ಸಮಾಜಕಾರ್ಯ ಶಿಕ್ಷಣದಲ್ಲಿದೆ ಬೇಕಾದಷ್ಟು ಅವಕಾಶ : ಪಿಯುಸಿ ನಂತರ ನಿಮಗೊಂದು ಬೆಸ್ಟ್ ಆಯ್ಕೆ!
ಸಮಾಜ ಸೇವೆಗೆ ಪ್ರಾಮುಖ್ಯತೆ ವಿಶ್ವದೆಲ್ಲೆಡೆ ಇದೆ. ಆ ನಿಟ್ಟಿನಲ್ಲಿ ಭಾರತವು ಹೊರತಾಗಿಲ್ಲ. ಇತಿಹಾಸದ ಪುಟಗಳ ತಿರುವಿದರೆ ದಾನ, ದತ್ತಿ ನಮ್ಮ ಸನಾತನ ಪರಂಪರೆಯಲ್ಲೇ ಹಾಸು ಹೊಕ್ಕಾಗಿದೆ. ಆದರೆ ಸಮಾಜ ಸೇವೆಗೂ -ಸಮಾಜ ಕಾರ್ಯಕ್ಕೂ ವ್ಯತ್ಯಾಸ ಇದೆ. ಸಮಾಜ ಕಾರ್ಯವನ್ನೂ ಸಮಾಜ ಸೇವೆ ಎಂದು ತಪ್ಪಾಗಿ ಭಾವಿಸುವುದು ತೀರಾ ಸಾಮಾನ್ಯ. ಸಮಾಜ ಸೇವೆ -ಸಮಾಜ ಕಾರ್ಯ ಎರಡರಲ್ಲೂ ಹೋಲಿಕೆ ಆಗುವ ಅಂಶ ಸಮಾಜದ ಏಳಿಗೆಯೇ ಆಗಿದ್ದರೂ ರೂಪುರೇಷೆಗಳು ವಿಭಿನ್ನ. ಸಮಾಜ ಕಾರ್ಯ ಎನ್ನುವಂತದ್ದು ಒಂದು ಪ್ರೊಫೆಷನಲ್ ಕೋರ್ಸ್. ಅಂದರೆ […]
ಹಲಸಿನಹಣ್ಣಿನ ಪಾಯಸದಲ್ಲೂ ಇದೆ ಔಷಧೀಯ ಗುಣ!
ಪ್ರಕೃತಿಯಲ್ಲಿ ದೊರಕುವ ಎಲ್ಲಾ ಹಣ್ಣುಗಳ ಪೈಕಿ ಹಲಸಿನಹಣ್ಣು ಒಂದು ಉತ್ತಮ ಹಣ್ಣಾಗಿದೆ. ಇದರಲ್ಲಿ ಅನೇಕ ರೀತಿಯ ವಿಶೇಷ ಆರೋಗ್ಯಕರ ಗುಣಗಳಿದೆ. ಹಲಸಿನಹಣ್ಣಿನಲ್ಲಿ ಯಾವುದೇ ರೀತಿಯ ಪೋಷಕಾಂಶ ಇಲ್ಲ, ಹಾಗೂ ಇದನ್ನು ತಿಂದರೆ ಆರೋಗ್ಯ ಹದಗೆಡುತ್ತದೆ ಎನ್ನುವ ತಪ್ಪು ಪರಿಕಲ್ಪನೆ ಜನರಲ್ಲಿ ಇರುವುದರಿಂದ ಹಲಸಿನಹಣ್ಣನ್ನು ದೂರ ಇಡಲು ಕಾರಣವಾಗಿದೆ. ಆದರೆ ಹಲಸಿನಹಣ್ಣಿನಲ್ಲಿ ಅಪಾರ ರೀತಿಯ ಆರೋಗ್ಯಕ್ಕೆ ಬೇಕಾಗಿರುವ ಔಷಧೀಯ ಗುಣಗಳಿದೆ ಎನ್ನುತ್ತಾರೆ ಸಿಲ್ವಿಯಾ ಕೊಡ್ದೆರೋ ಅವರ ಅಂಕಣ ಓದಿ ಹಲಸಿನಹಣ್ಣಿನಲ್ಲಿ ಅಧಿಕಾಂಶ ಪೊಟ್ಯಾಷಿಯಂ ಇರುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಇದರಲ್ಲಿ […]
ರಾಜ್ಯದಲ್ಲಿ ಮುಂದಿನ ವಾರದಿಂದ ಅನ್ ಲಾಕ್ ಪ್ರಕ್ರಿಯೆ ಶುರು: ಕಂದಾಯ ಸಚಿವ ಆರ್. ಅಶೋಕ್
ಬೆಂಗಳೂರು: ರಾಜ್ಯದಲ್ಲಿ ಮುಂದಿನ ವಾರದಿಂದ ಅನ್ಲಾಕ್ ಪ್ರಕ್ರಿಯೆ ಶುರುವಾಗುವುದು ಖಚಿತಗೊಂಡಿದ್ದು, ನಾಲ್ಕರಿಂದ ಐದು ಹಂತಗಳಲ್ಲಿ ಲಾಕ್ ಡೌನ್ ನಿರ್ಬಂಧಗಳನ್ನು ಸಡಿಲಿಸಲು ಸರ್ಕಾರ ನಿರ್ಧರಿಸಿದೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್ ಈ ಬಗ್ಗೆ ಸುಳಿವು ನೀಡಿದರು. ಒಮ್ಮೆಲೆಯೇ ತೆರವುಗೊಳಿಸಿದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆ ಕಾಣುವ ಅಪಾಯವಿದೆ. ಹೀಗಾಗಿ ಹಂತ ಹಂತವಾಗಿ ನಿರ್ಬಂಧಗಳನ್ನು ತೆರವುಗೊಳಿಸಲಾಗುತ್ತದೆ ಎಂದರು. ಮೊದಲ ಹಂತದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ನಿಗದಿಪಡಿಸಿದ ಸಮಯವನ್ನು 12 ಗಂಟೆಯವರೆಗೆ ವಿಸ್ತರಿಸಲಾಗುತ್ತದೆ. ವ್ಯಾಯಾಮ ಮತ್ತು […]
ರಾಹುಲ್ ಗಾಂಧಿ ಆಪ್ತ, ಕಾಂಗ್ರೆಸ್ ನಾಯಕ ಜಿತಿನ್ ಪ್ರಸಾದ್ ಬಿಜೆಪಿ ಸೇರ್ಪಡೆ
ನವದೆಹಲಿ: ರಾಹುಲ್ ಗಾಂಧಿಗೆ ಆಪ್ತರಾಗಿದ್ದ ಕಾಂಗ್ರೆಸ್ ನಾಯಕ ಜಿತಿನ್ ಪ್ರಸಾದ್ ಅವರು ಬುಧವಾರ ಬಿಜೆಪಿಗೆ ಪಕ್ಷಕ್ಕೆ ಸೇರ್ಪಡೆಗೊಂಡರು. ನವದೆಹಲಿಯಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ಸಮ್ಮುಖದಲ್ಲಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಪ್ರತಕ್ರಿಯಿಸಿರುವ ಜಿತಿನ್ ಪ್ರಸಾದ, ಕಾಂಗ್ರೆಸ್ ಜೊತೆ ಮೂರು ತಲೆಮಾರಿನ ಬಾಂಧವ್ಯವನ್ನು ಹೊಂದಿದ್ದೇನೆ. ಆದ್ದರಿಂದ ಈ ಮಹತ್ವದ ನಿರ್ಧಾರವನ್ನು ಸಾಕಷ್ಟು ಚಿಂತನೆಯ ಬಳಿಕೆ ತೆಗೆದುಕೊಂಡಿದ್ದೇನೆ. ಕಳೆದ 8-10 ವರ್ಷಗಳಲ್ಲಿ ನಿಜವಾದ ರಾಷ್ಟ್ರೀಯ ಪಕ್ಷ ಎಂಬುದೊಂದು ಇದ್ದರೆ ಅದು ಬಿಜೆಪಿ, ಇತರೆ […]
ಬಂಟ್ವಾಳ: ಯುವತಿ ನಾಪತ್ತೆ
ಮಂಗಳೂರು: ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಕುಕ್ಕದಕಟ್ಟೆ ನಿವಾಸಿಯಾದ ದೀಕ್ಷಿತಾ (18) ಎಂಬುವರು ಜೂನ್ 6ರಿಂದ ನಾಪತ್ತೆಯಾಗಿದ್ದಾರೆ. ಈಕೆ 18 ವರ್ಷದ ಯುವತಿಯಾಗಿದ್ದು, ದುಂಡು ಮುಖ, ಗೋಧಿ ಬಣ್ಣ ಸಾಧಾರಣಾ ಮೈಕಟ್ಟು ಹೊಂದಿದ್ದಾರೆ. ಕಾಣೆಯಾದ ಸಮಯದಲ್ಲಿ ಕಪ್ಪು ಬಣ್ಣದ ಪ್ಯಾಂಟ್, ಬಿಳಿ ಬಣ್ಣದ ಚೂಡಿದಾರ್ ಟಾಪ್ ಧರಿಸಿದ್ದಾರೆ. ಕನ್ನಡ, ಮಲಯಾಳಂ, ತುಳು ಹಾಗೂ ಇಂಗ್ಲಿಷ್ ಭಾಷೆಗಳನ್ನು ಮಾತನಾಡುತ್ತಾರೆ. ಈ ಚಹರೆಯುಳ್ಳ ಯುವತಿಯ ಪತ್ತೆಯಾದಲ್ಲಿ ಮಂಗಳೂರು ನಗರ ನಿಯಂತ್ರಣ ಕೊಠಡಿ ಅಥವಾ ಕೊಣಾಜೆ ಪೊಲೀಸ್ ಠಾಣೆ ದೂ. ಸಂಖ್ಯೆ: […]