ಮದ್ಯ ಪ್ರಿಯರಿಗೆ ಗುಡ್ ನ್ಯೂಸ್: ಮನೆ ಬಾಗಿಲಿಗೆ ಮದ್ಯ ಡೆಲಿವರಿ ಸೇವೆ

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೋವಿಡ್ ಸೋಂಕು ತೀವ್ರತೆ ಕಡಿಮೆಯಾಗುತ್ತಿದೆ. ಈ ಮಧ್ಯೆ ದೆಹಲಿ ಸರ್ಕಾರ ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡಲು ಒಪ್ಪಿಗೆ ಸೂಚಿಸಿದೆ.

ದೆಹಲಿ ಅಬಕಾರಿ (ತಿದ್ದುಪಡಿ) ಕಾಯ್ದೆ 2021 ಅನ್ನು ಪ್ರಕಟಿಸಲಾಗಿದ್ದು, ಅದರ ಪ್ರಕಾರ ಮದ್ಯ ಪೂರೈಕೆಗೆ ಅನುಮತಿ ಪಡೆದವರು ಗ್ರಾಹಕರ ಮನೆಗೆ ಮದ್ಯ ತಲುಪಿಸಬಹುದು. ಗ್ರಾಹಕರು ಆ್ಯಪ್ ಅಥವಾ ವೆಬ್‌ಸೈಟ್ ಮೂಲಕ ಮದ್ಯ ಬುಕ್ ಮಾಡಬಹುದು ಎಂದು ತಿಳಿಸಿದೆ.

ಅನುಮತಿ ಪಡೆದ ಪೂರೈಕೆದಾರರು ಮನೆ ಮಾತ್ರವಲ್ಲದೆ, ಕ್ಲಬ್, ಬಾರ್ ಮತ್ತು ರೆಸ್ಟೋರೆಂಟ್, ಟೆರೇಸ್‌ಗಳಲ್ಲಿ ಕೂಡ ಮದ್ಯ ಹಂಚಲು ಅನುವು ಮಾಡಿಕೊಡಲಾಗಿದೆ.