ಟಿವಿಎಸ್ ಐಕ್ಯೂಬ್ ಬೆಲೆ ₹11,250 ಇಳಿಕೆ
ನವದೆಹಲಿ: ಕೇಂದ್ರ ಸರ್ಕಾರವು ಫೇಮ್–2 ಯೋಜನೆಯಡಿ ಇ–ಸ್ಕೂಟರ್‌ಗಳ ಮೇಲಿನ ಸಬ್ಸಿಡಿಯಲ್ಲಿ ಹೆಚ್ಚಳ ಮಾಡಿದೆ. ಅದರಂತೆ ಟಿವಿಎಸ್ ಮೋಟರ್ ಕಂಪನಿಯು ತನ್ನ ವಿದ್ಯುತ್ ಚಾಲಿತ ಸ್ಕೂಟರ್ ಐಕ್ಯೂಬ್ ಬೆಲೆಯನ್ನು ₹ 11,250ರಷ್ಟು ಕಡಿತ ಮಾಡಿದೆ. ದೆಹಲಿಯಲ್ಲಿ ಈ ಸ್ಕೂಟರ್ ಬೆಲೆ ಮೊದಲು ₹ 1,12,027 ಇತ್ತು. ಈಗ ₹ 1,00,777ಕ್ಕೆ ಇಳಿಕೆ ಆಗಿದೆ.
ಬೈಲೂರು: ನಾಳೆ 45 ವರ್ಷ ಮೇಲ್ಪಟ್ಟವರಿಗೆ ಎರಡನೆ ಡೋಸ್ ಲಸಿಕಾ ಅಭಿಯಾನ
ಬೈಲೂರು: 2021ರ ಮಾರ್ಚ್ 23ಕ್ಕಿಂತ ಮೊದಲು ಕೋವಿಶಿಲ್ಡ್ ಮೊದಲ ಡೋಸ್ ಲಸಿಕೆ ಪಡೆದಿರುವ 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ನಾಳೆ (ಜೂನ್ 16) ಬೈಲೂರು ಸರ್ಕಾರಿ ಪ್ರೌಢಶಾಲೆಯ ಸಭಾಭವನದಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ಗಂಟೆಯವರೆಗೆ ಎರಡನೇ ಡೋಸ್ ಲಸಿಕೆ ನೀಡುವ ಕಾರ್ಯಕ್ರಮ ನಡೆಯಲಿದೆ. ಲಸಿಕೆ ಪಡೆದುಕೊಳ್ಳುವವರು ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು. ಮೊಬೈಲ್ ಸಂಖ್ಯೆ ಕೂಡ ಕಡ್ಡಾಯ. ಅಲ್ಲದೆ, ಸಾರ್ವಜನಿಕರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಒಂದೇ ಸರತಿ ಸಾಲಿನಲ್ಲಿ ನಿಂತು ಅತ್ಯಂತ ತಾಳ್ಮೆಯಿಂದ ಲಸಿಕೆ […]
ಮುಂದಿನ ಐದು ದಿನ ಕರಾವಳಿಯಲ್ಲಿ ಸುರಿಯಲಿದೆ ಭಾರೀ ಮಳೆ:ಹವಾಮಾನ ಇಲಾಖೆ ಮುನ್ಸೂಚನೆ
ಉಡುಪಿ:ಮುಂದಿನ ಐದು ದಿನಗಳ ಕಾಲ ಕರಾವಳಿಯಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.ಉಡುಪಿ ಜಿಲ್ಲೆಯ ಕರಾವಳಿ ಭಾಗದಲ್ಲೂ ಭಾರೀ ಮಳೆ ಸುರಿಯಲಿದ್ದು ಮೀನುಗಾರರಿಗೆ ಕಡಲಿಗಿಳಿಯದಂತೆ ಎಚ್ಚರಿಕೆ ನೀಡಲಾಗಿದ್ದು ಕರಾವಳಿಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.
ಭಾರತದಲ್ಲಿ ಲಸಿಕೆಯಿಂದ ಮೊದಲ ಸಾವು: ಖಚಿತ ಪಡಿಸಿದ ರಾಷ್ಟ್ರೀಯ ಸರ್ಕಾರಿ ಸಮಿತಿ!
ನವದೆಹಲಿ: ಕೊರೋನಾ ಲಸಿಕೆಯ ಅಡ್ಡಪರಿಣಾಮದಿಂದ 68 ವರ್ಷದ ವ್ಯಕ್ತಿಯೊಬ್ಬರು ಅನಾಫಿಲ್ಯಾಕ್ಸಿಸ್ ನಿಂದ ಮೃತಪಟ್ಟಿದ್ದಾನೆ ಎಂದು ಸರ್ಕಾರಿ ಸಮಿತಿ ದೃಢಪಡಿಸಿದೆ ಹೌದು ಲಸಿಕೆ ಪಡೆದ ನಂತರ ವ್ಯಕ್ತಿಯಲ್ಲಿ ಅಡ್ಡಪರಿಣಾಮವಾಗಿ ತೀವ್ರ ಅಲರ್ಜಿ ಪರಿಣಾಮ ಉಂಟಾಗಿದ್ದು ಇದರಿಂದಲೇ 2021ರ ಮಾರ್ಚ್ 8ರಂದು ಮೃತಪಟ್ಟಿರುವುದಾಗಿ ರಾಷ್ಟ್ರೀಯ ಎಇಎಫ್‌ಐ ಸಮಿತಿಯ ವರದಿಯಲ್ಲಿ ತಿಳಿಸಿದೆ. ಜನವರಿ 16 ಮತ್ತು 19ರಂದು ಲಸಿಕೆ ಪಡೆದಿದ್ದ ಇಬ್ಬರಿಗೂ ತೀವ್ರ ಅಲರ್ಜಿಯಾಗಿದ್ದು ಕೂಡಲೇ ಅವರು ಆಸ್ಪತ್ರೆಗೆ ದಾಖಲಾದ ನಂತರ ಚೇತರಿಸಿಕೊಂಡಿದ್ದಾರೆ ಎಂದು ಸಮಿತಿ ತಿಳಿಸಿದೆ. 31 ಪ್ರಕರಣಗಳ ಸಾಂದರ್ಭಿಕ […]
ದೇಶದಲ್ಲೇ ಚೊಚ್ಚಲ ಬಾರಿಗೆ ಮಹಿಳಾ ಸಿಬಂದಿಗಳಿಂದಲೇ ಎಂಜಿ ಹೆಕ್ಟೆರ್ ವಾಹನ ತಯಾರಿಕೆ !
ಬೆಂಗಳೂರು: ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯ 50,000 ಎಂಜಿ ಹೆಕ್ಟೇರ್ ವಾಹನಗಳ ಮೈಲಿಗಲ್ಲು ಸಾಧಿಸಿದೆ. ಇದರ ಜೊತೆಗೆ, 50 ಸಾವಿರದ ವಾಹನವನ್ನು ಸಂಪೂರ್ಣ ಮಹಿಳಾ ಸಿಬ್ಬಂದಿಯೇ ತಯಾರಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಇದು ದೇಶದಲ್ಲೇ ಇದೊಂದು ಪ್ರಥಮ ಪ್ರಯೋಗವಾಗಿದೆ. ಈ ವಾಹನದ ಆರಂಭದಿಂದ ಅಂತ್ಯದವರೆಗಿನ ಎಲ್ಲಾ ನಿರ್ಮಾಣ ಕಾರ್ಯಗಳಲ್ಲಿ ಶೀಟ್ ಮೆಟಲ್‌ನ ಪ್ಯಾನಲ್-ಪ್ರೆಸ್ಸಿಂಗ್ ಮತ್ತು ಪೇಂಟಿಂಗ್, ವೆಲ್ಡಿಂಗ್ ಜೊತೆಗೆ ಉತ್ಪಾದನೆಯ ನಂತರದ ಪರೀಕ್ಷಾರ್ಥ ಚಾಲನೆ ನಡೆಸುವವರೆಗೆ ಮಹಿಳೆಯರೇ ಕಾರ್ಯನಿರ್ವಹಿಸಿದ್ದಾರೆ. ಎಂಜಿ ಮೋಟಾರ್ ಇಂಡಿಯಾ ಗುಜರಾತ್‌ನ ಹಲೋಲ್ (ಪಂಚಮಹಲ್ […]