ಉಡುಪಿಯಲ್ಲೂ ಶುರುವಾಯ್ತು “ಅಂಚೆಮಿತ್ರ”ಯೋಜನೆ: ಮನೆಯಲ್ಲೇ ಕುಳಿತು ಅಂಚೆ ಸೇವೆ ಪಡೀರಿ

ಉಡುಪಿ: ಭಾರತೀಯ ಅಂಚೆ ಇಲಾಖೆ ಕೋವಿಡ್-19 ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಮನೆಯೊಳಗೆ ಕುಳಿತು ಅಂಚೆ ಇಲಾಖೆಯ ವ್ಯವಹಾರಗಳನ್ನು ನಡೆಸುವಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ‘ಅಂಚೆ ಮಿತ್ರ’ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಅದರ ಮುಖಾಂತರ ಮನೆಯಲ್ಲೇ ಕುಳಿತು ವೈಧ್ಯಕೀಯ ಪಾರ್ಸೆಲ್ ಪಿಕ್‌ಅಪ್‌ ಇತ್ಯಾದಿ ತುರ್ತು ಅಗತ್ಯಗಳಿಗೆ ಮನವಿ ಕಳುಹಿಸಬಹುದು. ಮನೆಯಲ್ಲೇ ಕುಳಿತು ಭಾರತೀಯ ಅಂಚೆ ಇಲಾಖೆಯ ಅಂಚೆ ಜೀವ ವಿಮೆ, ಗ್ರಾಮೀಣ ಅಂಚೆ ಜೀವ ವಿಮೆಗಳ ಆನ್ ಲೈನ್ ಪಾವತಿಗೆ ಮನವಿ ಸಲ್ಲಿಸಬಹುದಾಗಿದೆ.ಮನಿಯಾರ್ಡರ್ ಪಡೆಯಲು ಪಿಂಚಣಿದಾರರು ತಮ್ಮ […]

ಉಡುಪಿ ಜಿಲ್ಲೆ: ಆದ್ಯತೆ ಮೇರೆಗೆ ಬಸ್ಸು ಚಾಲಕ/ ನಿರ್ವಾಹಕರಿಗೆ ಕೋವಿಡ್ ಲಸಿಕೆ

ಉಡುಪಿ: ಉಡುಪಿ ಜಿಲ್ಲೆಯ ತಾಲೂಕುಗಳಾದ ಉಡುಪಿ, ಕಾಪು, ಬ್ರಹ್ಮಾವರ, ಕುಂದಾಪುರ, ಬೈಂದೂರು, ಹೆಬ್ರಿ, ಕಾರ್ಕಳ, ಈ ಸ್ಥಳಗಳಲ್ಲಿ ವಾಸಿಸುತ್ತಿರುವ 18 ರಿಂದ 44 ವರ್ಷದೊಳಗಿನ ವಯೋಮಿತಿಯ ಬಸ್ಸುಚಾಲಕರು/ನಿರ್ವಾಹಕರು ಹಾಗೂ ಸಹಾಯಕರುಗಳಿಗೆ ಆದ್ಯತೆ ಮೇರೆಗೆ ಉಚಿತ ಕೋವಿಡ್-19 ಲಸಿಕೆಯನ್ನು ನೀಡಲಾಗುವುದು. ಈ ಹಿನ್ನಲೆಯಲ್ಲಿ ಎಲ್ಲಾ ಬಸ್ಸು ಮಾಲಕರುಗಳು ತಮ್ಮ ಸಂಘದ ಮೂಲಕ, ಮಾಲಕರುಗಳು ಪ್ರಪತ್ರ-3 ರಲ್ಲಿ ಅರ್ಜಿಗಳನ್ನು ಕ್ರೋಢಿಕರಿಸುವ ಮೂಲಕ, ಅಥವಾ ಭಾರೀ ಮಜಲು ವಾಹನ (ಬಸ್ಸು) ಚಾಲಕರುಗಳು/ ನಿರ್ವಾಹಕರುಗಳು ಹಾಗೂ ಸಹಾಯಕರುಗಳು ಖುದ್ದಾಗಿ ಭಾವಚಿತ್ರ ಹೊಂದಿರುವ ಆಧಾರ್ […]

ವಿಶ್ವ ತಂಬಾಕು ರಹಿತ ದಿನ: ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಿ

ಉಡುಪಿ: ಪ್ರತಿ ವರ್ಷ “ಮೇ 31 ರಂದು ವಿಶ್ವ ತಂಬಾಕು ರಹಿತ ದಿನ” ಎಂದು ಆಚರಿಸಲಾಗುತ್ತಿದ್ದು, 2021 ರ ಧ್ಯೇಯ ವಾಕ್ಯ “ತ್ಯಜಿಸಲು ಬದ್ಧರಾಗಿ” Commit to Quit ಎಂಬುದಾಗಿದ್ದು , ಈ ವಿಷಯದ ಕುರಿತಂತೆ, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಇದರ ವತಿಯಿಂದ Online ಮೂಲಕ ಪ್ರಬಂಧ ಸ್ಪರ್ಧೆ  ಏರ್ಪಡಿಸಿದ್ದು, ಆಸಕ್ತಿಯುಳ್ಳವರು ಈ ಕೆಳಗಿನ http://chat.whatsapp.com/IMY3qObmEFVSbN6098Gf  Whatsapp group link join […]

11 ಜಿಲ್ಲೆ ಹೊರತುಪಡಿಸಿ ರಾಜ್ಯದ ಉಳಿದೆಡೆ ಲಾಕ್‌ಡೌನ್ ಸಡಿಲಿಕೆ

ಬೆಂಗಳೂರು: ಪಾಸಿಟಿವಿಟಿ ರೇಟ್ ಹೆಚ್ಚಿರುವ ರಾಜ್ಯದ 11 ಜಿಲ್ಲೆಗಳಲ್ಲಿ ಲಾಕ್‌ಡೌನ್ ಮುಂದುವರಿಯಲಿದ್ದು, ಉಳಿದ ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಗೊಳಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಬೆಂಗಳೂರು ಗ್ರಾಮಾಂತರ, ಮೈಸೂರು, ಕೊಡಗು, ಚಿಕ್ಕಮಗಳೂರು, ಹಾಸನ, ಮಂಡ್ಯ, ಚಾಮರಾಜನಗರ, ದಕ್ಷಿಣ ಕನ್ನಡ, ಬೆಳಗಾವಿ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಈಗಿರುವ ಲಾಕ್ ಡೌನ್ ಮುಂದುವರಿಯಲಿದೆ ಎಂದು ಹೇಳಿದರು. ಯಾವುದಕ್ಕೆ ಅವಕಾಶ: ಎಲ್ಲ ಕಾರ್ಖಾನೆಗಳಲ್ಲಿ ಶೇ. 50, ಗಾರ್ಮೆಂಟ್‌ನಲ್ಲಿ ಶೇ.30ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ. […]

ಉಡುಪಿ: ಕೊರೊನಾ ಸೋಂಕು ಇಳಿಮುಖ; ಇಂದಿನ ಕೊರೊನಾ ಪ್ರಕರಣಗಳ ವಿವರ

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಇಳಿಕೆ ಕಂಡಿದ್ದು, ಇಂದು (ಜೂನ್ 10) 289 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಉಡುಪಿ ತಾಲೂಕಿನಲ್ಲಿ 126, ಕುಂದಾಪುರ ತಾಲೂಕಿನಲ್ಲಿ 122, ಕಾರ್ಕಳ ತಾಲೂಕಿನಲ್ಲಿ‌ 40 ಹಾಗೂ ಹೊರ ಜಿಲ್ಲೆಯ 1 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 3812 ಇಳಿದಿದೆ. ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದು, ಉಡುಪಿ ತಾಲೂಕಿನ 75 ವರ್ಷದ ವೃದ್ಧ ಹಾಗೂ ಕಾರ್ಕಳ ತಾಲೂಕಿನ 72 ವರ್ಷದ ವೃದ್ಧೆ […]