ಉಡುಪಿ: ಭಟ್ರ ಹೋಟೆಲ್ ಖ್ಯಾತಿಯ‌ ಭಟ್ರು ಇನ್ನಿಲ್ಲ

ಉಡುಪಿ: ಉಡುಪಿಯಲ್ಲಿ ‘ಭಟ್ರ ಹೋಟೆಲ್‌’ ಎಂದೇ ಪ್ರಸಿದ್ಧಿ ಪಡೆದಿರುವ ಹೋಟೆಲ್ ಮಾಲೀಕ ಶ್ರೀನಿವಾಸ್ ರಾವ್ (56) ಅವರು ಕೊರೊನಾ ಸೋಂಕಿನಿಂದ ನಿಧನ ಹೊಂದಿದರು. ಉಡುಪಿಯ ಮೆಸ್ಕಾಂ ಬಳಿ ಅವರು ಹೋಟೆಲ್ ನಡೆಸುತ್ತಿದ್ದರು. ಅವರು ಕೋವಿಡ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಉಡುಪಿ: ಇಂದು 962 ಮಂದಿಗೆ ಕೊರೊನಾ ಪಾಸಿಟಿವ್; 5 ಮಂದಿ ಮೃತ್ಯು

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಆರ್ಭಟ ಮುಂದುವರಿದಿದ್ದು, ಭಾನುವಾರ ಕೂಡ ಜಿಲ್ಲೆಯಲ್ಲಿ 962 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 6372ಕ್ಕೆ ಏರಿಕೆಯಾಗಿದೆ. ಉಡುಪಿ ತಾಲ್ಲೂಕಿನಲ್ಲಿ 309, ಕುಂದಾಪುರದಲ್ಲಿ 266, ಕಾರ್ಕಳದಲ್ಲಿ 384 ಹಾಗೂ ಹೊರ ಜಿಲ್ಲೆಯ 3 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಮೇ 8ರಂದು 2550 ಮಂದಿಯನ್ನು ಕೊರೊನಾ ಪರೀಕ್ಷೆ ಒಳಪಡಿಸಲಾಗಿದೆ. 543 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 5 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಉಡುಪಿ ತಾಲೂಕಿನ 58, […]

ಕೊರೊನಾ ಲಕ್ಷಣ ಕಂಡುಬಂದ ಕೂಡಲೇ ಟೆಸ್ಟ್ ಮಾಡಿಸಿಕೊಳ್ಳಿ: ಮನೆಯಿಂದ ನೇರವಾಗಿ ಆಸ್ಪತ್ರೆಗೆ ಬಂದರೆ ಬೆಡ್ ಒದಗಿಸಲು ಆಗಲ್ಲ; ಡಿಸಿ ಎಚ್ಚರಿಕೆ

ಉಡುಪಿ: ಕೊರೊನಾ ಲಕ್ಷಣ ಕಂಡುಬಂದ ಕೂಡಲೇ ಟೆಸ್ಟ್ ಗೆ ಒಳಪಡಬೇಕು. ಸೋಂಕು ಉಲ್ಬಣಗೊಂಡ ಬಳಿಕ ಮನೆಯಿಂದ ನೇರವಾಗಿ ಆಸ್ಪತ್ರೆಗೆ ಬಂದರೆ, ಅಂತಹ ರೋಗಿಗಳಿಗೆ ವೆಂಟಿಲೇಟರ್ ಬೆಡ್ ಒದಗಿಸಲು ಆಗುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶೇ.90ರಷ್ಟು ಮಂದಿಗೆ ಆಸ್ಪತ್ರೆಯ ಅಗತ್ಯ ಇರುವುದಿಲ್ಲ. ಕೇವಲ ಶೇ.10 ಮಂದಿಗೆ ಮಾತ್ರ ಅಗತ್ಯ ಇರುತ್ತದೆ. ಅಂತಹ ಶೇ.10 ಮಂದಿಗೆ ಜಿಲ್ಲಾಡಳಿತ ಬೆಡ್ ಕೊಡಲು ಸಿದ್ಧ ಇದೆ. ಅದರಲ್ಲಿ ಶೇ.1 ಮಂದಿಗೆ ಐಸಿಯು ಮತ್ತು ಶೇ.2ರಷ್ಟು […]

ಬಾನಿನಲಿ ಚೆಲುವಿನ ಚಿತ್ತಾರ: ಪ್ರತಾಪ್ ಶೆಟ್ಟಿ ನೀರೆ ಕ್ಲಿಕ್ಕಿಸಿದ ಚಿತ್ರಗಳು

ಬಾನಿನಲಿ ಮೂಡುವ ಚೆಲುವಿನ ಚಿತ್ತಾರಗಳನ್ನು ನೋಡುವುದೇ ಚೆಂದ. ಕಾರ್ಕಳ ತಾಲೂಕಿನ ನೀರೆಯ ಪ್ರತಾಪ್ ಶೆಟ್ಟಿ ಅವರ ಕ್ಯಾಮರಾ ಕಣ್ಣುಗಳಲ್ಲಿ ಬಾನಿನ ಚೆಲುವನ್ನು ಬಿಂಬಿಸುವ ಚಿತ್ರಗಳು ಸೆರೆಯಾಗಿದೆ. ಪ್ರತಾಪ್ ಶೆಟ್ಟಿ ಹಿರಿಯಡ್ಕದ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿ. ನಟನೆ, ಡ್ಯಾನ್ಸ್ ,ಸಂಗೀತ  ಇವರ ಪ್ರೀತಿಯ ಹವ್ಯಾಸ. ಆಲ್ಬಮ್ ಸಾಂಗ್ ನಲ್ಲಿ ನಾಯಕ ನಟನಾಗಿಯೂ ಪ್ರತಾಪ್ ನಟಿಸಿದ್ದಾರೆ. ಫೋಟೋಗ್ರಫಿಯೂ ಇವರ ನೆಚ್ಚಿನ ಹವ್ಯಾಸ.ಇನ್ನಷ್ಟು ಕ್ರಿಯಾಶೀಲವಾಗಿ  ಫೋಟೋಗ್ರಫಿಯಲ್ಲಿ ತೊಡಗುವ ಕನಸು ಇವರದ್ದು. ಅವರು ಕ್ಲಿಕ್ಕಿಸಿದ ಕೆಲವು ಚಿತ್ರಗಳು ಇಲ್ಲಿವೆ ನೋಡಿ (ನೀವು ಕ್ಲಿಕ್ಕಿಸಿದ […]

ಅಸ್ಸಾಂ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವಾ ಶರ್ಮಾ ಆಯ್ಕೆ

ಗುವಾಹಟಿ: ಅಸ್ಸಾಂ ರಾಜ್ಯದ ಮುಖ್ಯಮಂತ್ರಿ‌ ಯಾರಾಗುತ್ತಾರೆಂಬ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಹಾಲಿ ಸಿಎಂ ಸರ್ಬಾನಂದ ಸೊನೊವಾಲ್ ಹಾಗೂ‌ ಹಿಮಂತ ಬಿಸ್ವ ಶರ್ಮಾ ನಡುವೆ ಸಿಎಂ ಹುದ್ದೆಗೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆದರೆ, ಬಿಜೆಪಿ ಹೈಕಮಾಂಡ್ ಹಿಮಂತ ಬಿಸ್ವಾ ಶರ್ಮಾ (52) ಅವರನ್ನು ಅಸ್ಸಾಂನ ನೂತನ ಮುಖ್ಯಮಂತ್ರಿಯನ್ನಾಗಿ‌ ಘೋಷಿಸಿದೆ. ಹಿಮಂತ ಬಿಸ್ವ ಶರ್ಮಾ ಇಂದು ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕನಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 2015ರ ವರೆಗೂ ಕಾಂಗ್ರೆಸ್‌ನಲ್ಲಿದ್ದ ಶರ್ಮಾ, ಅನಂತರ ಬಿಜೆಪಿಗೆ ಸೇರ್ಪಡೆಯಾದರು. ಅವರೊಂದಿಗೆ ಕಾಂಗ್ರೆಸ್‌ನ ಹಲವು ಶಾಸಕರು […]