HomeTrendingಒಲಿಂಪಿಕ್ಸ್‌ ಹಾಕಿ: ಅರ್ಜೆಂಟೈನಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಒಲಿಂಪಿಕ್ಸ್‌ ಹಾಕಿ: ಅರ್ಜೆಂಟೈನಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಟೋಕಿಯೋ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತೀಯ ಪುರುಷರ ಹಾಕಿ ತಂಡವು ಗುರುವಾರ ಗ್ರೂಪ್ ಹಂತದ ನಾಲ್ಕನೇ ಪಂದ್ಯದಲ್ಲಿ ಪ್ರಬಲ ಅರ್ಜೆಂಟೈನಾ ವಿರುದ್ಧ 3-1 ಗೋಲುಗಳಿಂದ  ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಕ್ವಾರ್ಟರ್‌ ಫೈನಲ್‌’ಗೆ ಲಗ್ಗೆ ಇಟ್ಟಿದೆ.

2016ರ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದಿದ್ದ ಅರ್ಜೆಂಟಿನಾವನ್ನು ಮನ್​ಪ್ರೀತ್ ಸಿಂಗ್ ಪಡೆ 3-1 ಗೋಲುಗಳ ಅಂತರದಿಂದ ಸೋಲು ಕಾಣುವಂತೆ ಮಾಡಿದೆ. ಇದರಂತೆ ಭಾರತ ಕ್ವಾರ್ಟರ್​ ಫೈನಲ್​ನಲ್ಲಿ ಜುಲೈ 30 ರಂದು ಜಪಾನ್ ವಿರುದ್ಧ ಸೆಣೆಸಾಡಲಿದೆ.

error: Content is protected !!