ನನ್ನ ಸಾಧನೆಗೆ ಮತ್ತೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ: ಕೋಟ ಶ್ರೀನಿವಾಸ ಪೂಜಾರಿ
ಮಂಗಳೂರು: ನಾನು ಸಚಿವನಾಗಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಎರಡೂ ಖಾತೆಗಳಲ್ಲೂ ಒಳ್ಳೆಯ ಕೆಲಸ ಮಾಡಿದ್ದೇನೆ. ಹಾಗಾಗಿ ನನಗೆ ಮತ್ತೆ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೊಮ್ಮಾಯಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬೆನ್ನಲ್ಲೇ, ಬಿಎಸ್ವೈ ಸಂಪುಟದಲ್ಲಿದ್ದ ಕೆಲವು ಹಿರಿಯ ನಾಯಕರಿಗೆ ಕೋಕ್ ನೀಡಲಾಗುತ್ತಿದೆ ಅಂತಾ ಹೇಳಲಾಗಿದೆ. ಈ ಸಂಬಂಧ ಮಾಧ್ಯಮಗಳ ಜೊತೆ ಪ್ರತಿಕ್ರಿಯಿಸಿದ ಶ್ರೀನಿವಾಸ ಪೂಜಾರಿ ಅವರು, ಹೈಕಮಾಂಡ್ ನನ್ನ ಸಾಧನೆಯನ್ನು ಗಮನಿಸಿ ಮತ್ತೆ […]
ಪ್ರಮುಖ ಆಟಗಾರರು ಅಲಭ್ಯ: ಉಳಿದ 11 ಆಟಗಾರರನ್ನು ಒಗ್ಗೂಡಿಸಿಕೊಂಡು ಕಣಕ್ಕಿಳಿದ ಟೀಂ ಇಂಡಿಯಾ
ಕೊಲೊಂಬೊ: ಯುವ ಆಟಗಾರರ ಸಾಮರ್ಥ್ಯ ಪರೀಕ್ಷೆ ನಡೆಸಲು ಶ್ರೀಲಂಕಾ ಪ್ರವಾಸ ಕೈಗೊಂಡಿರುವ ಟೀಮ್ ಇಂಡಿಯಾಗೆ ಈಗ ಅನಿವಾರ್ಯವಾಗಿ ತನ್ನ ಎಲ್ಲಾ ಆಟಗಾರರ ಸೇವೆಯನ್ನು ಬಳಕೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಯಿತು. ಕೊರೊನಾ ವೈರಸ್ ಕಾರಣ ಪ್ರಮುಖ ಆಟಗಾರರು ಅಲಭ್ಯರಾದ್ದರಿಂದ ಉಳಿದ ಎಲ್ಲಾ ಆಟಗಾರರನ್ನು ಸೇರಿಸಿಕೊಂಡು ಶ್ರೀಲಂಕಾ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಕಣಕ್ಕಿಳಿಸಲಾಯಿತು. ಕೊಲೊಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಆತಿಥೇಯ ಶ್ರೀಲಂಕಾ ವಿರುದ್ಧದ ಟಿ20 ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾತನ್ನೆಲ್ಲಾ […]
ಉಡುಪಿ ನಗರಸಭೆಯ ತ್ಯಾಜ್ಯ ಸಾಗಾಟದ ವಾಹನ ಪಲ್ಟಿ; ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರು
ಮಣಿಪಾಲ: ತ್ಯಾಜ್ಯ ತುಂಬಿಸಿಕೊಂಡು ಸಾಗುತ್ತಿದ್ದ ನಗರಸಭೆಯ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಗೆ ಉರುಳಿಬಿದ್ದ ಘಟನೆ ಅಲೆವೂರು ಪ್ರಗತಿನಗರದ ಡಂಪಿಂಗ್ ಯಾರ್ಡ್ ರಸ್ತೆಯಲ್ಲಿ ಇಂದು ಮಧ್ಯಾಹ್ನ ವೇಳೆ ಸಂಭವಿಸಿದೆ. ಅದೃಷ್ಟವಶಾತ್ ವಾಹನದ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ. ಈ ತ್ಯಾಜ್ಯ ಸಂಗ್ರಹ ವಾಹನವು ಅಲೆವೂರು ಪ್ರಗತಿನಗರದ ಡಂಪಿಂಗ್ ಯಾರ್ಡ್ ನಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಹೋಗುತ್ತಿದ್ದು, ಈ ವೇಳೆ ಪ್ರಗತಿನಗರದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕಕ್ಕೆ ಪಲ್ಟಿಯಾಗಿ ಬಿದ್ದಿದೆ ಎನ್ನಲಾಗಿದೆ. […]
ಜನಪರ ಆಡಳಿತದ ಭರವಸೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ; ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆಯ ಮೊತ್ತ ಏರಿಕೆ
ಬೆಂಗಳೂರು: ಮುಖ್ಯಮಂತ್ರಿ ಆದ ಬೆನ್ನಲ್ಲೇ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ರೈತರಿಗೆ, ಹಿರಿಯ ನಾಗರಿಕರಿಗೆ ಹಾಗೂ ವಿಧವೆಯರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕ ವೆಚ್ಚ ಕಡಿಮೆ ಮಾಡಲು ಎಲ್ಲಾ ಇಲಾಖೆಗಳ ವೆಚ್ಚವನ್ನು ಕನಿಷ್ಠ 5 ರಷ್ಟಾದರೂ ಕಡಿಮೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಅರ್ಜಿಗಳ ವಿಲೇವಾರಿಗೆ ತಡವಾಗುವುದನ್ನು ತಡೆಯಲು ವಿಶೇಷ ಯೋಜನೆ ಜಾರಿ ಮಾಡುತ್ತೇವೆ. 15 ದಿನಗಳಲ್ಲಿ ಹೊಸ ಯೋಜನೆ ಆರಂಭವಾಗಲಿದೆ. ಹೊಸ ದಿಸ್ಸೂಚಿಯಿಂದ ಆಡಳಿತದಲ್ಲಿ ದಕ್ಷತೆ ತರುವ, ಅಭಿವೃದ್ಧಿ ಕಾಮಗಾರಿಗೆ […]
ಚಿಕಿತ್ಸೆಗೆ ಬೇಕಿದೆ ಆರ್ಥಿಕ ನೆರವು: ದಾನಿಗಳ ಸಹಾಯದ ನಿರೀಕ್ಷೆಯಲ್ಲಿ ಬಡಕುಟುಂಬ
ಕಾರ್ಕಳ: ಇಲ್ಲಿನ ಕೌಡೂರು ಗ್ರಾಮದ ಮೈಂದಲಾಕ್ಯಾರ್ ಗುಡ್ಡೆ ಮನೆ ನಿವಾಸಿಯಾದ ದೊಡ್ಡಣ್ಣ ಪೂಜಾರಿ (50) ಅವರು ತ್ರೋಟ್ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು, 3 ಲಕ್ಷಕಿಂತಲೂ ಹೆಚ್ಚು ಬಿಲ್ ಪಾವತಿಸಿ ಮಣಿಪಾಲ್ ಕೆಎಂಸಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಮನೆಗೆ ಬಂದಿರುತ್ತಾರೆ. ಆದರೆ ಆರೋಗ್ಯ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿರುವುದರಿಂದ 45 ದಿನ ರೇಡಿಯೋ ಥೆರಪಿ ಮಾಡಲು ವೈದ್ಯರು ತಿಳಿಸಿರುವುದರಿಂದ ದಾನಿಗಳ ಸಹಾಯದ ನಿರೀಕ್ಷೆಯಲ್ಲಿ ಈ ಬಡ ಕುಟುಂಬ ಇದೆ. ತನ್ನ ಹೆಂಡತಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿರುವ ದೊಡ್ಡಣ್ಣ ಪೂಜಾರಿಯ […]