ಕುಂದಾಪುರ: ಕೋವಿಡ್ ನಿಯಮ ಉಲ್ಲಂಘಿಸಿ ಮೆಹಂದಿ ಕಾರ್ಯಕ್ರಮ ಆಯೋಜನೆ; ಎಂಟು ಮಂದಿಯ ವಿರುದ್ಧ ಕೇಸ್ ದಾಖಲು

ಕುಂದಾಪುರ: ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಮದುವೆ ಮೆಹಂದಿ ಕಾರ್ಯಕ್ರಮ ಆಯೋಜಿಸಿದ ಘಟನೆ‌ ಕುಂದಾಪುರ ತಾಲೂಕಿನ ಕರ್ಕುಂಜೆ ಗ್ರಾಮದ ಅಸೋಡಿ ಎಂಬಲ್ಲಿ ಮೇ 21ರಂದು ಸಂಜೆ ನಡೆದಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಂಟು ಮಂದಿಯ ಪ್ರಕರಣ ದಾಖಲಾಗಿದೆ. ಕಮ್ರಾಡಿ ನಿವಾಸಿ ಭುಜಂಗ ಶೆಟ್ಟಿ ಎಂಬವರ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ನಡೆದಿತ್ತು. ಸುಮಾರು ಏಳು ಮಂದಿ ಮಾಸ್ಕ್ ಧರಿಸದೇ ಸುರಕ್ಷಿತ ಅಂತರ ಕಾಪಾಡದೇ ಕೋವಿಡ್ ನಿಯಮ ಉಲ್ಲಂಘಿಸಿ ಭಾಗವಹಿಸಿದ್ದಾರೆ ಎನ್ನಲಾದ ವೀಡಿಯೊ ವೈರಲ್ ಆಗಿದೆ. ಈ ಆಧಾರದಲ್ಲಿ ಮನೆ ಮಾಲೀಕ […]

ಉಡುಪಿ: ಮೆಹಂದಿ ಕಾರ್ಯಕ್ರಮಕ್ಕೆ ಅನುಮತಿಯಿಲ್ಲ; ಆಯೋಜಿಸಿದರೆ ಕ್ರಿಮಿನಲ್ ಪ್ರಕರಣ ದಾಖಲು: ಡಿಸಿ ಜಿ. ಜಗದೀಶ್ ಎಚ್ಚರಿಕೆ

ಉಡುಪಿ: ಜಿಲ್ಲೆಯಲ್ಲಿ ಮೆಹಂದಿ ಕಾರ್ಯಕ್ರಮಗಳನ್ನು ನಡೆಸಲು ಯಾವುದೇ ಅನುಮತಿಯನ್ನು ನೀಡಿರುವುದಿಲ್ಲ. ಮೆಹಂದಿ ಕಾರ್ಯಕ್ರಮಗಳನ್ನು ನಡೆಸಿದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿಡಿಯೋ ಮತ್ತು ಫೋಟೋಗ್ರಾಫರ್ ಗಳ ವಿರುದ್ಧ ಕೂಡ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ಉಡುಪಿ: ಬ್ಲ್ಯಾಕ್ ಫಂಗಸ್ ಗೆ ಜಿಲ್ಲೆಯಲ್ಲಿ ಮೊದಲ ಬಲಿ

ಉಡುಪಿ: ಕೋವಿಡ್ ಸೋಂಕಿನ ಆರ್ಭಟದ ಮಧ್ಯೆಯೇ ಕಪ್ಪು ಶಿಲೀಂದ್ರ (ಮ್ಯೂಕರ್ ಮೈಕೋಸಿಸ್) ಸೋಂಕು ಜಿಲ್ಲೆಯಲ್ಲಿ ಮೊದಲ ಬಲಿಯನ್ನು ಪಡೆದುಕೊಂಡಿದೆ. ಸಂತೆಕಟ್ಟೆಯ 76 ವರ್ಷ ಪ್ರಾಯದ ಮಹಿಳೆ ಇಂದು ಬ್ಲ್ಯಾಕ್ ಫಂಗಸ್ ನಿಂದ ಮೃತಪಟ್ಟಿದ್ದಾರೆ. ಇವರು ನಗರದ ಆದರ್ಶ ಆಸ್ಪತ್ರೆಯಲ್ಲಿ ಸೋಂಕಿಗೆ ತುತ್ತಾಗಿ ಕಳೆದೊಂದು ವಾರದಿಂದ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ. ಇದೇ ಆಸ್ಪತ್ರೆಯಲ್ಲಿ ಕಳೆದೆರಡು ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ಪಡುಬಿದ್ರಿ ಸಮೀಪದ ನಂದಿಕೂರಿನ 45 ವರ್ಷದ ಪುರುಷರೊಬ್ಬರು ಚೇತರಿಸಿಕೊಳ್ಳುತ್ತಿದ್ದಾರೆ. ಮಣಿಪಾಲದ […]

ನಿನ್ನೆ ಮೊನ್ನೆ ನಮ್ಮೊಂದಿಗೆ ಹರಟೆ ಹೊಡೆಯುತ್ತಿದ್ದವರು ಈಗಿಲ್ಲ ಅಂದರೆ ನಂಬೋದು ಹೇಗೆ?:ಶ್ರದ್ದಾ ಬರೆದ ಬರಹ

ಜೀವನ ಎಷ್ಟೊಂದು ವಿಚಿತ್ರ ಅಲ್ವಾ? ನಿನ್ನೆ ಮೊನ್ನೆ ಎಲ್ಲಾ ಹಕ್ಕಿಯಂತೆ ಹಾಯಾಗಿ ಹಾರಾಡುತ್ತ ಇದ್ದ ನಾವು ಈಗ ಪಂಜರದ ಹಕ್ಕಿಯಂತೆ ಬಂಧಿಯಾಗಿದ್ದೇವೆ. ಬೆನ್ನು ಹಿಡಿದ ಬೇತಾಳನಂತೆ ಈ ರೋಗ  ನಮ್ಮನ್ನು ಹಿಂಬಾಲಿಸುತ್ತಿದೆ. ಇತ್ತೀಚೆಗೆ ಮಳೆಗಾಲದ ಹೊತ್ತಿನಲ್ಲಿ ಬರುವ ಶೀತ ಜ್ವರಗಳಿಗೂ ಕರೋನಾ ಎನ್ನುವಂತಾಗಿದೆ. ಜನರು ಈ ವೈರಸ್ ಗೆ ಎಷ್ಟು ಬೆಂದು ಹೋಗಿದ್ದಾರೆ ಎಂದರೆ ಸಾಮಾನ್ಯ ಜ್ವರಕ್ಕೂ ಮದ್ದು ತರಲು ಹೋಗಲು ಹಿಂದೆ ಮುಂದೆ ನೋಡುತ್ತಾರೆ. ಇತ್ತೀಚೆಗೆ ಹಳ್ಳಿ ಪ್ರದೇಶದ ಬಡಕುಟುಂಬಗಳಿಗೆ ಕೊರೋನಾ ವೈರಸ್ ಗೆ ತುತ್ತಾಗುತ್ತಿದ್ದಾರೆ. […]

ಠಾಣೆಯಲ್ಲಿ ಹುಟ್ಟುಹಬ್ಬ ಆಚರಿಸಿದ 10 ಪೊಲೀಸರಿಗೆ ಕೊರೊನಾ ಪಾಸಿಟಿವ್; ಪಡುಬಿದ್ರಿ ಠಾಣೆ ಸೀಲ್ ಡೌನ್

ಕಾಪು: ಪಡುಬಿದ್ರಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಸಹಿತ 10 ಪೊಲೀಸರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ‌ ಪಡುಬಿದ್ರಿ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಪೊಲೀಸರಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಡುಬಿದ್ರಿ ಪೊಲೀಸ್ ಠಾಣೆಯನ್ನು 24 ಗಂಟೆಗಳ ಕಾಲ ಸೀಲ್ ಡೌನ್ ಮಾಡಲಾಗಿದ್ದು, ಠಾಣೆಯನ್ನು ಪಕ್ಕದ ಬೋರ್ಡ್ ಶಾಲೆಗೆ ಸ್ಥಳಾಂತರಿಸಲಾಗಿದೆ. ಠಾಣೆಯಲ್ಲಿ‌ ಕೆಲವು ದಿನಗಳ ಹಿಂದೆ ಪೊಲೀಸರೊಬ್ಬರ ಹುಟ್ಟುಹಬ್ಬದ ಪ್ರಯುಕ್ತ ಔತಣಕೂಟ ಏರ್ಪಡಿಸಲಾಗಿತ್ತು. ಈ ಸಮಾರಂಭ ನಡೆದ ವಾರದೊಳಗೆ ಸಿಬ್ಬಂದಿಯೊಬ್ಬರಿಗೆ ಜ್ವರ ಕಾಣಿಸಿಕೊಂಡಿದ್ದು, ಕೋವಿಡ್ ಪರೀಕ್ಷೆ […]