11ಇ ನಕಾಶೆಯ ಕುರಿತು ದ.ಕ ಜಿಲ್ಲೆಗೆ ನೀಡಿದ ಹೈ ಕೋಟ್೯ ಆದೇಶವನ್ನು ಪರಿಗಣಿಸಿ ಉಡುಪಿ ಜಿಲ್ಲೆಗೂ ಅನ್ವಯ ಮಾಡಿ : ಕ್ಸೇವಿಯರ್ ಡಿ ಮೆಲ್ಲೋ

ಉಡುಪಿ:‌ ದ.ಕ‌ ಜಿಲ್ಲೆ ವ್ಯಾಪ್ತಿಗೆ ಭೂ ಪರಿವರ್ತನೆ ಸಂದರ್ಭದಲ್ಲಿ 11 ಇ ನಕಾಶೆ ಅಗತ್ಯ ಇಲ್ಲ ಎಂದು  ಹೈ ಕೋಟ್೯ ನೀಡಿದ ಆದೇಶವನ್ನು ಪರಿಗಣಿಸಿ ಉಡುಪಿ ‌ಜಿಲ್ಲೆಗೂ ಅನ್ವಯವಾಗುವಂತೆ ಈ ಬಗ್ಗೆ‌ ಜಿಲ್ಲಾಡಳಿತ ಗಮನ ಕೊಡುವಂತೆ ಸಾಮಜಿಕ ಹೋರಾಟಗಾರ, ಪ್ರಗತಿಪರ ಚಿಂತಕ ಬೆಳ್ಮಣ್ಣು ಕ್ಸೇವಿಯರ್ ಡಿ ಮೆಲ್ಲೋ ಮನವಿ ಮಾಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕೃಷಿತೇರ ಚಟುವಟಿಕೆ ಸಂದರ್ಭದಲ್ಲಿ ಭೂ ಪರಿವರ್ತನೆ ಮಾಡಬೇಕಾದಲ್ಲಿ ಸ್ಥಳೀಯ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ಹಾಗೂ ಸರ್ವೇ ಇಲಾಖೆಯಿಂದ 11ಇ ನಕ್ಷೆ ಯನ್ನು ಹಾಜರು […]

ಉಡುಪಿ: ಕೊರೊನಾ ಸೋಂಕಿತರ ಮನೆ ಸೀಲ್‌ಡೌನ್‌ ಬದಲು ಕಂಟೈನ್‌ಮೆಂಟ್ ಝೋನ್

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ದರವು ನಿರೀಕ್ಷಿತ ಪ್ರಮಾಣದಲ್ಲಿ ಇಳಿಕೆ ಆಗದಿರಲು ಬಹುತೇಕ ಮಂದಿ ಹೋಮ್ ಐಸೋಲೇಶನ್‌ನಲ್ಲಿ ಇರುವುದೇ ಕಾರಣ. ಹಾಗಾಗಿ ಮನೆಯಲ್ಲಿರುವ ಸೋಂಕಿತರನ್ನು ಆಸ್ಪತ್ರೆ ಅಥವಾ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸುವ ಕಾರ್ಯ ಮಾಡಬೇಕು. ಕೇವಲ ಸೋಂಕಿತರ ಮನೆ ಸೀಲ್‌ಡೌನ್ ಮಾಡುವುದನ್ನು ಬಿಟ್ಟು ಸುತ್ತಲಿನ ನಾಲ್ಕೈದು ಮನೆಗಳನ್ನು ಸೇರಿಸಿ ಕಂಟೈನ್‌ಮೆಂಟ್ ಝೋನ್ ಮಾಡಬೇಕು ಎಂದು ಸಚಿವ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ […]

ಉಡುಪಿ: ತೆರಿಗೆ ಪಾವತಿಸದೆ ಸಾರ್ವಜನಿಕ ಸೇವೆಗೆ ಬಳಕೆ; ಖಾಸಗಿ ಬಸ್ ಮುಟ್ಟುಗೋಲು

ಉಡುಪಿ: ವಾಹನ ತೆರಿಗೆ ಪಾವತಿಸದೆ, ಅಧ್ಯರ್ಪಣದಿಂದ ಬಿಡುಗಡೆಗೊಳಿಸಿಕೊಳ್ಳದೆ ಜೂನ್ 28ರಂದು ಉಡುಪಿಯಿಂದ ಹೆಬ್ರಿ ಕಡೆಗೆ ಖಾಸಗಿ ಕಂಪನಿಯ ನೌಕರರನ್ನು ಸಾರ್ವಜನಿಕ ರಸ್ತೆಯ ಮೇಲೆ ಕೊಂಡೊಯ್ಯುತ್ತಿದ್ದ KA51-B9646 ನೋಂದಣಿ ಸಂಖ್ಯೆಯ ಎಸ್ ವಿಟಿ ಖಾಸಗಿ ಬಸ್ ಅನ್ನು ಆರ್ ಟಿಒ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಆರ್ ಟಿಒ ಕಾನೂನು ಉಲ್ಲಂಘಿಸಿ ಬಸ್ ಸಂಚರಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ತಪಾಸಣೆ ನಡೆಸಿದ ಅಧಿಕಾರಿಗಳು ಸದರಿ ವಾಹನವನ್ನು ಮುಟ್ಟುಗೋಲು ಹಾಕಿಕೊಂಡು, ವಾಹನದಲ್ಲಿದ್ದ ಪ್ರಯಾಣಿಕರನ್ನು ಅವರವರ ನಿವಾಸಕ್ಕೆ ಬಿಟ್ಟು ತದನಂತರ […]

‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ‘ ಯೋಜನೆಯನ್ನು ಜುಲೈ 31ರವರೆಗೆ ಮುಂದುವರಿಸಿ: ಸುಪ್ರೀಂ ಕೋರ್ಟ್

ನವದೆಹಲಿ: ಕೋವಿಡ್–19 ಸೋಂಕಿನ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ಸೇರಿದಂತೆ ದೇಶದ ಎಲ್ಲ ಬಡವರ್ಗದವರಿಗೂ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ‘ ಉಚಿತ ಪಡಿತರ ನೀಡುವ ಯೋಜನೆಯನ್ನು ದೇಶದಾದ್ಯಂತ ಜುಲೈ 31ರವರೆಗೆ ಮುಂದುವರಿಸುವಂತೆ ಸುಪ್ರೀಂ ಕೋರ್ಟ್‌ ಮಂಗಳವಾರ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ಕೋವಿಡ್‌ ಎರಡನೇ ಅಲೆಯ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರಿಗೆ ಆಹಾರ ಭದ್ರತೆ, ಮತ್ತಿತರ ಸೌಲಭ್ಯಗಳನ್ನು ನೀಡಲು ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನ ನೀಡುವಂತೆ ಕೋರಿ […]

ಉಡುಪಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತೆ ಸರ್ಕಾರದ ಸುಪರ್ದಿಗೆ.!

ಉಡುಪಿ: ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಸರಕಾರವೇ ಮುನ್ನಡೆಸಲು ಆರೋಗ್ಯ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಗೃಹ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್. ಶೆಟ್ಟಿಯವರ ಮಾಲೀಕತ್ವದ ಕಂಪೆನಿ ಈವರೆಗೂ […]