ಆತ್ರಾಡಿ: ಸರಣಿ ಅಪಘಾತ; ಬೈಕ್ ಸವಾರರಿಬ್ಬರು ಗಂಭೀರ
ಹಿರಿಯಡಕ: ಕಾರು ಚಾಲಕ ಮಾಡಿದ ಎಡವಟ್ಟಿನಿಂದ ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಆತ್ರಾಡಿ-ಮದಗ ರಸ್ತೆಯಲ್ಲಿ ಇಂದು ಸಂಜೆ ಸಂಭವಿಸಿದೆ. ಕಾರು ಚಾಲಕ ಹಿಡನ್ ವುಡ್ ರೆಸ್ಟೋರೆಂಟ್ ರಸ್ತೆಯಿಂದ ಏಕಾಏಕಿಯಾಗಿ ಕಾರನ್ನು ಆತ್ರಾಡಿ-ಮದಗ ಹೆದ್ದಾರಿ ರಸ್ತೆಗೆ ಇಳಿಸಿದ ಪರಿಣಾಮ ಹಿರಿಯಡಕ ಕಡೆಗೆ ಹೋಗುತ್ತಿದ್ದ ಸ್ಕೂಟರ್ ಸವಾರೆ ನಿಯಂತ್ರಣ ಕಳೆದುಕೊಂಡು ಕಾರಿಗೆ ಡಿಕ್ಕಿ ಹೊಡೆದು, ಬಳಿಕ ಎದುರಿನಿಂದ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಸ್ಕೂಟರ್ ಸವಾರೆ ಹಾಗೂ ಬೈಕ್ ಸವಾರರಿಬ್ಬರು […]
ಮಣಿಪಾಲದ ರೀಮ್ ಬ್ರ್ಯಾಂಡ್ ಉತ್ಪನ್ನಗಳು ಶೀಘ್ರವೇ ಮಾರುಕಟ್ಟೆಗೆ ಎಂಟ್ರಿ! ಯಾವುದೆಲ್ಲಾ ಐಟಂ ಇದೆ?
ಮಣಿಪಾಲ: ಅಂತಾರಾಷ್ಟ್ರೀಯ ಗುಣಮಟ್ಟದ ಉತ್ಪನ್ನಗಳನ್ನು ಸ್ಥಳೀಯ ಜನರಿಗೆ ಕೈಗೆಟುಕುವ ದರದಲ್ಲಿ ಒದಗಿಸುವ ಉದ್ದೇಶದೊಂದಿಗೆ ಮಣಿಪಾಲದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಸ್ಥಾಪಿತವಾದ ‘ರೀಮ್ ಕಂಪೆನಿ’ಯ ಉತ್ಪನ್ನಗಳು ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧವಾಗಿವೆ. ದಿನನಿತ್ಯದ ಗೃಹಬಳಕೆಗೆ ಉಪಯೋಗವಾಗುವಂತಹ ಹ್ಯಾಂಡ್ ಮತ್ತು ಡಿಶ್ ವಾಷ್, ಪ್ಲೋರ್ ಕ್ಲೀನರ್, ಫಿನೈಲ್ ಮೊದಲಾದ ಸುಗಂಧಭರಿತ ಉತ್ಪನ್ನಗಳು ಇಲ್ಲಿ ತಯಾರಾಗುತ್ತಿದೆ. ಗೃಹ ಬಳಕೆ ಉತ್ಪನ್ನ ಲಭ್ಯ: ಮನೆಗಳಲ್ಲಿ ದಿನನಿತ್ಯ ಬಳಕೆಯಾಗುವಂತಹ ಬ್ರ್ಯಾಂಡ್ ನ ಟಾಯ್ಲೆಟ್ ಕ್ಲೀನರ್, ಪರ್ಪ್ಯೂಮ್ಡ್ ಪ್ಲೋರ್ ಸರ್ಫೇಸ್ ಕ್ಲೀನರ್, ಡಿಶ್ ವಾಷ್ ಲಿಕ್ವಿಡ್, […]
ಬಡವರು ಹಾಗೂ ಮಧ್ಯಮ ವರ್ಗದ ಪ್ರತಿ ಕುಟುಂಬಕ್ಕೂ ಕನಿಷ್ಠ ಆದಾಯ ಘೋಷಿಸಿ: ರಾಕೇಶ್ ಬಿರ್ತಿ
ಉಡುಪಿ: ದೇಶದಾದ್ಯಂತ ಕೋವಿಡ್ ಎರಡನೆ ಅಲೆ ಭೀಕರತೆಯನ್ನು ಸೃಷ್ಟಿಸುತ್ತಿದ್ದು, ಇದರ ನಿಯಂತ್ರಣಕ್ಕೆ ಲಾಕ್ ಡೌನ್ ನಿರ್ಧಾರ ಸೂಕ್ತ. ಆದರೆ, ಇದರಿಂದ ಬಡವರು ಹಾಗೂ ಮಧ್ಯಮ ವರ್ಗದವರಿಗೆ ತುಂಬಾ ಆರ್ಥಿಕ ಹೊರೆ ಬೀಳಲಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಪ್ರತಿ ಕುಟುಂಬಕ್ಕೂ ಕನಿಷ್ಠ ಆದಾಯ ಘೋಷಣೆ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಎಂದು ರಾಕೇಶ್ ಬಿರ್ತಿ ಆಗ್ರಹಿಸಿದ್ದಾರೆ. ಈ ಹಿಂದಿನ ಲಾಕ್ ಡೌನ್ ನಿಂದಾಗಿಯೇ ಇನ್ನೂ ಕೂಡ ಮಧ್ಯಮ ಮತ್ತು ಸಣ್ಣ ಪ್ರಮಾಣದ ಉದ್ಯಮಿಗಳು ಚೇತರಿಸಿಕೊಂಡಿಲ್ಲ. ಇದೀಗ ಅವರನ್ನು ಕೋವಿಡ್ […]
ಬಿಜೆಪಿ ಯುವಮೋರ್ಚಾ ಕಾಪು ಮಂಡಲದಿಂದ ರಕ್ತದಾನ ಕಾರ್ಯಕ್ರಮ
ಕಾಪು: ಬಿಜೆಪಿ ಯುವಮೋರ್ಚಾ ಕಾಪು ಮಂಡಲ ಇದರ ವತಿಯಿಂದ ಯುವಮೋರ್ಚಾದ ಅಧ್ಯಕ್ಷ ಸಚಿನ್ ಸುವರ್ಣ ಅವರ ನೇತೃತ್ವದಲ್ಲಿ ಬೃಹತ್ ರಕ್ತದಾನ ಕಾರ್ಯಕ್ರಮವು ಉಡುಪಿ ಅಜ್ಜರಕಾಡಿನ ಸರ್ಕಾರಿ ಆಸ್ಪತ್ರೆಯ ರಕ್ತನಿಧಿಯಲ್ಲಿ ನಡೆಯಿತು. ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಶ್ರೀಕಾಂತ ನಾಯಕ್, ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷ ವಿಜೇತ್ ಬೆಳ್ಳರ್ಪಾಡಿ, ಮಂಡಲ ಯುವಮೋರ್ಚಾದ ಉಪಾಧ್ಯಕ್ಷ ರಾಘವೇಂದ್ರ ಮಾಂಬೆಟ್ಟು, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಕಿಶನ್ ಅಲೆವೂರು ಹಾಗೂ ಪ್ರವೀಣ್ ಅಡ್ವೆ, ಕೋಶಾಧಿಕಾರಿ ಸನತ್ ಮಣಿಪುರ, ಮಹೇಶ್ ಶೆಟ್ಟಿ ಪಲಿಮಾರು, ಅರುಣ್ ಆಚಾರ್ಯ ಅಲೆವೂರು, […]
ಭಾರತದ ನೆರವಿಗೆ ನಿಂತ ಗೂಗಲ್ ಸಿಇಒ ಸುಂದರ್ ಪಿಚೈ: ₹ 135 ಕೋಟಿ ನೆರವು
ನವದೆಹಲಿ: ಕೋವಿಡ್ ಎರಡನೇ ಅಲೆಗೆ ಸಿಲುಕಿ ನಲಗುತ್ತಿರುವ ಭಾರತಕ್ಕೆ ಗೂಗಲ್ ಸಿಇಒ ಸುಂದರ್ ಪಿಚೈ ನೆರವಿನ ಹಸ್ತ ಚಾಚಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸುಂದರ್ ಪಿಚೈ ಅವರು, ಭಾರತದಲ್ಲಿನ ಕೋವಿಡ್-19 ಸಾಂಕ್ರಾಮಿಕದ ಪರಿಸ್ಥಿತಿ ನೋಡಿ ಮನಸ್ಸು ಒಡೆದುಹೋದಂತಾಗಿದೆ. ಗೂಗಲ್ ಈ ಕೂಡಲೇ ಭಾರತಕ್ಕೆ ವೈದ್ಯಕೀಯ ಸರಬರಾಜು, ಹೆಚ್ಚಿನ ಅಪಾಯದಲ್ಲಿರುವ ಸಮುದಾಯಗಳನ್ನು ಬೆಂಬಲಿಸುವ ಉದ್ದೇಶದಿಂದ ಮತ್ತು ನಿರ್ಣಾಯಕ ಮಾಹಿತಿಯನ್ನು ಹರಡಲು ಸಹಾಯ ಮಾಡುವ ಉದ್ದೇಶದಿಂದ 135 ಕೋಟಿ ರೂ ಅನುದಾನ ನೀಡಲಿದೆ ಎಂದಿದ್ದಾರೆ.