ಸಂಸದ ನಳಿನ್ ಕುಮಾರ್ ಕಟೀಲ್ ಸಹೋದರ ನಿಧನ

ಪುತ್ತೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಸಂಸದ ನಳಿನ್‌ ಕುಮಾರ್‌ ಕಟಿಲ್‌ ಅವರ ಸಹೋದರ ಪಾಲ್ತಾಡಿ ಗ್ರಾಮದ ಕುಂಜಾಡಿ ನಿವಾಸಿ ನವಿನ್‌ ಕುಮಾರ್‌ (57 ) ಇಂದು ಸಂಜೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಮೃತರು ತಾಯಿ ಸುಶೀಲಾವತಿ, ಪತ್ನಿ ಗೀತಾ, ಪುತ್ರಿ ಸಮೃದ್ಧಿ, ಸಹೋದರ ನಳಿನ್‌ ಕುಮಾರ್‌ ಕಟೀಲ್‌, ಸಹೋದರಿ ನಂದಿನಿ ಅವರನ್ನು ಅಗಲಿದ್ದಾರೆ.