ಕಾನೂನು ರಕ್ಷಣೆ ಕಳೆದುಕೊಳ್ಳುವ ಭೀತಿಯಲ್ಲಿ ಟ್ವಿಟರ್.!

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಟ್ವಿಟರ್ ಭಾರತ ದೇಶದಲ್ಲಿ ಹೊಸ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳನ್ನು ಪಾಲಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಮಧ್ಯವರ್ತಿ ಮಾಧ್ಯಮ ಸ್ಥಾನಮಾನ ಕಳೆದುಕೊಳ್ಳುವ ಆತಂಕದಲ್ಲಿದೆ ಎಂದು ಸರ್ಕಾರಿ ಮೂಲಗಳಿಂದ ತಿಳಿದುಬಂದಿದೆ. ನಿಗದಿತ ಅವಧಿಯೊಳಗೆ ಸರ್ಕಾರದ ನಿಯಮಗಳಿಗೆ ಬದ್ಧತೆ ತೋರದಿದ್ದರೆ ಬಳಕೆದಾರರು ವಿಷಯಗಳನ್ನು ಅಥವಾ ಸಂದೇಶಗಳನ್ನು ಪ್ರಕಟಿಸುವ ಒಂದು ಮಧ್ಯವರ್ತಿಯಾಗಿ ಟ್ವಿಟರ್‌ ಅನ್ನು ಪರಿಗಣಿಸಲಾಗುವುದಿಲ್ಲ. ಬದಲಿಗೆ, ಯಾವುದೇ ಬಳಕೆದಾರರು ಪ್ರಕಟಿಸುವ ಎಲ್ಲ ಪೋಸ್ಟ್‌ಗಳಿಗೆ ಸ್ವತಃ ಟ್ವಿಟರ್ ಹೊಣೆಗಾರಿಕೆ ವಹಿಸಬೇಕಾಗುತ್ತದೆ. ಟ್ವಿಟರ್, ಹೊಸ ನಿಯಮಗಳಿಗೆ […]

ಬಿಗ್ ಬಾಸ್ ಎಂಟನೇ ಆವೃತ್ತಿಯ ಸೆಕೆಂಡ್ ಇನಿಂಗ್ಸ್ ಶೀಘ್ರದಲ್ಲೇ ಪುನರಾರಂಭ

ಬೆಂಗಳೂರು: ಕೋವಿಡ್ ಎರಡನೇ ಅಲೆಯಿಂದ ಅರ್ಧಕ್ಕೇ ಸ್ಥಗಿತವಾಗಿದ್ದ ಬಿಗ್‌ಬಾಸ್‌ ರಿಯಾಲಿಟಿ ಶೋನ ಎಂಟನೇ ಆವೃತ್ತಿ ಶೀಘ್ರದಲ್ಲೇ ಪುನರಾರಂಭವಾಗುವ ಬಗ್ಗೆ ಕಲರ್ಸ್ ಕನ್ನಡ ಕ್ಲಸ್ಟರ್ ಹೆಡ್ ಹಾಗೂ ಬಿಗ್ ಬಾಸ್ ಶೋನ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಸುಳಿವು ನೀಡಿದ್ದಾರೆ. ಬಿಗ್‌ಬಾಸ್‌ 8ನೇ ಆವೃತ್ತಿಯ ಎರಡನೇ ಇನಿಂಗ್ಸ್‌ ಇದೇ ಜೂನ್‌ನಲ್ಲೇ ಆರಂಭವಾಗುವ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ಗುಂಡ್ಕಲ್‌, ‘ಊರು ಸೇರಿದಾಗಲೇ ದಾರಿ ಮುಗಿಯುವುದು. ಮನೆ ಸೇರಿದಾಗಲೇ ಹಾದಿಯಲ್ಲಿ ಕಷ್ಟಪಟ್ಟಿದ್ದು ಸಾರ್ಥಕ […]

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದಿಂದ ವಿಶ್ವ ರಕ್ತದಾನಿಗಳ ದಿನಾಚರಣೆ

ಮಣಿಪಾಲ: ರಕ್ತದಾನ ಮತ್ತು ಸುರಕ್ಷಿತ ರಕ್ತ ಮತ್ತು ರಕ್ತ ಉತ್ಪನ್ನಗಳ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವತಿಯಿಂದ ವಿಶ್ವ ರಕ್ತದಾನಿಗಳ ದಿನ ಕಾರ್ಯಕ್ರಮ ಆಯೋಜಿಸಲಾಯಿತು. ಕೋವಿಡ್ -19 ನಿಯಮಾವಳಿಗಳನ್ನು ಅನುಸರಿಸಿ, ರಕ್ತದಾನಿಗಳನ್ನು ಪ್ರೇರೇಪಿಸಲು ಹೆಚ್ಚಿನ ಕೊಡುಗೆ ನೀಡಿದ ಜನರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಶರತ್ ಕೆ ರಾವ್ ಅವರು, ಈ ವರ್ಷದ ಧ್ಯೇಯವಾದ ‘ರಕ್ತ ನೀಡಿ […]

ಕಾಂಗ್ರೆಸ್ ಅಪಪ್ರಚಾರದ ಪ್ರತಿಭಟನೆ ಟೂಲ್‍ಕಿಟ್‍ನ ಮುಂದುವರಿದ ಭಾಗ: ಉಡುಪಿ ಜಿಲ್ಲಾ ಬಿಜೆಪಿ ಆರೋಪ

ಉಡುಪಿ: ಕೊರೊನಾ ಸಂಕಷ್ಟದಿಂದ ವಿಶ್ವವೇ ಕಂಗೆಟ್ಟಿದ್ದರೂ ಪ್ರಧಾನಿ ಮೋದಿ ಅವರ ಸಮರ್ಥ ನೇತೃತ್ವದಲ್ಲಿ ದೇಶದಾದ್ಯಂತ ಕೊರೊನಾ ನಿಯಂತ್ರಣದಲ್ಲಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರಕಾರದ ಎಲ್ಲ ನಡೆಗಳನ್ನು ಕೇವಲ ವಿರೋಧಕ್ಕಾಗಿ ವಿರೋಧಿಸುವ ಕಾಂಗ್ರೆಸ್, ಕೋವಿಡ್ ಲಸಿಕೆಯಿಂದ ಪ್ರಾರಂಭಗೊಂಡು ಎಲ್ಲ ವಿಚಾರಗಳಲ್ಲೂ ಅಪಪ್ರಚಾರದಲ್ಲಿ ತೊಡಗಿರುವುದು ನಾಚಿಕೆಗೇಡಿನ ವಿಚಾರವಾಗಿದೆ. ನಾಯಕತ್ವದ ಕೊರತೆಯಿಂದ ಸೊರಗಿರುವ ಕಾಂಗ್ರೆಸ್ ಇದೀಗ ಪೆಟ್ರೋಲ್ ಬೆಲೆ ಏರಿಕೆಯ ನೆಪವೊಡ್ಡಿ ಪೆಟ್ರೋಲ್ ಬಂಕ್‍ಗಳ ಎದುರು ನಾಟಕೀಯ ಪ್ರತಿಭಟನೆಗೈದು ತಪ್ಪು ಮಾಹಿತಿಗಳನ್ನು ನೀಡುವ ಮೂಲಕ ಜನತೆಯ ದಾರಿ ತಪ್ಪಿಸುವ ಪ್ರಯತ್ನದಲ್ಲಿ […]

ಕಾರ್ಕಳದ ಬೆಳ್ಮಣ್ ಸೇರಿದಂತೆ ಹಲವು ಕಡೆ ವಿದ್ಯುತ್ ನಿರಂತರ ಕಣ್ಣಾಮುಚ್ಚಾಲೆ: ಮೆಸ್ಕಾಂ ನ ಕಳಪೆ ವಿದ್ಯುತ್ ಸೇವೆ ವಿರುದ್ಧ ಹೋರಾಟದ ಎಚ್ಚರಿಕೆ!

ಕಾರ್ಕಳ: ತಾಲೂಕಿನಲ್ಲಿ ಬೆಳ್ಮಣ್, ನಂದಳಿಕೆ,ಸೂಡ,ಕೆದಿಂಜೆ, ಮುಲ್ಲಡ್ಕ, ಸಚ್ಚರಿಪೇಟೆ, ಬೋಳ, ನಿಟ್ಟೆ ಮೊದಲಾದ ಪ್ರದೇಶದಲ್ಲಿ ದಿನಕ್ಕೆ 20 ರಿಂದ 30 ಸಲ ವಿದ್ಯುತ್ ಕಣ್ಣಾಮುಚ್ಚಾಲೆ ಶುರುವಾಗಿದ್ದು ಮೆಸ್ಕಾಂ ತನ್ನ ಕಳಪೆ ಸೇವೆಗೆ ಮತ್ತೆ ಸುದ್ದಿಯಲ್ಲಿದೆ. ಈ ಭಾಗದಲ್ಲಿ ಕಳೆದ ಸುಮಾರು ಹತ್ತು ದಿನಗಳಿಂದ ಹೀಗೆ ನಿರಂತರ ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಿದ್ದು ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ. ಸ್ಥಳೀಯ ಮೆಸ್ಕಾಂ ಕೆಲಸಗಾರರು, ಕಾರ್ಕಳದ ಮೆಸ್ಕಾಂ ಅಧಿಕಾರಿಗಳ ಕರ್ತವ್ಯ, ಸೇವೆ ಎಷ್ಟೊಂದು ಕಳಪೆ ಮಟ್ಟದಲ್ಲಿದೆ ಎನ್ನುವುದನ್ನು ಈ ವ್ಯಾಪ್ತಿಯಲ್ಲಿನ ವಿದ್ಯುತ್ ನಿರ್ವಹಣೆ ನೋಡಿಯೇ ತಿಳಿಯಬೇಕು. […]