ಕೊಡವೂರು ಕಲ್ಮತ್ ಮಸೀದಿ ಭೂ ವಿವಾದ: ಪ್ರಮೋದ್ ಮಧ್ವರಾಜ್ ಸ್ಪಷ್ಟನೆ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಕೊಡವೂರು ಗ್ರಾಮದ ಸರಕಾರಿ ಜಾಗದ ಸರ್ವೇ ನಂ 53/6 ರಲ್ಲಿನ 67ಸೆಂಟ್ಸ್ ಜಾಗವನ್ನು ಕಲ್ಮತ್ ಮಸೀದಿಗೆ ಹಸ್ತಾಂತರ ಮತ್ತು ರದ್ದತಿ ಮಾಡಿರುವ ಪ್ರಕ್ರಿಯೆಗಳಲ್ಲಿ ನನ್ನ ಯಾವುದೇ ರೀತಿಯ ಹಸ್ತಕ್ಷೇಪ ಇಲ್ಲ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸ್ಪಷ್ಟಪಡಿಸಿದ್ದಾರೆ. ನಾನು ಶಾಸಕನಾಗಿದ್ದಾಗ ವಕ್ಫ್ ಬೋರ್ಡ್ ನ ಮುಖಾಂತರ ಕಲ್ಮತ್ ಮಸೀದಿ ಹೆಸರಿಗೆ 67ಸೆಂಟ್ಸ್ ಸರ್ಕಾರಿ ಜಾಗ ವರ್ಗಾಯಿಸಿದ್ದೇನೆ ಎನ್ನುವ ಆಪಾದನೆಯ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ಯಾವುದೇ ಹುರುಳಿಲ್ಲ. ಇದು […]

ಸಾಲ ಬಾಧೆ ತಾಳಲಾರದೆ ಒಂದೇ ಕುಟುಂಬದ ಆರು ಮಂದಿ ಆತ್ಮಹತ್ಯೆ

ಯಾದಗಿರಿ: ಸಾಲ ಬಾಧೆ ತಾಳಲಾರದೆ ಒಂದೇ ಕುಟುಂಬದ ಆರು ಮಂದಿ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಹಾಪುರ ತಾಲ್ಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಇಂದು ನಡೆದಿದೆ. ಮೃತರನ್ನು ಭೀಮರಾಯ ಸುರಪುರ (45), ಶಾಂತಮ್ಮ ಸುರಪುರ (36), ಸುಮಿತ್ರಾ (12), ಶ್ರೀದೇವಿ (13), ಶಿವರಾಜ (9), ಲಕ್ಷ್ಮೀ (4) ಎಂದು ಗುರುತಿಸಲಾಗಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಭೀಮರಾಯ ಅವರು ವಿಪರೀತ ಸಾಲ ಮಾಡಿಕೊಂಡಿದ್ದರು. ಅದನ್ನು ತೀರಿಸಲಾಗದೇ ಇಡೀ ಕುಟುಂಬವೇ ಆತ್ಮಹತ್ಯೆಗೆ ಶರಣಾಗಿದೆ ಎನ್ನಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ, […]

ಸಂಸದ ನಳಿನ್ ಕುಮಾರ್ ಕಟೀಲ್ ಸಹೋದರ ನಿಧನ

ಪುತ್ತೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಸಂಸದ ನಳಿನ್‌ ಕುಮಾರ್‌ ಕಟಿಲ್‌ ಅವರ ಸಹೋದರ ಪಾಲ್ತಾಡಿ ಗ್ರಾಮದ ಕುಂಜಾಡಿ ನಿವಾಸಿ ನವಿನ್‌ ಕುಮಾರ್‌ (57 ) ಇಂದು ಸಂಜೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ತಾಯಿ ಸುಶೀಲಾವತಿ, ಪತ್ನಿ ಗೀತಾ, ಪುತ್ರಿ ಸಮೃದ್ಧಿ, ಸಹೋದರ ನಳಿನ್‌ ಕುಮಾರ್‌ ಕಟೀಲ್‌, ಸಹೋದರಿ ನಂದಿನಿ ಅವರನ್ನು ಅಗಲಿದ್ದಾರೆ.

ರಿಕ್ಷಾ ಚಾಲಕನ ಅಚ್ಚರಿಯ ಬಣ್ಣದ ಬದುಕು: ಬೆಳ್ಳಿತೆರೆ, ಕಿರುತೆರೆ ಎರಡರಲ್ಲೂ ಸೈ , ಬಹುಭಾಷಾ ನಟನೆಗೂ ಜೈ

ಕ   ಳೆದ 25 ವರ್ಷಗಳಿಂದ ರಿಕ್ಷಾ ಓಡಿಸಿ ಶ್ರಮದ ದುಡಿಮೆ ಮೈಗೂಡಿಸಿಕೊಂಡಿದ್ದರೂ ಕಲೆಯ ಬದುಕಿನಿಂದ ಆಕರ್ಷಿತರಾಗಿ ಬೆಳ್ಳಿ ತೆರೆ, ಕಿರುತೆರೆಯಲ್ಲಿ ಪೋಷಕ ನಟನಾಗಿ ಹತ್ತಾರು ಚಿತ್ರಗಳಲ್ಲಿ ನಟಿಸಿ ಜನಮನ ಸೂರೆಗೊಂಡ ಕರಾವಳಿಯ ಅಪರೂಪದ ಕಲಾವಿದ ಸತೀಶ್ ಕಲ್ಯಾಣಪುರ. ಬಡತನದ ಬದುಕಿನ ಜಂಜಾಟದ ನಡುವೆ ಹವ್ಯಾಸಿ ನೆಲೆಯಲ್ಲಿ ಬಣ್ಣದ ಬದುಕಿಗೆ ಹೊರಳಿದ ಇವರು ಕನ್ನಡ, ತುಳು, ಕೊಂಕಣಿ, ಬ್ಯಾರಿ ಭಾಷೆಗಳ ಪೋಷಕ, ಹಾಸ್ಯ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಪ್ರತಿಭಾನ್ವಿತ, ಪರಿಪೂರ್ಣ ಕಲಾವಿದ. ತನ್ನದೆ ಚಿತ್ರ ಕಲಾ […]

ಉಡುಪಿ: ಫಲಿಸಿದ ಸೀಲ್ ಡೌನ್ ಅಸ್ತ್ರ; 24 ಗ್ರಾಪಂ ಕೊರೊನಾ ಮುಕ್ತ

ಉಡುಪಿ: ಕೋವಿಡ್ ಎರಡನೇ ಅಲೆ ನಗರ ಪ್ರದೇಶ ಮಾತ್ರವಲ್ಲ, ಗ್ರಾಮೀಣ ಭಾಗಕ್ಕೂ‌ ವಕ್ಕರಿಸಿತ್ತು. ಜೂನ್ 1ರ ವೇಳೆಗೆ ಜಿಲ್ಲೆಯ‌ 155 ಗ್ರಾಪಂಗಳ ಪೈಕಿ 33 ಗ್ರಾಪಂಗಳಲ್ಲಿ 50ಕ್ಕೂ ಅಧಿಕ ಸಕ್ರಿಯ ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು 33 ಗ್ರಾಪಂಗಳಲ್ಲಿ ಐದು ದಿನಗಳ ಕಾಲ ಕಂಪ್ಲೀಟ್ ಲಾಕ್ ಡೌನ್ (ಸೀಲ್ ಡೌನ್) ನಿಯಮ ಜಾರಿಗೊಳಿಸಿತು. ಜಿಲ್ಲಾಡಳಿತದ ಈ ದಿಟ್ಟ ಕ್ರಮದಿಂದ ಇದೀಗ 24 ಗ್ರಾಪಂಗಳು ಕೋವಿಡ್ ಮುಕ್ತವಾಗಿವೆ. ಜಿಲ್ಲೆಯಲ್ಲಿ ಕೊರೊನಾ ಸೋಂಕು ಗಣನೀಯವಾಗಿ ಇಳಿಕೆಯಾಗಿದ್ದು, 124 […]