ಉಡುಪಿ: ಜಿಲ್ಲಾ ಯುವ ಮಂಡಳ ಪ್ರಶಸ್ತಿ; ಅರ್ಜಿ ಆಹ್ವಾನ
ಉಡುಪಿ: ಕೇಂದ್ರ ಸರಕಾರದ ನೆಹರು ಯುವ ಕೇಂದ್ರ, ಜಿಲ್ಲಾ ಕಚೇರಿಯ ವತಿಯಿಂದ 2020-21 ನೇ ಸಾಲಿನ ಜಿಲ್ಲಾ ಯುವ ಮಂಡಳಿ ಪ್ರಶಸ್ತಿಗೆ, ಯುವ ಮಂಡಳಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾ ನೊಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಾವಣೆಯಾಗಿರುವ ಯುವಕ, ಯುವತಿ ಮಂಡಳಿಗಳು, ನೆಹರು ಯುವ ಕೇಂದ್ರದಲ್ಲಿ ಸಂಯೋಜನೆ ಹೊಂದಿರಬೇಕು. 2020-21 ನೇ ಸಾಲಿನಲ್ಲಿ ಗ್ರಾಮ, ಪಟ್ಟಣ ಹಾಗೂ ತಾಲೂಕು ಅಭಿವೃದ್ಧಿಗಾಗಿ ಜನಪರ ಕರ‍್ಯಕ್ರಮಗಳನ್ನು ನಡೆಸಿರುವ (ಮಾಹಿತಿಯು 2020 ಏಪ್ರಿಲ್ 01 ರಿಂದ ಪ್ರಸಕ್ತ ಸಾಲಿನ ಮಾರ್ಚ್ 31 ರ ಒಳಗಿರಬೇಕು), ಯುವ […]
ಕಾರ್ಕಳದ ಉಪನ್ಯಾಸಕ, ಸಾಹಿತಿ ಡಾ.ಸುರೇಶ ಮರಿಣಾಪುರ ಇನ್ನಿಲ್ಲ
ಕಾರ್ಕಳ: ಸಾಹಿತಿ, ಉಪನ್ಯಾಸಕ, ತುಳುನಾಡಿನ ಜಾನಪದ ಮತ್ತು ದೈವಾರಾಧನೆಯ ಬಗ್ಗೆ ಆಳವಾದ ಪಾಂಡಿತ್ಯ ಹೊಂದಿದ್ದ ಕಾರ್ಕಳದ ಡಾ. ಮರಿಣಾಪುರ ಸುರೇಶ(ಮಸುಮಾ)(47)ಅವರು ಗುರುವಾರ ಅಸೌಖ್ಯದಿಂದ ನಿಧನ ಹೊಂದಿದ್ದಾರೆ. ಅವರು ಕೆಲವು ತಿಂಗಳಿಂದ ಅನಾರೋಗ್ಯಕ್ಕೊಳಗಾಗಿದ್ದರು. ಉಡುಪಿ ಜಿಲ್ಲೆಯ ಹೆಬ್ರಿ, ಕಾರ್ಕಳದ ಎಂಪಿಎಂ ಕಾಲೇಜಿನಲ್ಲಿ, ಮೂಲ್ಕಿಯ ವಿಜಯ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ೧೫ ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ನೇರ ನಡೆ ನುಡಿಯವರಾದ ಇವರು ಕಾದಂಬರಿ, ಕವನ ಸಂಕಲನ, ಕತಾ ಸಂಕಲನ ಸೇರಿದಂತೆ ಹಲವು […]
ಮುನಿಯಾಲ್ ಆಯುರ್ವೇದ ಕಾಲೇಜು: ವನಮಹೋತ್ಸವ ಸಪ್ತಾಹ
ಉಡುಪಿ: ಮುನಿಯಾಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲ ಇವರಿಂದ ಗುರುಪೂರ್ಣಿಮೆ ಮತ್ತು ವನಮಹೋತ್ಸವ ಸಪ್ತಾಹ ಪ್ರಯುಕ್ತ ಉಡುಪಿ ಜಿಲ್ಲೆಯ ಸಾರ್ವಜನಿಕರಿಗೆ ಉಚಿತವಾಗಿ ಉಪಯುಕ್ತ ಔಷಧೀಯ ಗಿಡಗಳ ವಿತರಣಾ ಕಾರ್ಯಕ್ರಮವನ್ನು ಜು.24 ರಂದು ಶನಿವಾರ ಹಮ್ಮಿಕೊಳ್ಳಲಾಗಿತ್ತು. ವಿವಿಧ ಜಾತಿಯ ರೋಗನಿರೋಧಕ ಶಕ್ತಿಯುಳ್ಳ ಅಮೃತ , ನೆಲ್ಲಿಕಾಯಿ ಮತ್ತು ಲಕ್ಷ್ಮೀತರು, ಹಣ್ಣುಹಂಪಲುಗಳಾದ ಪೇರಳೆ, ನೆಲ್ಲಿ, ಪುನರ್ ಪುಳಿ ಮತ್ತು ಔಷಧೀಯ ಗಿಡಗಳಾದ ಬಿಲ್ವ, ಹೊಂಗೆ , ನೇರಳೆ, ಅಂಟುವಾಳ, ಅಶೋಕ, ರೆಂಜೆ, ಕಾಡುಬಾದಾಮಿ, ತೇಗ, ಹುಣಸೆ, ಸಂಧುಬೀಳು, ಹಿಪ್ಪಲಿ, […]
ಒಲಿಂಪಿಕ್ಸ್ ಹಾಕಿ: ಅರ್ಜೆಂಟೈನಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಟೋಕಿಯೋ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತೀಯ ಪುರುಷರ ಹಾಕಿ ತಂಡವು ಗುರುವಾರ ಗ್ರೂಪ್ ಹಂತದ ನಾಲ್ಕನೇ ಪಂದ್ಯದಲ್ಲಿ ಪ್ರಬಲ ಅರ್ಜೆಂಟೈನಾ ವಿರುದ್ಧ 3-1 ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಕ್ವಾರ್ಟರ್ ಫೈನಲ್’ಗೆ ಲಗ್ಗೆ ಇಟ್ಟಿದೆ. 2016ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಅರ್ಜೆಂಟಿನಾವನ್ನು ಮನ್ಪ್ರೀತ್ ಸಿಂಗ್ ಪಡೆ 3-1 ಗೋಲುಗಳ ಅಂತರದಿಂದ ಸೋಲು ಕಾಣುವಂತೆ ಮಾಡಿದೆ. ಇದರಂತೆ ಭಾರತ ಕ್ವಾರ್ಟರ್ ಫೈನಲ್ನಲ್ಲಿ ಜುಲೈ 30 ರಂದು ಜಪಾನ್ ವಿರುದ್ಧ ಸೆಣೆಸಾಡಲಿದೆ.