Home Trending ಬೈಲೂರು: ನಾಳೆ 45 ವರ್ಷ ಮೇಲ್ಪಟ್ಟವರಿಗೆ ಎರಡನೆ ಡೋಸ್ ಲಸಿಕಾ ಅಭಿಯಾನ

ಬೈಲೂರು: ನಾಳೆ 45 ವರ್ಷ ಮೇಲ್ಪಟ್ಟವರಿಗೆ ಎರಡನೆ ಡೋಸ್ ಲಸಿಕಾ ಅಭಿಯಾನ

ಬೈಲೂರು: 2021ರ ಮಾರ್ಚ್ 23ಕ್ಕಿಂತ ಮೊದಲು ಕೋವಿಶಿಲ್ಡ್ ಮೊದಲ ಡೋಸ್ ಲಸಿಕೆ ಪಡೆದಿರುವ 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ನಾಳೆ (ಜೂನ್ 16) ಬೈಲೂರು ಸರ್ಕಾರಿ ಪ್ರೌಢಶಾಲೆಯ ಸಭಾಭವನದಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ಗಂಟೆಯವರೆಗೆ ಎರಡನೇ ಡೋಸ್ ಲಸಿಕೆ ನೀಡುವ ಕಾರ್ಯಕ್ರಮ ನಡೆಯಲಿದೆ.

ಲಸಿಕೆ ಪಡೆದುಕೊಳ್ಳುವವರು ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು.‌ ಮೊಬೈಲ್ ಸಂಖ್ಯೆ ಕೂಡ ಕಡ್ಡಾಯ. ಅಲ್ಲದೆ, ಸಾರ್ವಜನಿಕರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಒಂದೇ ಸರತಿ ಸಾಲಿನಲ್ಲಿ ನಿಂತು ಅತ್ಯಂತ ತಾಳ್ಮೆಯಿಂದ ಲಸಿಕೆ ಪಡೆದುಕೊಳ್ಳಬೇಕು. ಕೋವಿಡ್ ನಿಯಮಾವಳಿಯನ್ನು ಪಾಲಿಸದೆ ನೂಕುನುಗ್ಗಲು ಮಾಡಿದಲ್ಲಿ ಲಸಿಕೆ ಕಾರ್ಯಕ್ರಮವನ್ನು ರದ್ದು ಪಡಿಸಲಾಗುವುದು.

ಸರತಿ ಸಾಲಿನಲ್ಲಿ ನಿಂತವರಿಗೆ ಮಾತ್ರ ಟೋಕನ್ ನೀಡಲಾಗುವುದು ಎಂದು ಬೈಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.