಕೊಂಡು, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಸಹಕಾರದೊಂದಿಗೆ ಅಭಿವೃದ್ಧಿಯ ಪರ್ವವನ್ನು ಆರಂಭಿಸಲಾಗುವುದು ಎಂದು ನೂತನ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು. ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಶುಕ್ರವಾರ ಅಂಬಾಗಿಲು ಅಮೃತ್ ಗಾರ್ಡನ್‌ನಲ್ಲಿ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮುಖ್ಯಮಂತ್ರಿ ನೀಡುವ ಯಾವುದೇ ಖಾತೆಯನ್ನು ಪ್ರಾಮಾಣಿಕವಾಗಿ ನಿಭಾಯಿಸಲಾಗುವುದು. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಒಂದಾಗಿ ಒಟ್ಟಾಗಿ ನಮ್ಮಲ್ಲಿರುವ ಎಲ್ಲ ಅಧಿಕಾರ ಮತ್ತು ಹೊಣೆಗಾರಿಕೆಯನ್ನು ಜಿಲ್ಲೆಯ ಅಭಿವೃದ್ಧಿಗೆ ಬಳಸಿಕೊಳ್ಳಬೇಕಾಗಿದೆ ಎಂದು […]

ಆಸಕ್ತರು ಭಾಗವಹಿಸಿ: ಕಿರುಚಿತ್ರ ಸ್ಪರ್ಧೆ-ಸಂವಾದ ಕಾರ್ಯಾಗಾರ

ಉಡುಪಿ: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ವತಿಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯು ಖುಷಿಯೋಂಕಾ ಆಶಿಯಾನಾ ವಿಷಯಾಧಾರಿತ ಕಿರುಚಿತ್ರ ಸ್ಪರ್ಧೆ ಹಾಗೂ  ಆವಾಸ್ ಪರ್ ಸಂವಾದ್ ಎಂಬ ವಿಷಯದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಕಾರ್ಯಾಗಾರದನ್ವಯ ಶಿಕ್ಷಣ ಸಂಸ್ಥೆಗಳು/ ಪ್ರಾಥಮಿಕ ಹಣಕಾಸು ಸಂಸ್ಥೆಗಳು ಕಾರ್ಯಾಗಾರದಲ್ಲಿ ನೋಂದಾಯಿಸಬೇಕು. ಆಯ್ಕೆಯಾದ ಸಂಸ್ಥೆಗೆ ಸರ್ಕಾರದಿಂದ ಆರ್ಥಿಕ ನೆರವು ದೊರೆಯುತ್ತದೆ. ಆಸಕ್ತರು ಪಿಎಂಎವೈ(ಯು) ಅಂತರ್ಜಾಲ ತಾಣದಲ್ಲಿ ನೋಂದಾಯಿಸಿ ತಾವು ಚಿತ್ರೀಕರಿಸಿದ ಕಿರುಚಿತ್ರವನ್ನು ಆಪ್ ಲೋಡ್ ಮಾಡಲು ಸೆಪ್ಟೆಂಬರ್ 10 ಕೊನೆಯ ದಿನ. ಹೆಚ್ಚಿನ […]

“ಡ್ರೀಮ್ ಆಫ್ ಗೋವಾ” ಇದು ಕರಾವಳಿ ಯುವ ತಂಡದ ಕ್ರಿಯೇಟಿವ್ ಪ್ರಯತ್ನ

ಕರಾವಳಿ ಯುವಕರು ಸೇರಿಕೊಂಡು  ಗೋವಾದಲ್ಲಿ ಚಿತ್ರೀಕರಿಸಲಾದ ಕನ್ನಡ ಕಾಮಿಡಿ ಆಲ್ಬಮ್ ಸಾಂಗ್ “ಡ್ರೀಮ್ ಆಫ್ ಗೋವಾ”. ಕೆಸಿ ಕ್ರಿಯೇಷನ್ ಅರ್ಪಿಸುವ ಆಲ್ಬಮ್ ಸಾಂಗ್ ಗೆ ಕೆ ಸಿ ಕ್ರಿಯೇಷನ್ ಕಥೆ ಹಾಗೂ ನಿರ್ಮಾಣವಿದೆ. ವಿಡಿಯೋಗ್ರಫಿ ಎಡಿಟಿಂಗ್ ಮತ್ತು ಡೈರೆಕ್ಷನ್ ಗೆ ಅನಿಶ್ ಕಿನ್ನಿಗೋಳಿ ಅವರ ಸ್ಪರ್ಶವಿದೆ , ಸಂಗೀತ ನಿರ್ದೇಶನಕ್ಕೆ ಅಭಿಜಿತ್ ಅಳದಂಗಡಿ ಮತ್ತು ಹಾಡುಗಾರಿಕೆಯಲ್ಲಿ ಸರಿಗಮಪ ಫೇಮ್ ಸಂತೋಷ್ ಬೆಂಗಳೂರು ಇವರ ಛಾಪಿದೆ. ಪೋಸ್ಟರ್ ಡಿಸೈನರ್ ಹರೀಶ್ ಉಪ್ಪಿನಂಗಡಿ ಕೊರಿಯೋಗ್ರಾಫರ್ ಮೋಹಿತ್ ಕುಲಾಲ್. ಡ್ರೋನ್ ಶೂಟ್ […]

ರಾಜ್ಯಾದ್ಯಂತ ನೈಟ್ ಕರ್ಫ್ಯೂ, ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ; ಹೊಸ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರವು ಕೇರಳ, ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಹಾಗೂ ರಾಜ್ಯದಾದ್ಯಂತ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಇದೀಗ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಮಾರ್ಗಸೂಚಿಯಲ್ಲಿ ಏನಿದೆ..? ಕೇರಳ, ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಮಹಾರಾಷ್ಟ್ರ ಗಡಿ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಕಲ್ಬುರ್ಗಿ ಮತ್ತು ಕೇರಳ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಮೈಸೂರು, […]